ಮಧುಗಿರಿ: ತಾಲ್ಲೂಕಿನ ಆಚೇನಹಳ್ಳಿ ಗ್ರಾಮದಲ್ಲಿ ಕಿತ್ತಾಡುತ್ತಿದ್ದ ಜಾನುವಾರುಗಳನ್ನು ಬಿಡಿಸಲು ಹೋಗಿ ಮರ್ಮಾಂಗಕ್ಕೆ ಏಟು ಬಿದ್ದು ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗ್ರಾಮದ ವೆಂಕಟಪ್ಪ ಅವರ ಪುತ್ರ ನಾಗರಾಜು (35) ಮೃತಪಟ್ಟವರು. ಇವರು ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದಾಗ, ಎರಡು ಜಾನುವಾರುಗಳ ನಡುವೆ ಕಾದಾಟ ಶುರುವಾಗಿದೆ. ಇದನ್ನು ಬಿಡಿಸಲು ಹೋದಾಗ ಜಾನುವಾರು ಮರ್ಮಾಂಗಕ್ಕೆ ತಿವಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಈ ಕುರಿತು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


