ಮೈಸೂರು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಏಕಕಾಲದಲ್ಲಿ ಏಳು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರಿಂದ ದಾಳಿಯಾಗಿದೆ. ಸಣ್ಣ ನೀರಾವರಿ ಇಲಾಖೆ ಜೆಇ ರಫೀಕ್ ಮನೆ ಹಾಗೂ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಮೂರು ಕಡೆಗಳಲ್ಲಿ ದಾಖಲೆಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ರಫೀಕ್ ಮಡಿಕೇರಿಯ ಸಣ್ಣ ನೀರಾವರಿ ಇಲಾಖೆಯಲ್ಲಿ ಜೆಇ ಆಗಿದ್ದಾರೆ.
ಮಡಿಕೇರಿ ಪಿಡಬ್ಲ್ಯೂಡಿ ಇಇ ನಾಗರಾಜ್ ಮನೆ ಮೇಲೂ ದಾಳಿಯಾಗಿದ್ದು, ಮೈಸೂರಿನಲ್ಲಿರುವ ನಿವಾಸದಲ್ಲಿ ಲೋಕಾಯುಕ್ತ ಪೊಲಿಸರು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೆಯೇ ಕುಶಾಲನಗರ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಮನೆ ಮೇಲೂ ದಾಳಿಯಾಗಿದೆ. ಇನ್ಸ್ ಪೆಕ್ಟರ್ ಮಹೇಶ್ ಇಂಟೆಲಿಜೆನ್ಸಿ ವಿಭಾಗಕ್ಕೆ ವರ್ಗಾವಾದರೂ ಹೋಗದೆ ಇದ್ದರು ಎನ್ನಲಾಗಿದೆ.
ಮೈಸೂರು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿಯಾಗಿದ್ದು, ಡಿವೈಎಸ್ ಪಿ ಮಾಲತೇಶ್, ಪವನ್, ಸಣ್ಣ ತಮ್ಮಪ್ಪ ಒಡೆಯರ್, ಕೃಣ್ಣಯ್ಯ ನಾಲ್ವರು ಡಿವೈಎಸ್ ಪಿ
ಇನ್ಸ್ ಪೆಕ್ಟರ್ ಲೋಕೇಶ್ವರ, ರವಿಕುಮಾರ್, ಶಶಿಕುಮಾರ್, ಉಮೇಶ್, ಜಯರತ್ನ, ರೂಪಶ್ರೀ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


