ಬೆಂಗಳೂರು: ರಾಕೇಶ್ ಹಾಗೂ ಅವನ ಪ್ರೇಯಸಿ ಸುಮಾರು 5 – 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಹುಡುಗಿ ಮನೆಯಲ್ಲಿ ಇವರ ಪ್ರೀತಿ ಒಪ್ಪಿಗೆ ನೀಡದ ಕಾರಣ, ರಾಕೇಶ್ ತನ್ನ ಗೆಳತಿ ತನ್ನ ಪ್ರೀತಿಯನ್ನು ನಿರಾಕರಿಸಿದಳೆಂದು ಬೇಸತ್ತ ಯುವಕನೋರ್ವ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟ ಘಟನೆ ಬೆಂಗಳೂರಿನ ಕೆಂಗೇರಿಯ ಕೊಡಿಗೆ ಪಾಳ್ಯದಲ್ಲಿ ಘಟನೆ ನಡೆದಿದೆ.
ರಾಕೇಶ್ ಎಂಬಾತನೇ ಮೃತನಾಗಿದ್ದು, ಯುವತಿಯ ಮನೆ ಮುಂದೆ ಆತ್ಮಹತ್ಯೆಗೆ ಈತ ಯತ್ನಿಸಿದ್ದಾನೆ. ಕೂಡಲೇ ರಾಕೇಶ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದೇಹದ ಬಹುತೇಕ ಭಾಗ ಸುಟ್ಟು ಹೋದ ಹಿನ್ನೆಲೆಯಲ್ಲಿ ರಾಕೇಶ್ ಮೃತಪಟ್ಟಿದ್ದಾನೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಕೇಶ್ ನ ಕುಟುಂಬದವರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಹೇಳುತ್ತಿದ್ದಾರೆ. ಹುಡುಗಿಯ ಚಿಕ್ಕಪ್ಪ ರಾಕೇಶ್ ಅನ್ನು ಹುಡುಗಿಯ ಮುಖಾಂತರ ಕರೆಸಿಕೊಂಡು ಈ ರೀತಿ ಘಟನೆ ಸಂಭವಿಸಿದೆ ಎಂದು ರಾಕೇಶ್ ಕುಟುಂಬ ಸಂಶಯ ವ್ಯಕ್ತ ಪಡಿಸಿ ಆರೋಪ ಮಾಡಿದ್ದಾರೆ.
ಇದು ಆತ್ಮಹತ್ಯೆಯೋ ಕೊಲೆಯೋ ಪೋಲೀಸರ ತನಿಖೆಯಿಂದ ತಿಳಿಯಬೇಕಿದೆ.
ವರದಿ: ಆಂಟೋನಿ ಬೇಗೂರು


