ಬೆಂಗಳೂರು: 2023ರ ಡಿಸೆಂಬರ್ 11ರಂದು ಮಾದಿಗ ಸಮುದಾಯದ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಯಲಿದ್ದು, ಈ ಬಗ್ಗೆ ಬೆಂಗಳೂರಿನ ಲಿಡಕರ್ ಭವನದಲ್ಲಿ ಇಂದುಪೂರ್ವಭಾವಿ ಸಭೆ ಯಶಸ್ವಿಯಾಗಿ ನಡೆಯಿತು.
ತುಮಕೂರಿನ ಜನ ಧ್ವನಿ ಪತ್ರಿಕೆಯ ಸಂಪಾದಕರಾದ ರಾಮಯ್ಯ ಅವರು ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಭೀಮಾಶಂಕರ್ SCP/TSP ಮೀಸಲು ಹಣದ ಬಗ್ಗೆ ಉಪನ್ಯಾಸ ನೀಡಿದರು.

ಸರ್ಕಾರದ ಅಧೀನ ಕಾರ್ಯದರ್ಶಿಗಳಾಂತಹ ಎಸ್.ಮೂರ್ತಿ ಮಾತನಾಡಿ, ದಲಿತರು ಸ್ವಾವಲಂಬಿಗಳಾಗಬೇಕು, ಸರ್ಕಾರ ನೀಡುವ ಸವಲತ್ತುಗಳ ಬಗ್ಗೆ ಪರಿಪೂರ್ಣವಾಗಿ ಅರಿತು ಅದನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಕರೆ ನೀಡಿದರು.
ಮಾತಂಗ ಪೌಂಡೇಷನ್ ಅಧ್ಯಕ್ಷರಾದ ಆರ್.ಲೋಕೇಶ್, ಆದಿಜಾಂಬವ ಸಂಘ ಅಧ್ಯಕ್ಷರಾದ ಜಂಬೂದ್ವೀಪ ಸಿದ್ದರಾಜು, ಜೈ ಮಾದಿಗ ಬೌದ್ದಿಕ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಬಿ.ಆರ್.ಮುನಿರಾಜು, ಶ್ರೀ ಜಾಂಬವ ರಮೇಶ್ ಕುಮಾರ್ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು. ಯುವ ಮುಖಂಡರಾದ ಪ್ರವೀಣ್ ರವರು ಮೀಡಿಯಾ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ಈ ಕಾರ್ಯಕ್ರಮ ರೂಪಿಸಿದ್ದರು.

ಮಹಿಳಾ ಮುಂಚೂಣಿ ಮುಖಂಡರಾದ ಸುಜಾತ ಬೈಲಪ್ಪ, ಕೂಡ್ಲಗಿ ವಿಶಾಲಾಕ್ಷಿ, ನೆಲಮಂಗಲ ತಾಲ್ಲೂಕಿನ ಉಮಾದೇವಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಾದಿಗ ದಂಡೋರದ ಅಧ್ಯಕ್ಷರಾದ ಶಂಕರಪ್ಪ, ರವಿ ಹೊಸಮನಿ ಮುತ್ತುರಾಜ್ ರವರು ಚಿಕ್ಕಬಳ್ಳಾಪುರ ವೆಂಕಟೇಶ್(RTO) , ಕೊಳ್ಳೆಗಾಲದ ವಕೀಲರಾದ ರಾಜೇಂದ್ರ ಬೂದಿತಿಟ್ಟು, ಪ್ರಸನ್ನ ಚಕ್ರವರ್ತಿ ಮೈಸೂರು, ತುಮಕೂರಿನ ಲಕ್ಷಿರಂಗಯ್ಯ ಜಾನಪದ ಕಲಾವಿದ ಹಾಗು ಹಾಡುಗಾರ ಶ್ರೀ ಹೊಳೆಸಾಲಯ್ಯ ದಾನವ, ಶಿವರಾಜ್, ಚನ್ನಪಟ್ಟಣದ ಕಿರಣ್ ಮತ್ತು ಗುರುಮೂರ್ತಿ, ಹೊಸಪೇಟೆಯ ಭರತ್ ಕುಮಾರ್ ಕೈಗಾರಿಕೋದ್ಯಮಿಗಳಾದ ಟಿ.ರಾಮಚಂದ್ರ, ಚಿಕ್ಕಬಳ್ಳಾಪುರದ ಪಿಳ್ಳ ಆಂಜಿನಪ್ಪ ಮತ್ತು ರಾಜೇಂದ್ರ ಇವರ ಸಂಗಡಿಗರು ಸೇರಿದಂತೆ ಅನೇಕ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಬಹುಜನ ಚಳುವಳಿ ವೆಂಕಟೇಶ್, ಕಾಮಾಕ್ಷಿಪಾಳ್ಯದ ರಘು, ವಕೀಲ ಹನುಮೇಶ್ ಗುಂಡೂರ್, ನರಸಿಂಹಮೂರ್ತಿ ( ಕನ್ನಡ ಸಾಹಿತ್ಯ ಪರಿಷತ್) ಹಾಗು ಸಂಗಡಿಗರು ಅಂಬೇಡ್ಕರ್ ಸೇವಾ ಸಮಿತಿಯ ಹರೀಶ್ ಬಾಬು ಮುಂತಾದ ಸಮುದಾಯದ ಹೋರಾಟಗಾರರು ಈ ಸಭೆಯಲ್ಲಿ ಉಪಸ್ಥಿತರಿದ್ದರು.





