ಮಗುವಿಗೆ ಥಳಿಸುವ ವಿಚಾರದಲ್ಲಿ ಜಗಳ ನಡೆದು ಪತಿ ಪತ್ನಿಯನ್ನು ಕೊಂದಿರುವ ಘಟನೆಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ರತನ್‌ಪುರಿ ಗ್ರಾಮದಲ್ಲಿ ನಡೆದಿದೆ.ಕೊಲೆ ಆರೋಪಿ ನಯೀಮ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ.
ನರ್ಗೀಸ್ ಎಂಬ ಯುವತಿ ಕೊಲೆಯಾದಳು. ಈ ಘಟನೆ ಮಂಗಳವಾರ ರತನ್‌ಪುರಿ ಗ್ರಾಮದಲ್ಲಿ ನಡೆದಿದೆ. ಮಗುವನ್ನು ಹೊಡೆಯುವ ವಿವಾದದ ಹಿನ್ನೆಲೆಯಲ್ಲಿ ಕೋಪದಿಂದ ನರ್ಗೀಸ್ ಪತಿ ನಯೀಮ್ ಅಲಿ ಆಕೆಯ ಕತ್ತು ಹಿಸುಕಿದ್ದಾನೆ ಎಂದು ರತನ್‌ಪುರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಪಂಕಜ್ ರೈ ಹೇಳಿದ್ದಾರೆ.
ನಯೀಮ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಮೃತದೇಹವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಪಂಕಜ್ ರೈ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


