ತುಮಕೂರು: ಪ್ರಸ್ತುತ ಸಮಾಜದಲ್ಲಿನ ಯುವಜನತೆಯಲ್ಲಿ ಕನ್ನಡ ಪ್ರೇಮ ಹೆಚ್ಚಾಗುವುದರ ಜೊತೆಗೆ ಬೆಳೆಸುವ ಮನೋಭಾವ ಬರಬೇಕೆಂದು ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಗೋವಿಂದರಾಯ ಎಂ. ತಿಳಿಸಿದರು
ನಗರದ ಸತ್ಯಮಂಗಲದಲ್ಲಿನ ಜೈನ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡುತ್ತಾ, ಕನ್ನಡ ನಾಡಿನ ಇತಿಹಾಸವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು, ಕನ್ನಡದ ಏಕೀಕರಣಕ್ಕೆ ಅನೇಕರು ತಮ್ಮದೇಯಾದ ಕೊಡುಗೆ ನೀಡಿದ್ದಾರೆ, ದಿವಂಗತ ಮುಖ್ಯಮಂತ್ರಿ ದೇವರಾಜ ಅರಸು ಅವರಿಂದ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂತು, ಬದುಕನ್ನು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಭಾಷೆಯನ್ನು ಮರೆಯಬಾರದು, ಕನ್ನಡವೆಂಬುದು ವಿವಿಧತೆಯಲ್ಲಿ ಏಕತೆಯನ್ನು ತೋರುವ ಭಾಷೆಯಾಗಿದೆ, ಈ ನಾಡಿನಲ್ಲಿ ಅನೇಕ ಸಾಧಕರನ್ನು ಕಾಣಬಹುದು ತಮ್ಮ ಒಡವೆಯನ್ನು ಅಡವಿಟ್ಟು ಕಾಲುವೆ, ಅಣೆಕಟ್ಟುಗಳನ್ನು ಕಟ್ಟಿಸಿದ ಮೈಸೂರಿನ ಅರಸರನ್ನು ಈ ಸಂದರ್ಭದಲ್ಲಿ ಅವರು ನೆನೆದರು, ಕನ್ನಡ ಮಾತನಾಡಿದರೆ ದಂಡ ಹಾಕುವ ಪರಿ ಶೋಚನೀಯ, ಇಂಗ್ಲಿಷ್ ಬೇಕು ಆದರೆ ಕನ್ನಡ ನಾಶವಾಗದಿರಲಿ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ಅವರು ನೀಡಿದರು.
ನಯಲಾ ಕಾಲೇಜಿನ ಪ್ರಾಂಶುಪಾಲ ಇಕ್ಬಾಲ್ ಅಹಮದ್ ಮಾತನಾಡಿ, ಕರ್ನಾಟಕದಲ್ಲಿ ಇಂತಹ ಸಂಸ್ಕೃತಿ, ಸಂಪತ್ತು ಮತ್ತು ಆದರಣೀಯ ಭಾಷೆಯನ್ನು ಪಡೆದಂತಹ ನಾವೇ ಧನ್ಯರು, ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸಿದಾಗ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಅಲಂಕರಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವರುಣ್ ಕುಮಾರ್ ಆರ್. ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಮರೆಯದಿರಲಿ, ಈ ನೆಲೆಯ ಭಾಷಾಭಿಮಾನ ಹೆಚ್ಚಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ವಿದ್ಯಾರ್ಥಿಗಳಿಂದ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಶೈಲ, ಶೃತಿ, ರಾಘವೇಂದ್ರ ಉಪನ್ಯಾಸಕರುಗಳಾದ ಹರೀಶ್ ಕುಮಾರ್ ಟಿ.ಜಿ., ಪ್ರಶಾಂತ್ ಲಿಂಗಮ್, ರಾಮಚಂದ್ರಪ್ಪ, ಹರೀಶ್, ಕುಮಾರಿ ಭವ್ಯ, ನಾಗಲಕ್ಷ್ಮಿ, ದೀಪ, ಹೇಮಲತಾ, ಸುಶೀಲ, ನಂದಿನಿ, ರಾಜಶೇಖರ್, ಶ್ವೇತ ಮೊದಲಾದವರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


