ಮುಂಬೈ: ಸ್ವಚ್ಚತಾ ಸಿಬ್ಬಂದಿ 2 ವರ್ಷದ ಮಗುವಿಗೆ ಬದಲಿ ಚುಚ್ಚು ಮದ್ದು ನೀಡಿದ ಪರಿಣಾಮ ಮಗು ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಗೋವಂಡಿಯ ನೂರ್ ಆಸ್ಪತ್ರೆಯಲ್ಲಿ ನಡೆದಿದೆ.
ಭೇದಿಯಿಂದ ಬಳಲುತ್ತಿದ್ದ ಮಗುವನ್ನು ಜನವರಿ 8 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗು ದಾಲಾಗಿದ್ದ ವಾರ್ಡಿನಲ್ಲಿ ಮಲೇರಿಯಾ ರೋಗಿ ದಾಖಲಾಗಿದ್ದ. ಜನವರಿ 13 ರಂದು ಈ ಮಲೇರಿಯಾ ರೋಗಿಗೆ ನೀಡಬೇಕಿದ್ದ ಚುಚ್ಚು ಮದ್ದನ್ನು, 18 ವರ್ಷದ ಸ್ವಚ್ಚತಾ ಸಿಬ್ಬಂದಿ ಮಗುವಿಗೆ ನೀಡಿದ್ದಾಳೆ. ಇದರಿಂದ ಮಗು ಸಾವನ್ನಪ್ಪಿದೆ.
ವಿಷಯವನ್ನು ತಿಳಿದ ಮಗುವಿನ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ.ಮಗುವನ್ನು ಕಳೆದುಕೊಂಡ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಆಸ್ಪತ್ರೆ ಮಾಲೀಕ ನಾಸಿರುದ್ದೀನ್ ಸೈಯದ್(63), ಡಾ. ಅಲ್ತಫ್ ಖಾನ್, ನರ್ಸ್ ಸಲೀಮುನ್ನಿಸಾ ಖಾನ್(21) ಹಾಗೂ ಸ್ವಚ್ಛತಾ ಸಿಬ್ಬಂದಿ ನರ್ಗೀಸ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕೆ ಸತ್ಯ ಹೊರ ಬೀಳಲಿದೆ. ಪೊಲೀಸರು ಹೆಚ್ಚಿನ ತನಿಕೆ ನಡೆಸುತ್ತಿದ್ದಾರೆ.
ವರದಿ :ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy