ದಿಸ್ಪುರ್: ಲವ್ ಜಿಹಾದ್ ವಿಚಾರವಾಗಿ ಅಸ್ಸಾಂನಲ್ಲಿ ಭಾರೀ ರಾಜಕೀಯ ನಡೆದಿದೆ. ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಕೃಷ್ಣ-ರುಕ್ಮಿಣಿ ಪ್ರೇಮಗಾಥೆಗೆ ಪರೋಕ್ಷವಾಗಿ ಲವ್ ಜಿಹಾದ್ ಟಚ್ ನೀಡಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ಅಸ್ಸಾಂನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹಿಂದೂ ಪತ್ನಿ ಮತ್ತು ಆಕೆಯ ತಂದೆ ತಾಯಿಯನ್ನು ಕೊಂದಿದ್ದ. ಈ ಪ್ರಕರಣವನ್ನು ಲವ್ ಜಿಹಾದ್ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಕರೆದಿದ್ದರು. ಈ ಹೇಳಿಕೆಯನ್ನು ವಿರೋಧಿಸುವ ಭರದಲ್ಲಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಕೃಷ್ಣ-ರುಕ್ಮಿಣಿ ಮದುವೆ ವಿಚಾರವನ್ನು ಎಳೆದುತಂದಿದ್ದಾರೆ.
ಲವ್ ಜಿಹಾದ್ ಮಹಾಭಾರತದಲ್ಲೂ (Mahabharat) ನಡೆದಿದೆ. ಪುರಾಣ ಗ್ರಂಥಗಳಲ್ಲಿ ಕೃಷ್ಣನು ರುಕ್ಮಿಣಿಯನ್ನು ಓಡಿಸಿಕೊಂಡು ಹೋಗಿರುವ ಉಲ್ಲೇಖವಿದೆ. ಇಂದಿನ ಕಾಲದಲ್ಲಿ ಬೇರೆ ಬೇರೆ ಧರ್ಮ, ಬೇರೆ ಬೇರೆ ಜಾತಿಗಳ ಯುವಕ-ಯುವತಿಯರು ಮದುವೆ ಆಗುವುದು ಸಾಮಾನ್ಯವಾಗಿದೆ. ಇದನ್ನು ಲವ್ ಜಿಹಾದ್ ಗೆ ಹೋಲಿಸುವುದು ಸರಿಯಲ್ಲ ಎಂದು ಬೋರಾ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಗೆ ಕೆರಳಿದ ಹಿಮಾಂತ ಶರ್ಮಾ, ಇದು ಖಂಡನೀಯ, ಎಲ್ಲಾ ಸನಾತನಿಗಳು ಬೋರಾ ವಿರುದ್ಧ ಕೇಸ್ ದಾಖಲಿಸಿದರೆ, ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳದೇ ಇರಲು ಸಾಧ್ಯವಿಲ್ಲ. ಯಾರಾದರೂ ದೂರು ನೀಡಿದರೆ ಅವರನ್ನು ಬಂಧಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.
ತಮ್ಮ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಇದೀಗ ಭೂಪೇನ್ ಬೋರಾ ವೈಷ್ಣವ ಪ್ರಾರ್ಥನೆ ಹಾಡುವ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


