ಸಮಾಜಕ್ಕೆ ಪಿಡುಗಾಗಿರುವ ಮದ್ಯಪಾನವನ್ನು ಬಿಡಿಸುವ ಸಲುವಾಗಿ 1,549 ಮದ್ಯವರ್ಜನಾ ಶಿಬಿರಗಳನ್ನು ನಡೆಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ‘ನ ವತಿಯಿಂದ ಇಂದು ಮದ್ಯಾವರ್ಜನಾ ಶಿಬಿರದ ಪೂರ್ವಭಾವಿ ಸಭೆಯನ್ನು ರಾಜೀಮತಿ ಭವನವನ್ನು ನಡೆಸಲಾಯಿತು.
ಸಭೆಯನ್ನು ಉದ್ಘಾಟಿಸಿದ ಚೌದ್ರಿ ಟಿ.ರಂಗಪ್ಪ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಮಂಗಳ ಗೌರಮ್ಮ’ನವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭೆಯಲ್ಲಿ ಮದ್ಯಾವರ್ಜನಾ ಶಿಬಿರದ ತಾಲ್ಲೂಕು ಯೋಜನಾಧಿಕಾರಿಯಾದ ಗಣೇಶ್ ಮಾತನಾಡಿ ಶಿಬಿರದ ರೂಪು ರೇಷೆಗಳನ್ನು ವಿವರಿಸಿದರು. ನಂತರ ಸಭೆಯಲ್ಲಿ ಶಿಬಿರದ ಉಸ್ತುವಾರಿ ಮಂಡಳಿಯನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ತಾಲ್ಲೂಕು ಯೋಜನಾಧಿಕಾರಿ ಅನಿತಾ ಶೆಟ್ಟಿ , ಸುತ್ತಮುತ್ತಲಿನ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಸಾರ್ವಜನಿಕರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್’ನಾ ಸಿಬ್ಬಂದಿ ಭಾಗವಹಿಸಿದ್ದರು.
ವರದಿ : ವೆಂಕಟೇಶ ಜೆ.ಎಸ್. ( ವಿಕ್ಕಿ ) ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz