ಪಾವಗಡ: ಪಾವಗಡ ತಾಲೂಕಿನಲ್ಲಿ ಕೊಡಿಗೆಹಳ್ಳಿ ಗ್ರಾಮದ ಲೋಕೇಶ್ ಅವರ ಪುತ್ರಿ ಪ್ರತಿಕ್ಷಾ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ರಾಜ್ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗುವಿನ ಚಿಕಿತ್ಸೆಗೆ ಪಾವಗಡದ ಹೆಲ್ಪ್ ಸೊಸೈಟಿ ನೆರವು ನೀಡಿತು.
ಧನು ಸಿಂಹಾದ್ರಿ ಪಾವಗಡ, ಸೂರಿ ಮಧುಸೂದನ್, ಅನಿಲ್ ಕುಮಾರ್ ಪಾವಗಡ ಸೇರಿದಂತೆ ಹಲವರು ಮಗುವಿನ ಚಿಕಿತ್ಸೆಗೆ ನೆರವು ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದರು. ಈ ಸಂದೇಶವನ್ನು ನೋಡಿದ ಪಾವಗಡದ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಅವರು ಸ್ಪಂದಿಸಿದ್ದಾರೆ.
ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಮಗುವಿನ ಚಿಕಿತ್ಸೆಗೆ ನೆರವನ್ನು ನೀಡಲಾಯಿತು. ಬಳಿಕ ಮಾತನಾಡಿದ ಶಶಿಕಿರಣ್, ಸಾಮಾಜಿಕ ಜಾಲತಾಣಗಳಲ್ಲಿನ ಸಂದೇಶಗಳನ್ನು ನೋಡಿ ಅವರಿಗೆ ಏನಾದರೂ ಸಹಾಯ ಮಾಡಬೇಕು ಎಂದು ನನಗೆ ಅನ್ನಿಸಿತು. ಆ ಪುಟ್ಟ ಕಂದಮ್ಮನಿಗೆ ನಮ್ಮ ಕೈಲಾದಷ್ಟು ಆರ್ಥಿಕ ನೆರವನ್ನು ನೀಡಿದ್ದೇವೆ. ಇದೇ ರೀತಿ ಪಾವಗಡ ತಾಲೂಕಿನ ಎಲ್ಲಾ ವರ್ಗದ ಜನರು ಕೂಡ ಮಗುವಿಗೆ ನೆರವಾಗಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ಮುಖಂಡರಾದ ಸುರೇಂದ್ರ, ನಾಗರಿಕ ಪತ್ರಕರ್ತ ಅನಿಲ್ ಕುಮಾರ್ ಪಾವಗಡ, ಸೊಸೈಟಿ ನಿರ್ದೇಶಕರಾದ ನಂದೀಶ್ ಕುಮಾರ್, ಶಂಕರ, ಶರತ್, ಪವನ್,ರಾಜು, ಪ್ರದೀಪ್, ಸಾಯಿಕುಮಾರ್, ಸಾಗರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB