ಪತ್ನಿಗೆ ಇಂಗ್ಲಿಷ್ ಬರಲ್ಲ ಎಂಬ ಕಾರಣಕ್ಕಾಗಿ ಪತಿ ಮಡದಿಯನ್ನೇ ಬೇಡ ಎಂದು ಹಠ ಹಿಡಿದಿದ್ದಾರೆ. ಇವರದ್ದು ಪ್ರೇಮವಿವಾಹ. ಅದೂ ಮೂರು ತಿಂಗಳ ಹಿಂದಷ್ಟೇ ಸಪ್ತಪದಿ ತುಳಿದಿದ್ದರು ಎನ್ನಲಾಗಿದೆ. ಮೂರು ತಿಂಗಳ ಹಿಂದಷ್ಟೇ ಪ್ರೀತಿಸಿ ವಿವಾಹವಾದ ಜೋಡಿ ಇದೀಗ ಇಲ್ಲಿನ ಕೌಟುಂಬಿಕ ಸಲಹಾ ಕೇಂದ್ರದ ಮೆಟ್ಟಿಲೇರಿದ್ದಾರೆ.
ಇಬ್ಬರ ಮಧ್ಯೆ ಅಂತ ದೊಡ್ಡ ಸಮಸ್ಯೆಯೇನೂ ಇಲ್ಲದಿದ್ದರೂ ಸಂವಹನ ನಡೆಸಲು ಬೇಕಾದ ಭಾಷೆಯೇ ಇವರಿಗೆ ಅಡ್ಡಿಯಾಗಿದೆ. ಪತ್ನಿ ಹಿಂದಿಯಲ್ಲಿ ಪಂಟರ್. ಪತಿಗೆ ಆಕೆ ಇಂಗ್ಲಿಷ್ ನಲ್ಲೇ ಮಾತನಾಡಬೇಕು ಎಂಬ ಹಠ. ಇದೊಂದೇ ಕಾರಣ, ನವದಂಪತಿ ನಡುವೆ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರೀತಿಯ ದ್ಯೋತಕ ತಾಜ್ ಮಹಲ್ ಇರುವ ಆಗ್ರಾದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಪ್ರೀತಿಸಿ ವಿವಾಹವಾಗಿದ್ದ ದಂಪತಿ ನಡುವೆ ಭಾಷೆ ಅಂತರ ಮೂಡಲು ಕಾರಣವಾಗಿದೆ. ಖಾಸಗಿ ಬ್ಯಾಂಕ್ ನ ಉದ್ಯೋಗಿಯಾದ ಆತ, ತರಬೇತಿಗಾಗಿ ಆಗ್ರಾಕ್ಕೆ ಬಂದಾಗ ಯುವತಿ ಜೊತೆ ಪ್ರೇಮಾಂಕುರವಾಗಿತ್ತು. ಬಳಿಕ ಇಬ್ಬರೂ ಕುಟುಂಬಸ್ಥರನ್ನು ಒಪ್ಪಿಸಿ ಸಪ್ತಪದಿ ತುಳಿದಿದ್ದರು.
ಸದ್ಯ ಭಾಷಾ ವಿವಾದದಿಂದ ಬೇಸತ್ತ ಯುವತಿ ಸದ್ಯ ತವರು ಮನೆಯಲ್ಲಿ ನೆಲೆಸಿದ್ದಾಳೆ. ಇತ್ತ ಪತಿ ಕೌಟುಂಬಿಕ ಸಲಹಾ ಕೇಂದ್ರಕ್ಕೆ ದೂರು ನೀಡಿದ್ದು, ಪತ್ನಿಯಿಂದ ದೂರವಾಗಲು ಬಯಸಿದ್ದಾನೆ. ಕೇಂದ್ರದ ಅಧಿಕಾರಿಗಳು ಇಬ್ಬರ ನಡುವಿನ ಸಮಸ್ಯೆ ಪರಿಹಾರಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296