ಮಧುಗಿರಿ: ತಾಲೂಕು ಕಸಬಾ ಹೋಬಳಿ ಸಿದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಂಭಾಗದಲ್ಲಿ ಪಂಚಾಯತಿ ವತಿಯಿಂದ ಕಸದ ತೊಟ್ಟಿಯನ್ನು ಇಟ್ಟಿದ್ದು, ಇದರಿಂದ ಶಾಲೆಯ ಸ್ವಚ್ಛ ಆವರಣಕ್ಕೆ ಧಕ್ಕೆಯಾಗುತ್ತಿರುವ ಕುರಿತು ನಮ್ಮತುಮಕೂರು ಮಾಧ್ಯಮ ಸವಿವರವಾದ ವರದಿಯನ್ನು ಮಾಡಿತ್ತು. ಇದೀಗ ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮಕೈಗೊಂಡಿದ್ದಾರೆ.
ಇದೀಗ ಶಾಲೆಯ ಮುಂಭಾಗದಲ್ಲೇ ಇದ್ದ ಕಸದ ತೊಟ್ಟಿಯನ್ನು ತೆರವುಗೊಳಿಸಲಾಗಿದ್ದು, ಜೊತೆಗೆ ಶಾಲಾ ಮಕ್ಕಳಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದ ತುಕ್ಕು ಹಿಡಿದ ಪೈಪ್ ಲೈನ್ ನ್ನು ಕೂಡ ತೆರವುಗೊಳಿಸುವ ಮೂಲಕ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮಕೈಗೊಳ್ಳಲಾಗಿದೆ.
ಹಲವು ಸಮಯಗಳಿಂದ ಬಗೆ ಹರಿಯದೇ ಉಳಿಸಿದ್ದ ಸಮಸ್ಯೆ ನಮ್ಮ ತುಮಕೂರು ವರದಿಯಿಂದ ಕೆಲವೇ ದಿನಗಳಲ್ಲಿ ಬಗೆ ಹರಿದಿದ್ದು, ನಮ್ಮತುಮಕೂರು ಮಾಧ್ಯಮದ ವರದಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಸಮಸ್ಯೆ ಬಗೆ ಹರಿದ ಹಿನ್ನೆಲೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ, ಹಾಗೂ ಸಹಶಿಕ್ಷರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರಿಗೆ ಅಭಿನಂದನೆಗಳು ತಿಳಿಸಿ ಮುಂದಿನ ದಿನಗಳಲ್ಲಿ ಸಹ ಇದೇ ರೀತಿ ಶಾಲೆಯ ಸ್ವಚ್ಛತೆ ಮತ್ತು ಅಭಿವೃದ್ಧಿ ಕಡೆ ಗ್ರಾಮ ಪಂಚಾಯಿತಿಯವರು ಸಹಕರಿಸಬೇಕಾಗಿ ತಿಳಿಸಿದರು.
ವರದಿ : ಅಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy