ತಿಪಟೂರು. ಸಮಾಜದ ದುಶ್ಚಟವಾದ ಮದ್ಯಪಾನವು ಇಂದು ಮಹಾಮಾರಿಯಾಗಿದ್ದು, ಅದನ್ನ ನಿಯಂತ್ರಿಸಿದರೆ ಉಳಿದೆಲ್ಲವನ್ನೂ ನಿಯಂತ್ರಿಸಿದಂತೆ ಎಂಬುದು ಧರ್ಮಸ್ಥಳದ ಹೆಗ್ಗಡೆಯವರ ಆಶಯವಾಗಿದೆ ಎಂದರು.
ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ವಲಯದಲ್ಲಿ 1518 ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿದರು.
ಸಪ್ತವ್ಯಸನಿಗಳಲ್ಲಿ ಮೊದಲನೆಯದು ಮದ್ಯವ್ಯಸನ ಅದನ್ನು ಜಾರಿಸಿದರೆ ಉಳಿದೆಲ್ಲವನ್ನು ಜಾರಿಸಿದಂತೆ. ಗ್ರಾಮೀಣ ಭಾಗದ ಜನರ ಸರ್ವತೋಮುಖ ಅಭಿವೃದ್ದಿಗೆ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಶ್ರಮಿಸುತ್ತಿದೆ ಹೆಣ್ಣುಮಕ್ಕಳ ಆರ್ಥಿಕ ಸಾಮಾಜಿಕ, ಶೈಕ್ಷಣಿಕ ಹಾಗೂ ಸಮುದಾಯಿಕ ಅಭಿವೃದ್ಧಿಯೊಂದಿಗೆ ಮದ್ಯ ವ್ಯಸನಿಗಳಾಗಿರುವ ಜನರಿಗೆ ಮನಃಪರಿವರ್ತನೆ ಮೂಲಕ ಮದ್ಯಮುಕ್ತರನ್ನಾಗಿ ಮಾಡಿಸುವುದೇ ಈ ಶಿಬಿರದ ಉದ್ದೇಶವಾಗಿದೆ ಎಂದು ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಜಿಲ್ಲಾ ನಿರ್ದೇಶಕಿ ದಯಾಶೀಲ ಮಾತನಾಡಿ ತಿಪಟೂರು ತಾಲ್ಲೂಕಿನಲ್ಲಿ ಈ ಹಿಂದೆ ಹಲವು ಶಿಬಿರಗಳು ನಡೆದಿದ್ದು ಸುಮಾರು 1000 ಹೆಚ್ಚು ಕುಟುಂಬಗಳು ಇಂದು ಮದ್ಯಮುಕ್ತ ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಹಾಗೂ ಇವರ ಸಾಲಿನಲ್ಲಿ ನೀವು ಕೂಡ ನಿಲ್ಲಬೇಕು ಎಂದು ಆಗಮಿಸಿದ ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು.
ಸಂದರ್ಭದಲ್ಲಿ ಮದ್ಯವರ್ಜನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪುಟ್ಟಶಂಕರಪ್ಪ, ಮಲ್ಲಿಗೆಪ್ಪಚಾರ್, ತಾಲ್ಲೂಕಿನ ಯೋಜನಾಧಿಕಾರಿ ಪ್ರವೀಣ್ ಕುಮಾರ್, ಭಗೀರಥ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚನ್ನಬಸಪ್ಪ, ಜನಜಾಗೃತಿ ಜಿಲ್ಲಾ ಸದಸ್ಯ ಪ್ರತಾಪ್ ಸಿಂಗ್, ಹೊನ್ನವಳ್ಳಿ ಗ್ರಾ ಪಂ ಅಧ್ಯಕ್ಷ ಪುರುಷೋತ್ತಮ್, ಎ ಪಿ ಎಂ ಸಿ ಸದಸ್ಯ ಮಧುಸೂದನ್, ಹೊನ್ನವಳ್ಳಿ ಆರಕ್ಷಕ ಸಿಬ್ಬಂದಿ, ಯೋಜನೆಯ ಎಲ್ಲಾ ಮೇಲ್ವಿಚಾರಕರು, ಜನಜಾಗೃತಿ ಮೇಲ್ವೀಚಾರಕ ರಾಜೇಶ್, ಶಿಬಿರಾಧಿಕಾರಿ ನಂದಕುಮಾರ್, ಆರೋಗ್ಯ ಸಹಾಯಕಿ, ಸೇವಾಪ್ರತಿನಿಧಿಗಳು, ಹಾಗೂ ಸುಮಾರು 50 ಜನ ಶಿಬಿರಾರ್ಥಿಗಳು ಮತ್ತು ನವಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5