ಬೆಂಗಳೂರು: ಎರಡನೇ ಲವ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಹೋಮ್ ಗಾರ್ಡ್ ಆಗಿರುವ ಪ್ರಿಯತಮೆ ಪ್ರಿಯಕರ ಕಾನ್ ಸ್ಟೇಬಲ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾನ್ ಸ್ಟೇಬಲ್ ಸಂಜಯ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಪುಟ್ಟೇನಹಳ್ಳಿ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮನೆಗೆ ಬಂದು ಜಗಳ ಮಾಡಿಕೊಂಡ ಸಂಜಯ್ ಮೇಲೆ ರಾಣಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಳು ಎಂದು ಆರೋಪಿಸಲಾಗಿದೆ. ಸಂಜಯ್ ಬಂಕ್ಗೆ ತೆರಳಿ ಒಂದು ಲೀಟರ್ ಪೆಟ್ರೋಲ್ ತಂದಿದ್ದನು. ಪೆಟ್ರೋಲ್ ಹಾಕ್ತಿಯ ಹಾಕು ನೋಡೋಣ ಎಂದಿದ್ದನು. ಈ ವೇಳೆ ಸಂಜಯ್ ಹೊಟ್ಟೆ ಬೆನ್ನಿನ ಮೇಲೆ ಪೆಟ್ರೋಲ್ ಸುರಿದಿದ್ದು, ನಂತರ ನೀರು ಹಾಕಿ ಬೆಂಕಿ ಆರಿಸಿ, ಸಂಜಯ್ ನನ್ನ ತನ್ನದೇ ಗಾಡಿಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಳು.
ಪೊಲೀಸರ ತನಿಖೆ ವೇಳೆ ಆಕಸ್ಮಿಕವಾಗಿ ಘಟನೆ ನಡೆದಿದೆ ಎಂದು ರಾಣಿ ಹೇಳಿಕೆ ನೀಡಿದ್ದಾಳೆ. ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


