ತುರುವೇಕೆರೆ: ಮದುವೆಯಾದ 11ನೇ ದಿನಕ್ಕೆ ನವವಿವಾಹಿತ ಸಾವಿಗೀಡಾಗಿದ್ದು ವಧುವಿನ ಸ್ಥಿತಿ ಚಿಂತಾಜನಕವಾಗಿದೆ.ಮದುವೆ ಸಂಭ್ರಮವಿದ್ದ ಮನೆ ಶೋಕ ಸಾಗರದಲ್ಲಿ ಮುಳುಗಿದ ಘಟನೆ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.
ಅರಸೀಕೆರೆ ತಾಲೂಕು ಕಾಮ್ಲಾಪುರದ ನಂಜುಂಡಯ್ಯ ಅವರ ಪುತ್ರ ಪ್ರಸನ್ನ ಮತ್ತು ಮಂದಾರ ನವದಂಪತಿಗಳು. ಇವರ ಮದುವೆ 10 ದಿನದ ಹಿಂದೆ ನಡೆದಿದ್ದು,ಪ್ರಸನ್ನ ಮತ್ತು ಮಂದಾರ ಕಾಮ್ಲಾಪುರದಿಂದ ತಮ್ಮ ಮನೆಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡು ಪ್ರಸ್ತುತ ವಾಸವಾಗಿರುವ ಬೆಂಗಳೂರಿನ ಸರ್ಜಾಪುರ ರಸ್ತೆಯ ಕೈಗೊಂಡನಹಳ್ಳಿ ಎಂಬಲ್ಲಿಗೆ ಕಾರಿನಲ್ಲಿ ಗುರುವಾರ ತೆರಳುತ್ತಿದ್ದರು.
ಈ ಸಂದರ್ಭದಲ್ಲಿ ವೇಗವಾಗಿ ಬಂದ ಲಾರಿ ನವವಿವಾಹಿತರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ನವವಿವಾಹಿತ ಪ್ರಸನ್ನ(27) ಮತ್ತು ಕಾರು ಚಾಲಕ ಬೆಂಗಳೂರಿನ ಕೈಗೊಂಡನಹಳ್ಳಿಯ ಚನ್ನಯ್ಯ(32) ಸ್ಥಳದಲ್ಲೇ ಮೃತಪಟ್ಟಿದ್ದು, ಸಂತೋಷ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪ್ರಸನ್ನನ ಪತ್ನಿ ಮಂದಾರ ತೀವ್ರ ಗಾಯಗೊಂಡು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರು ಜಖಂಗೊಂಡಿದ್ದು, ಲಾರಿಯ ಒಂದು ಭಾಗ ನಜ್ಜುಗುಜ್ಜಾಗಿದೆ. ಅಪಘಾತ ನಡೆದ ನಂತರ ಲಾರಿ ಚಾಲಕ ಪರಾರಿಯಾಗಿದ್ದು, ತುರುವೇಕರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy