ಗ್ರಾಮೀಣ ಪ್ರದೇಶಗಳ ಕಡೆ ಆತ್ಮಹತ್ಯೆಗಳು ಅಪಘಾತಗಳು ಹಾಗೂ ಇತರೆ ಸಂಬಂಧಪಟ್ಟಂತೆ ಸರ್ಕಾರದಿಂದ ಮರಣೋತ್ತರ ಪರೀಕ್ಷೆ ಆಗಬೇಕೆಂಬ ಸಂದರ್ಭದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸುತ್ತಿರುವುದು ಕಂಡು ಬರುತ್ತದೆ.
ಇಂಥ ಸಂದರ್ಭದಲ್ಲಿ ನಿಧನ ಹೊಂದಿದ ಕುಟುಂಬದವರು, ಸಂಬಂಧಿಕರು, ಗೆಳೆಯರು ತುಂಬಾ ತೊಂದರೆಯನ್ನು ಅನುಭವಿಸುವುದು ಕಂಡುಬರುತ್ತದೆ. ಮರಣೋತ್ತರ ಪರೀಕ್ಷೆ ನಡೆಸಬೇಕಾದರೆ ತುಂಬಾ ವಿಳಂಬ ಮಾಡುತ್ತಾರೆ ಎಂಬುದು ಸಹ ಕೇಳಿ ಬರುತ್ತದೆ. ಈ ಕಾರಣದಿಂದ ಇಡೀ ಕುಟುಂಬ ಸಾರ್ವಜನಿಕ ಆಸ್ಪತ್ರೆ ಹತ್ತಿರ ಇರುವುದನ್ನು ನೋಡಬಹುದು, ಹಾಗೂ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳು ಕಾಳಜಿ ವಹಿಸುವುದಿಲ್ಲ ಎಂಬ ಮಾತು ಕೇಳಿ ಬರುತ್ತದೆ. ಇಂಥ ಸಂದರ್ಭದಲ್ಲಿ ವಕೀಲರು ಸಹ ಅಪಘಾತ ವಿಮೆಯನ್ನು ಕೊಡಿಸಲು ಸ್ಪರ್ಧೆ ಇರುತ್ತದೆ ಎಂಬುದು ಕೇಳಿ ಬರುತ್ತದೆ.
ಇಂಥ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ಮಾಡಲು ಕೆಲವು ವಕೀಲರು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದ ಮೇಲೆ ಅಥವಾ ನಿಧನ ಹೊಂದಿದ ವ್ಯಕ್ತಿಯ ಪ್ರಭಾವಿ ಸಂಬಂಧಿಕರು ಅಥವಾ ಪರಿಚಯಸ್ಥರು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದರೆ ಮಾತ್ರ ಅಲ್ಲಿ ಕೈ ಬಿಸಿ ಮಾಡಿದರೆ ಮಾತ್ರ ಮರಣೋತ್ತರ ಪರೀಕ್ಷೆ ನಡೆಯುತ್ತದೆ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತದೆ. ಇಂಥ ಅಡೆತಡೆ ಹಾಗೂ ಮರಣ ಹೊಂದಿದ ವ್ಯಕ್ತಿಯ ಸಂಬಂಧಿಕರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ಕಾರಣದಿಂದ ಮರಣೋತ್ತರ ಪರೀಕ್ಷೆ ಸ್ವಗಾಮದಲ್ಲೇ ನಡೆದರೆ ಕುಟುಂಬದವರಿಗೆ ಸಮಸ್ಯೆ ಆಗುವುದಿಲ್ಲ. ಆರ್ಥಿಕವಾಗಿ ಹಿಂದುಳಿದವರು ತಾಲೂಕು ಆಸ್ಪತ್ರೆಗೆ ಮೃತದೇಹ ಸಾಗಿಸಲು ಹಾಗೂ ಮರಣೋತ್ತರ ಪರೀಕ್ಷೆ ಆದಮೇಲೆ ಮತ್ತೆ ತಮ್ಮ ಗ್ರಾಮಕ್ಕೆ ಸಾಗಾಣಿಕೆ ಮಾಡುವುದು ಹೆಚ್ಚಿನ ಹಣ ವ್ಯಯ ಮಾಡಬೇಕಾಗುತ್ತದೆ. ಈ ಕಾರಣದಿಂದ ಸರ್ಕಾರ ನಿಧನ ಹೊಂದಿದ ವ್ಯಕ್ತಿಯ ಸ್ವಗ್ರಾಮದಲ್ಲಿ ಮರಣೋತ್ತರ ಪರೀಕ್ಷೆ ಮಾಡುವುದು ಅನಿವಾರ್ಯ ಆಗಿದೆ. ಕೆಲ ದಶಕಗಳ ಹಿಂದೆ ಮರಣೋತ್ತರ ಪರೀಕ್ಷೆ ಗ್ರಾಮೀಣ ಪ್ರದೇಶಗಳಲ್ಲಿಯೇ ನಡೆಯುತ್ತಿತ್ತು. ಆದರೆ ಈಗ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿಯೆ ನಡೆಯಲು ಕಾರಣವಾದರೂ ಏನು ಎಂಬುದು ಪ್ರಜ್ಞಾವಂತ ನಾಗರೀಕರ ಪ್ರಶ್ನೆ ಹಾಗೂ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಕುಟುಂಬದವರು ಹೆಚ್ಚಿನ ಹಣ ವ್ಯಯ ಮಾಡಬೇಕು ಎಂಬ ಮಾತುಗಳು ಬರಲು ಕಾರಣವೇನು? ಇದನ್ನು ಜನಪ್ರತಿನಿಧಿಗಳು ಗಮನಿಸಬೇಕು. ಗ್ರಾಮೀಣ ಆಸ್ಪತ್ರೆಗಳಲ್ಲಿ ವೈದ್ಯರು ಇರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸಬಹುದು ಅಲ್ವಾ ಎಂಬ ಅನಿಸಿಕೆಗಳು ಕೇಳಿ ಬರುತ್ತಿವೆ, ಈ ಕಾರಣದಿಂದ ಜನಪ್ರತಿನಿಧಿಗಳು ಹಿರಿಯ ಅಧಿಕಾರಿಗಳು ಮರಣೋತ್ತರ ಪರೀಕ್ಷೆಯನ್ನು ಮರಣ ಹೊಂದಿದ ವ್ಯಕ್ತಿಯ ಗ್ರಾಮದಲ್ಲಿ ನಡೆಸಲು ನಿಯಮಗಳನ್ನು ಜಾರಿಗೆ ತರಬೇಕಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ನಾಗರಿಕರಿಗೆ ಅನುಕೂಲ ಆಗುತ್ತದೆ.
–N.S. ಈಶ್ವರಪ್ರಸಾದ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q