ಚಿತ್ತಾಪುರ: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ದುರ್ಮರಣ ಹೊಂದಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಜಲಕರ್ಟಿ-ಲಡ್ಪಾಪುರ ಮಧ್ಯೆ ನಡೆದಿದೆ.
ವಾಡಿ ಪಟ್ಟಣದ ಜಾಂಬವೀರ ಕಾಲೋನಿ ನಿವಾಸಿ ಸೂರ್ಯಕಾಂತ ಮುಂಡರಗಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಯಾದಗಿರಿದಿಂದ ವಾಡಿಗೆ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಡಿಕ್ಕಿ ಸಂಭವಿಸಿದೆ.


