ಸರಗೂರು: ಶಾಲೆಯು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ, ಇಲ್ಲಿನ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಜಿಎಂಟಿ ಸಂಯೋಜಕ ಲಯನ್ಸ್ ಜಯಕುಮಾರ್ ತಿಳಿಸಿದರು.
ಪಟ್ಟಣದ ಲಯನ್ಸ್ ಅಕಾಡೆಮಿ ಶಾಲೆಯಲ್ಲಿ ಇತ್ತೀಚೆಗೆ ನಡೆದ 36ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಸೌರಭ 36 ರ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಸಂಸ್ಥೆಯ ರೀತಿ ಹಲವು ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ ಶಾಲೆಯು ಕೇವಲ ಶೈಕ್ಷಣಿಕ ಸೇವೆಯನ್ನು ಅಷ್ಟೇ ಅಲ್ಲದೆ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರಲ್ಲದೇ, ನಾನೂ ಸಹ ಶಾಲೆಯ ನೂತನ ಕಟ್ಟಡಕ್ಕೆ 50 ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಲಯನ್ಸ್ ಅಕಾಡೆಮಿ ಶಾಲೆಯ ಕಾರ್ಯದರ್ಶಿ ಲಯನ್ ಎಸ್.ಎಸ್.ಪ್ರಭುಸ್ವಾಮಿ ಪ್ರಾಸ್ತವಿಕ ನುಡಿ ನುಡಿದು, ನಮ್ಮ ಶಾಲೆಯು ತಾಲೂಕಿನಲ್ಲಿಯೇ ಉತ್ತಮ ಆಂಗ್ಲ ಮಾಧ್ಯಮದ ಪ್ರಥಮ ಶಾಲೆಯಾಗಿ ಜನ್ಮ ತಾಳಿತು. ಕಳೆದ 36 ವರ್ಷಗಳಿಂದ ನಮ್ಮ ಲಯನ್ಸ್ ಸಂಸ್ಥೆಯು ಸಮಾಜಕ್ಕೆ ತನ್ನದೇ ಆದ ರೀತಿಯಲ್ಲಿ ಶೈಕ್ಷಣಿಕ ಸೇವೆ ಅಲ್ಲದೆ ಆರೋಗ್ಯ ಸೇವೆಯನ್ನು ಕೂಡ ನೀಡುತ್ತಿದೆ ಎಂದರು.
ನಮ್ಮ ಶಾಲೆಯು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕಡಿಮೆ ಶುಲ್ಕದ ಶಿಕ್ಷಣ ನೀಡುತ್ತಿದ್ದೇವೆ. ಇದನ್ನು ಅರಿತು ನಮ್ಮ ತಾಲೂಕಿನ ಜನಪ್ರಿಯ ಶಾಸಕ ಅನಿಲ್ ಚಿಕ್ಕಮಾದುರವರು 10 ಲಕ್ಷ ರೂಪಾಯಿಗಳನ್ನು ಅನುದಾನವಾಗಿ ನೀಡಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ, ಇವರಿಗೆ ನಮ್ಮ ಶಾಲೆಯ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಸ್ಮರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಫ್ ಸಂತೇ ಸರಗೂರು ಅಧ್ಯಕ್ಷ ಲಯನ್ ಎಸ್.ಬಿ.ನಾಗರಾಜು ವಹಿಸಿ ಮಾತನಾಡಿ, ನಮ್ಮ ಶಾಲೆಯು ಉತ್ತಮ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಿ ಸಮಾಜಕ್ಕೆ ಮಾದರಿಯಾಗಿದೆ ಇಂತಹ ಶಾಲೆಗೆ ತನು ಮನ ಧನ ವನ್ನು ಅರ್ಪಿಸಿ ದುಡಿಯುತ್ತಿರುವ ಬ್ರಹ್ಮದೇವಯ್ಯರವರಿಗೆ ಅಭಿನಂಧನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಕುಸುಮಾ ವಿಜಯಕುಮಾರ್, ಪಿಎಸ್ಟಿ ಪೋರಮ್ ಅಧ್ಯಕ್ಷ ಲಯನ್ ಸಿದ್ದೇಗೌಡ ಮಾತನಾಡಿ ನೂತನವಾಗಿ ಕಟ್ಟುವ ಶಾಲಾ ಕಟ್ಟಡಕ್ಕೆ 25 ಸಾವಿರ ರೂಪಾಯಿಗಳನ್ನು ನೀಡುತ್ತೇನೆ ಎಂದರು .
ಡಿಸಿಎಸ್ ಲಯನ್ ಟಿ.ಹೆಚ್.ವೆಂಕಟೇಶ್ ಶಾಲಾ ಪೋಷಕ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಉದ್ಯಮಿ ರವಿ ಸಹಾಯಧನವನ್ನು ನೀಡುತ್ತವೆ ಎಂದು ಭರವಸೆ ನೀಡಿ ಮಾತನಾಡಿದರು.
ಇದೆ ವೇದಿಕೆಯಲ್ಲಿ ಸರಗೂರು ತಾಲ್ಲೂಕಿಗೆ 24–25 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ನಮ್ಮದೇ ಶಾಲೆಯ ನಾಲ್ಕು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚೈತ್ರ ಸ್ವಾಮಿ, ಲಯನ್ ವಾಸುಕಿ, ಲಯನ್ ಶಶಿಕುಮಾರ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ವೀರೇಶ್, ಮ್ಯಾನೇಜಿಂಗ್ ಟ್ರಸ್ಟಿ ಬ್ರಹ್ಮದೇವಯ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ವಿನಾಯಕ ಪ್ರಸಾದ್, ಲಯನ್ಸ್ ಅಕಾಡೆಮಿ ಶಾಲೆಯ ಖಜಾಂಚಿ ಲಯನ್ ಎಸ್ ವಿ ಯೋಗೀಶ್, ಮಾಜಿ ಅಧ್ಯಕ್ಷರುಗಳಾದ ಲಯನ್ ಎಸ್ ಎಸ್ ಸೋಮ ಪ್ರಭ, ಲಯನ್ ಎಸ್ ನಾರಾಯಣ, ಲಯನ್ ಎಸ್.ಎನ್.ಮೋಹನ್ ಕುಮಾರ್, ಲಯನ್ ಕೆ.ಸುರೇಶ್ ಜೈನ್, ಶಾಲೆಯ ಪ್ರಾಂಶುಪಾಲ ಬಿ.ಡಿ.ದಾಸಾಚಾರಿ, ಮುಖ್ಯ ಶಿಕ್ಷಕಿ ಪದ್ಮಶ್ರೀ ಶಾಲಾ ಮಂತ್ರಿಮಂಡಳದ ಮುಖ್ಯಮಂತ್ರಿ ಎನ್. ಚಿರಾಗ್, ಪೋಷಕ ಸಮಿತಿಯ ಸರ್ವ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇನ್ನಿತರರು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


