ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ಕಾರಣಕ್ಕೆ ಪಾಪಿ ತಂದೆ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಂದ ಹೃದಯವಿದ್ರಾವಕ ಘಟನೆ ಬಳ್ಳಾರಿಯಲ್ಲಿ ನಡೆದಿದೆ.ಆರೋಪಿಯನ್ನು ಕುಡತಿನಿ ಪಟ್ಟಣದ ನಿವಾಸಿ 31 ವರ್ಷದ ಓಂಕಾರ್ ಗೌಡ ಎಂದು ಗುರುತಿಸಲಾಗಿದೆ.
ಪದೇಪದೇ ಬುದ್ದಿ ಹೇಳಿದರೂ ಮಗಳು ಕೇಳದೇ ಅನ್ಯ ಕೋಮಿನ ಯುವಕನ ಜೊತೆ ಮಾತನಾಡುತ್ತಿದ್ದರಿಂದ ಸಿಟ್ಟಿಗೆದ್ದ ಆರೋಪಿ ಮಗಳನ್ನು ಚಾನೆಲ್ ಗೆ ತಳ್ಳಿ ಕೊಲೆ ಮಾಡಿದ್ದಾನೆ.
ಅಕ್ಟೋಬರ್ 31ರಂದು ಸಿನಿಮಾಗೆ ಕರೆದುಕೊಂಡು ಹೋಗುತ್ತೇನೆ ಎಂದು ಓಂಕಾರ್ ಮಗಳಿಗೆ ಹೇಳಿದ್ದಾನೆ. ಅದರಂತೆ ಇಬ್ಬರು ಮನೆಯಿಂದ ಸಿನಿಮಾಗೆ ಹೋದಾಗ ತಡವಾಗಿದೆ. ಹಾಗಾಗಿ ಸಿನಿಮಾ ನೋಡದೇ ದೇವಸ್ಥಾನಕ್ಕೆ ಹೋಗಿದ್ದಾರೆ.
ದೇವಸ್ಥಾನಕ್ಕೆ ಹೋದ ನಂತರ ಜ್ಯುವೆಲರಿ ಅಂಗಡಿಗೆ ಹೋಗಿ ಅಲ್ಲಿ ಮಗಳಿಗೆ ಓಂಕಾರ್ ಒಡವೆ ಕೊಡಿಸಿದ್ದಾನೆ. ನಂತರ ಎತ್ತರವಾದ ಪ್ರದೇಶಕ್ಕೆ ಕರೆದೊಯ್ದು ಅಲ್ಲಿಂದ ಕೆಳಗೆ ಹರಿಯುತ್ತಿದ್ದ ಚಾನೆಲ್ ಗೆ ಮಗಳನ್ನು ತಂದೆ ತಳ‍್ಳಿದ್ದಾನೆ.ಮಗಳು ರಕ್ಷಣೆಗಾಗಿ ಬೇಡಿಕೊಂಡರೂ ಕರಗದ ಅಪ್ಪ ಆಕೆ ಸಾಯುವುದನ್ನು ದೃಢಪಡಿಸಿಕೊಂಡಿದ್ದಾನೆ.
ಮಗಳನ್ನು ಕೊಂದ ನಂತರ ಓಂಕಾರ್ ತಿರುಪತಿಗೆ ಓಡಿ ಹೋಗಿದ್ದಾನೆ. ಇತ್ತ ತಾಯಿ ಕುಡಿತಿನಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳವಾರ ಮನೆಗೆ ಓಂಕಾರ್ ಮರಳುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಮೃತ ಮಗಳ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


