ಧಾರವಾಡ: ಜಿಲ್ಲೆಯ ನೀರಲಕಟ್ಟಿ ಗ್ರಾಮದ ನಿವಾಸಿ ಮಹಿಳೆಯೊಬ್ಬರು 1 ವರ್ಷ 6 ತಿಂಗಳ ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಜಿಲ್ಲೆಯ ನೀರಲಕಟ್ಟಿ ಗ್ರಾಮದಲ್ಲಿ ನಡೆದಿದೆ.
ನೀರಲಕಟ್ಟಿ ಗ್ರಾಮದ ನಿವಾಸಿಯಾದ ರುಕ್ಮಾವ್ವಾ ದುರ್ಗಪ್ಪ ಭಜಂತ್ರಿ ಇವರ ಮಗಳಾದ ಸ್ವಾತಿ ಅಶೋಕ ಭಜಂತ್ರಿ ನಾಪತ್ತೆಯಾದವರು ಎಂದು ಗುರುತಿಸಲಾಗಿದೆ. ನವೆಂಬರ್ 25 ರಂದು ರಾತ್ರಿ 2:30 ಗಂಟೆಗೆ ಮನೆಯಿಂದ ಇವರು ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ಸ್ವಾತಿ ಭಜಂತ್ರಿ(26) ಎತ್ತರ 4.5, ಸದೃಡ ಮೈ ಕಟ್ಟು, ಸಾದಾಗೆಂಪು ಮೈ ಬಣ್ಣ, ಕಪ್ಪು ಕೂದಲು ಹೊಂದಿದ್ದಾರೆ. ನಾಪತ್ತೆಯಾದ ವೇಳೆ ಬಿಳಿ ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ ಹಾಗೂ ಕೊರಮಾ ಭಾಷೆ ಮಾತನಾಡುತ್ತಾಳೆ.
1 ವರ್ಷ 6 ತಿಂಗಳ ಮಗು ಅರುಣ್, ಸಾದಾಗೆಂಪು ಮೈ ಬಣ್ಣ, ಕಪ್ಪು ಕೂದಲು, ಮಗು ಕೆಂಪು ಅಂಗಿ ಕಪ್ಪು ಶಾರ್ಟ ಪ್ಯಾಂಟ್ ಧರಿಸಿದ್ದಾನೆ
ಇವರ ಬಗ್ಗೆ ಸುಳಿವು ಸಿಕ್ಕಲ್ಲಿ, ಕುಲಗೋಡ ಠಾಣೆ ದೂರವಾಣ ಸಂಖ್ಯೆ 08334-222233 ಅಥವಾ ಇ-ಮೇಲ್ ಐಡಿ kulgodgm@ksp.gov.in ಗೆ ಸಂಪರ್ಕಿಸಬಹುದು ಎಂದು ಕುಲಗೋಡ ಪೆÇಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


