ಆನೇಕಲ್: ತನ್ನ ಪ್ರೇಯಸಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇರುವುದನ್ನು ಕಣ್ಣಾರೆ ನೋಡಿದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿವಾಹಿತ ಮಹಿಳೆಯಾಗಿದ್ದ ದಿವ್ಯಾ ಎಂಬಾಕೆಯು ತನ್ನ ಪತಿಯಿಂದ ವಿಚ್ಚೇದನ ಪಡೆದಿದ್ದಳು. ವಿಚ್ಚೇದನ ಪಡೆದ ಸ್ವಲ್ಪ ದಿನದಲ್ಲೇ ಅನ್ಬರಾಸನ್ ಎಂಬ ಯುವಕನನ್ನು ಪ್ರೀತಿಸಲು ಆರಂಭಿಸಿದ್ದಳು. ಗಂಡ ಹೆಂಡತಿ ಎಂದು ಹೇಳಿ ಚಿಕ್ಕನಾಗಮಂಗಲದ ಬಾಡಿಗೆ ಮನೆ ಪಡೆದು ಕಳೆದ ಆರು ತಿಂಗಳಿನಿಂದ ಲೀವ್ ಇನ್ ರಿಲೇಷನ್ ನಲ್ಲಿದ್ದರು. ಅನ್ಬರಾಸನ್ ಜೊತೆ ಪ್ರೀತಿಯಲ್ಲಿ ಇರುವಾಗಲೇ ವಿದ್ಯಾಗೆ ಸಂತೋಷ್ ಎಂಬ ಯುವಕನ ಜೊತೆ ಲವ್ವಿಡವ್ವಿ ಶುರು ಮಾಡಿದ್ದಾಳೆ. ಈ ವಿಚಾರ ಅನ್ವರಸನ್ ಗೆ ತಿಳಿದಿದೆ. ಅಲ್ಲದೆ, ಮನೆಯಲ್ಲಿ ಸಂತೋಷ್ ಹಾಗೂ ವಿದ್ಯಾ ಜೊತೆಯಲ್ಲಿದ್ದಾಗ ಅನ್ಬರಾಸನ್ ಕಣ್ಣಾರೆ ಕಂಡಿದ್ದನು.
ಆದರೆ, ಈ ವಿಚಾರ ತಿಳಿದು ವಿದ್ಯಾಗೆ ಬುದ್ಧಿ ಹೇಳಿದರೂ ಆಕೆ ಕೇಳಿರಲಿಲ್ಲ. ಇದರಿಂದ ಮನನೊಂದು ಅನ್ಬರಾಸನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಪೋಷಕರು ಮೊದಲು ಯುಡಿಆರ್ ಪ್ರಕರಣ ದಾಖಲಿಸಿದ್ದರು. ನಂತರ ಸ್ನೇಹಿತನ ಜೊತೆ ಅನ್ಬರಸನ್ ಹಾಗೂ ವಿದ್ಯಾ ಮಾತನಾಡಿರುವ ಕಾಲ್ ರೇಕಾರ್ಡ್ ಲಭ್ಯವಾಗಿದೆ. ಅದರ ಅಧಾರದ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಎಂದು ಪೋಷಕರು ಪ್ರಕರಣ ದಾಖಲಿಸಿದ್ದಾರೆ. ಅದರಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸಂತೋಷ್ ಹಾಗೂ ವಿದ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ.


