nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪತ್ರಕರ್ತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಸುವರ್ಣ ಸೌಧದಲ್ಲಿ ಸರ್ಕಾರಕ್ಕೆ ವಿಶೇಷ ಮನವಿ

    December 20, 2025

    ಪಾವಗಡ | ಬಸ್–ಇನೋವಾ ಕಾರು ಮುಖಾಮುಖಿ ಡಿಕ್ಕಿ: ಕಾರು ಚಾಲಕ ಸಾವು, ಹಲವರಿಗೆ ಗಾಯ

    December 20, 2025

    ಕುಂಚಿಟಿಗ ಮಹಾ ಸಂಸ್ಥಾನ ಮಠಕ್ಕೆ ನಿ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಭೇಟಿ

    December 20, 2025
    Facebook Twitter Instagram
    ಟ್ರೆಂಡಿಂಗ್
    • ಪತ್ರಕರ್ತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಸುವರ್ಣ ಸೌಧದಲ್ಲಿ ಸರ್ಕಾರಕ್ಕೆ ವಿಶೇಷ ಮನವಿ
    • ಪಾವಗಡ | ಬಸ್–ಇನೋವಾ ಕಾರು ಮುಖಾಮುಖಿ ಡಿಕ್ಕಿ: ಕಾರು ಚಾಲಕ ಸಾವು, ಹಲವರಿಗೆ ಗಾಯ
    • ಕುಂಚಿಟಿಗ ಮಹಾ ಸಂಸ್ಥಾನ ಮಠಕ್ಕೆ ನಿ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಭೇಟಿ
    • ನಕಾಶೆ ರಸ್ತೆ ತೆರವುಗೊಳಿಸಲು ವಿಳಂಬ: ಹಸಿರು ಸೇನೆಯಿಂದ ಪ್ರತಿಭಟನೆ
    • ಡಿ.21ರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ: ತಪ್ಪದೇ ಲಸಿಕೆ ಹಾಕಿಸಿ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
    • ನಾಟಕ, ಬದುಕನ್ನು ಕಟ್ಟಿಕೊಡುವ ಜೊತೆಗೆ ಸಾಮರಸ್ಯ ಬೆಳೆಸುತ್ತದೆ: ವೈ.ಎಂ.ಪುಟ್ಟಣ್ಣಯ್ಯ
    • ಲೇಖಕಿಯರ ಸಂಘದ ದತ್ತಿ ಬಹುಮಾನಗಳಿಗೆ ಕಥೆ—ಕವನಗಳ ಆಹ್ವಾನ
    • ಡಿ.24ರಂದು ಮಧುಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ಕೆ.ಪಿ. ನಟರಾಜು ಆಯ್ಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮದ್ಯ ವ್ಯಸನ ತ್ಯಜಿಸಿ ಕುಟುಂಬದ ಜೊತೆ ಆನಂದವಾಗಿರಿ : ಮದ್ಯ ವ್ಯಸನಿಗಳಿಗೆ  ಮುರುಳೀಧರ ಹಾಲಪ್ಪ ಸಲಹೆ
    ಕೊರಟಗೆರೆ November 22, 2022

    ಮದ್ಯ ವ್ಯಸನ ತ್ಯಜಿಸಿ ಕುಟುಂಬದ ಜೊತೆ ಆನಂದವಾಗಿರಿ : ಮದ್ಯ ವ್ಯಸನಿಗಳಿಗೆ  ಮುರುಳೀಧರ ಹಾಲಪ್ಪ ಸಲಹೆ

    By adminNovember 22, 2022No Comments3 Mins Read
    koratagere

    ಕೊರಟಗೆರೆ: ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ 1120ನೇ ಮದ್ಯವರ್ಜನ ಶಿಬಿರವನ್ನು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರುಳೀಧರ ಹಾಲಪ್ಪ  ಉದ್ಘಾಟಿಸಿದರು.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಗಳಾದರೂ ತಮ್ಮ ಕುಟುಂಬಕ್ಕೆ ಅಲ್ಲಿ ಬಡವ ಶ್ರೀಮಂತ ಎಂದು ಬರುವುದಿಲ್ಲ, ಮದ್ಯಪಾನ, ಧೂಮಪಾನ ಇತರೆ ದುಶ್ಚಟಗಳಿಗೆ ದಾಸರಾದರೆ ಅವರ ಕುಟುಂಬ ಬೀದಿ ಪಾಲಾಗುತ್ತದೆ. ಅದರಲ್ಲೂ ಬಡ ಕುಟುಂಬಗಳು ಪ್ರತಿನಿತ್ಯ ಕೂಲಿ ಮಾಡಿ ಜೀವನ ಸಾಗಿಸಬೇಕು, ಕೂಲಿ ಮಾಡಿ ಸಂಪಾದಿಸುವ ಹಣವನ್ನು ಮದ್ಯಪಾನ ಇನ್ನಿತರ ಚಟಗಳಿಗೆ ದಾಸರಾದರೆ, ಕುಟುಂಬದ ಪಾಡೇನು, ಆದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪರಮ ಪೂಜ್ಯ ಶ್ರೀ ವೀರೇಂದ್ರ ಹೆಗಡೆಯವರ ಈ ಒಂದು ಮಧ್ಯವರ್ಜನ ಶಿಬಿರ ಕಾರ್ಯಕ್ರಮದ ಅಡಿಯಲ್ಲಿ ಇಲ್ಲಿ ಬಂದಿರುವ ಮದ್ಯ ವೇಸನಿಗಳು ತಮ್ಮ ದುಶ್ಚಟಗಳನ್ನು ಬಿಟ್ಟು ತಮ್ಮ ಕುಟುಂಬದ ಜೊತೆ ಆನಂದವಾಗಿರುವುದನ್ನ ಒಮ್ಮೆ ಆಲೋಚಿಸಿ ನೋಡಿ, ತಮ್ಮ ಕುಟುಂಬದ ಹೆಣ್ಣು ಮಕ್ಕಳ ಕಣ್ಣೀರನ್ನು ಒರೆಸಿ ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ತಾವೆಲ್ಲರೂ ಬದಲಾಗಬೇಕು, ಅದುವೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ತಾವೆಲ್ಲರೂ ಬದಲಾಗಿ ತಮ್ಮ ಕುಟುಂಬದ ಜೊತೆ ಆನಂದವಾಗಿರಿ ಎಂದು ತಿಳಿಸಿದರು.


    Provided by
    Provided by

    ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ದಿನೇಶ್.ಡಿ ಅವರು ಮಾತನಾಡಿ, ಶ್ರೀ ಪರಮಪೂಜ್ಯರ ಕನಸು ಬಡ ಕುಟುಂಬಗಳು ಸಂತೋಷದಿಂದ  ಜೀವನ ಸಾಗಿಸಬೇಕು, ಕುಟುಂಬದ ಸದಸ್ಯರು ಯಾವ ರೀತಿ ಇರಬೇಕು ಎನ್ನುವುದನ್ನು ಆಲೋಚಿಸಿದರು, ಅವರ ಆಲೋಚನೆಯಲ್ಲಿ ಮೊದಲು ಬಂದದ್ದೇ  ಬಡ ಕುಟುಂಬದ ಅದೆಷ್ಟೊ ಮನೆಗಳ ಯಜಮಾನರು ಇತ್ತೀಚಿನ ಗಂಡು ಮಕ್ಕಳು ಮದ್ಯಪಾನ, ಧೂಮಪಾನ ಸೇರಿದಂತೆ ಇನ್ನಿತರ ದುಶ್ಚಟಗಳಿಗೆ ದಾಸರಾಗಿದ್ದಾರೆ.

    ವೈನ್ ಶಾಪ್, ಬಾರ್ ಗಳನ್ನು ಬಾಗಿಲು ಹಾಕಿಸಿದರೆ ಬದಲಾಗುತ್ತದೆ ಎನ್ನುವುದು ಕನಸಿನ ಮಾತಾಗುತ್ತದೆ, ಮದ್ಯಪಾನ ತ್ಯಜಿಸಿ ಇಂತಹವರನ್ನು ಮೊದಲು ತಿದ್ದಬೇಕು  ಆಗ ಅಷ್ಟೇ ಬಡ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯ ಎಂದು ಸಂಕಲ್ಪ ಮಾಡಿದ ಶ್ರೀ ಪರಮ ಪೂಜ್ಯರು ಕರ್ನಾಟಕದಲ್ಲಿ ಇಲ್ಲಿಯವರೆಗೆ ಸುಮಾರು ಒಂದು ಲಕ್ಷದ ಮೂವತ್ತು ಸಾವಿರ ಜನರು ಮಧ್ಯ ವ್ಯಸನವನ್ನು  ತ್ಯಜಿಸಿ ತಮ್ಮ ಕುಟುಂಬದ ಜೊತೆ ನೆಮ್ಮದಿಯಿಂದ  ಜೀವನ ನಡೆಸುತ್ತಿದ್ದಾರೆ, ತಮ್ಮ ಜೀವನ ಸಂತೋಷದಿಂದ  ಇರಲು ಶ್ರೀಶ್ರೀ ಪರಮಪೂಜ್ಯ ವೀರೇಂದ್ರ ಹೆಗಡೆಯವರೇ ಕಾರಣ, ನಮ್ಮ ಕುಟುಂಬಕ್ಕೆ ದೇವರ ರೂಪ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

    ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು ಹಾಗೂ ಮದ್ಯವರ್ಜನ ಶಿಬಿರದ ವ್ಯವಸ್ಥಾಪಕ ಪ್ರದೀಪ್ ಕುಮಾರ್ ಮಾತನಾಡಿ, ಬೆಳಗ್ಗಿನಿಂದ ಸಂಜೆವರೆಗೂ ಬಿಸಿಲು ಮಳೆ ಗಾಳಿ ಎನ್ನದೆ ದುಡಿಮೆಯನ್ನು ಮಾಡುತ್ತೀರಾ, ಕುಟುಂಬದವರನ್ನು ನೆನಪಿಸಿಕೊಳ್ಳದೆ ಬಂದ ಹಣದಲ್ಲಿ ಮದ್ಯಪಾನ ಮಾಡಿ ಮನೆಗೆ ಹೋಗುತ್ತೀರಾ, ಹೆಂಡತಿ ಮಕ್ಕಳ ಕಣ್ಣೀರಿಗೆ ಕಾರಣವಾಗುತ್ತೀರಾ, ನಿಮ್ಮನ್ನೇ ನಂಬಿಕೊಂಡು  ಮನೆಲಿರುವ ಹೆಂಡತಿ ಮಕ್ಕಳ ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆಯನ್ನು ಹಾಕಿಸುತ್ತೀರಾ, ಇದು ನಿಮಗೆ ಎಷ್ಟರ ಮಟ್ಟಿಗೆ ಸರಿ ಈ ಶಿಬಿರದಲ್ಲಿ ನೀವೇ ತಿಳಿದುಕೊಳ್ಳುತ್ತೀರಾ ಎಂದರು.

    ನಿಮ್ಮನ್ನು ನೋಡಿ ಅನೇಕ ಜನರು ನಿಮ್ಮನ್ನ ಆಡಿಕೊಳ್ಳುತ್ತಾರೆ, ನಿಮ್ಮ ಮಕ್ಕಳನ್ನು ಕುಡುಕನ ಮಕ್ಕಳು ಎಂದು ನಿಂದಿಸುತ್ತಾರೆ, ಆ ಮಕ್ಕಳ ಮನಸ್ಸು ಎಷ್ಟು ನೋಯುತ್ತದೆ ಎನ್ನುವುದನ್ನು ಯೋಚಿಸಿ, ಮುಂದೆ ನಿಮ್ಮ ಮಕ್ಕಳು ನಿಮ್ಮ ದಾರಿಯನ್ನು ಹಿಡಿದರೆ ಏನು ಮಾಡುತ್ತೀರಾ, ಮಧ್ಯವರ್ಜನ ಶಿಬಿರದಲ್ಲಿ ೮ ದಿನಗಳ ಕಾಲ ಸ್ವಲ್ಪ ಕಷ್ಟ ಎನಿಸಿದರು ನಿಮ್ಮ ಮುಂದಿನ ೮೦ ವರ್ಷಗಳ ಜೀವನ ಸುಖಮಯವಾಗಿರುತ್ತದೆ, ತಾವೆಲ್ಲರೂ ಸಹಕರಿಸಿ ಶಿಬಿರವನ್ನ ಯಶಸ್ವಿಗೊಳಿಸಿ ನಿಮ್ಮ ಕುಟುಂಬದ ಜೊತೆ ಸಂತೋಷವಾಗಿರಿ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಬಾಲಕೃಷ್ಣ ಎಂ, ಮೇಲ್ವಿಚಾರಕ ರವೀಂದ್ರ ಬಿ, ಸಂಘದ ಅಧ್ಯಕ್ಷ ಕೆ ವಿ ಪುರುಷೋತ್ತಮ್, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಟರಾಜ್, ಬೆಸ್ಕಾಂ ನಿವೃತ್ತ ನೌಕರ ಪರ್ವತಯ್ಯ, ವೇದಿಕೆಯ ಸದಸ್ಯರಾದ  ಎಲ್ ರಾಜಣ್ಣ, ಟಿ.ಕೆ ಜಗದೀಶ್, ನೂತನ ಸದಸ್ಯ  ಮಮತಾ, ಸಿಬಿರಾಧಿಕಾರಿ ನಂದ ಕುಮಾರ್, ಆರೋಗ್ಯ ಸಹಾಯಕಿ ಶ್ರೀಮತಿ ಪ್ರೆಸಿಲ್ಲಾ ಡಿಸೋಜಾ, ಸಹ ಕಾರ್ಯದರ್ಶಿ  ಜಗದೀಶ್ ಕೆ.ಬಿ, ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಕಲೀಮ್ ಸೇರಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಎಲ್ಲಾ ಮಹಿಳಾ ಸದಸ್ಯರು ಹಾಗೂ ಮದ್ಯವರ್ಜನ ತ್ಯಜಿಸಲು ಬಂದ ಸಹಸ್ರಾರು ಜನರು ಹಾಜರಿದ್ದರು.

    ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಕುಂಚಿಟಿಗ ಮಹಾ ಸಂಸ್ಥಾನ ಮಠಕ್ಕೆ ನಿ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಭೇಟಿ

    December 20, 2025

    ಗ್ರಾಮೋದ್ಯೋಗ ವಿಕಾಸ್ ಯೋಜನೆಯಡಿ ಕುಂಬಾರ ಸಶಕ್ತಿಕರಣ ಅಡಿಯಲ್ಲಿ ಚಕ್ರ ಕುಂಬಾರಿಕೆ ತರಬೇತಿ

    December 18, 2025

    ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರಹಗಾರರಿಂದ ಪ್ರತಿಭಟನೆ

    December 16, 2025

    Comments are closed.

    Our Picks

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಪತ್ರಕರ್ತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಸುವರ್ಣ ಸೌಧದಲ್ಲಿ ಸರ್ಕಾರಕ್ಕೆ ವಿಶೇಷ ಮನವಿ

    December 20, 2025

    ಬೆಳಗಾವಿ:  ರಾಜ್ಯದ ಪ್ರಿಂಟ್ ಮೀಡಿಯಾ ಹಾಗೂ ಸೋಷಿಯಲ್ ಮೀಡಿಯಾ ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ‘ಪ್ರಿಂಟ್ ಮೀಡಿಯಾ ಮತ್ತು…

    ಪಾವಗಡ | ಬಸ್–ಇನೋವಾ ಕಾರು ಮುಖಾಮುಖಿ ಡಿಕ್ಕಿ: ಕಾರು ಚಾಲಕ ಸಾವು, ಹಲವರಿಗೆ ಗಾಯ

    December 20, 2025

    ಕುಂಚಿಟಿಗ ಮಹಾ ಸಂಸ್ಥಾನ ಮಠಕ್ಕೆ ನಿ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಭೇಟಿ

    December 20, 2025

    ನಕಾಶೆ ರಸ್ತೆ ತೆರವುಗೊಳಿಸಲು ವಿಳಂಬ: ಹಸಿರು ಸೇನೆಯಿಂದ ಪ್ರತಿಭಟನೆ

    December 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.