ಸರಗೂರು: ಮಹಾಡ ಸತ್ಯಾಗ್ರಹ ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು, ಇದನ್ನು ಭಾರತದ ಮಟ್ಟದಲ್ಲಿ ದಲಿತ ಚಳುವಳಿಗೆ ಅಡಿಪಾಯ ಹಾಕಿದ ಅಂಬೇಡ್ಕರ್ ರವರು ಎಂದು ಕರೆಯಲಾಗುತ್ತದೆ ಎಂದು ದಸಂಸ ಅಂಬೇಡ್ಕರ್ ಸಂಘಟನೆಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ದಸಂಸ ಅಂಬೇಡ್ಕರ್ ವಾದ ಸಂಘಟನೆ ವತಿಯಿಂದ ಭಾರತದ ಅಸ್ಪೃಶ್ಯರ ಪ್ರತಿರೋಧ ಚಳವಳಿ, ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ಶೋಷಿತರ ಸಂಘರ್ಷ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕುಡಿಯುವ ನೀರಿಗಾಗಿ ಅಂಬೇಡ್ಕರ್ ಕೈಗೊಂಡ ಮಹಾಡ್ ಸತ್ಯಾಗ್ರಹ ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳುವಳಿ. ಸಾರ್ವಜನಿಕವಾಗಿ ಕೆರೆಯ ನೀರನ್ನು ಸ್ಪರ್ಶಿಸುವ ಮೂಲಕ ಇದು ಎಲ್ಲರಿಗೂ ಸೇರಿದ್ದು ಎಂದು ಸಾರಿ ಹೇಳಿ ಮಾನವ ಹಕ್ಕುಗಳನ್ನು ಎತ್ತಿಹಿಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿರುವ ಮಹಾಡ್ ದಲ್ಲಿ 1927ರ ಮಾರ್ಚ್ 20ರಂದು ಸಾರ್ವಜನಿಕವಾಗಿ ಕೆರೆಯ ನೀರನ್ನು ಸ್ಪರ್ಶಿಸುವ ಮೂಲಕ ಇದು ಎಲ್ಲರಿಗೂ ಸೇರಿದ್ದು ಎಂದು ಸಾರಿ ಹೇಳಿ ಮಾನವ ಹಕ್ಕುಗಳನ್ನು ಎತ್ತಿಹಿಡಿದಿದ್ದರು ಎಂದರು.
ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಜೆ.ಸೋಮಶೇಖರ್ ಮಾತನಾಡಿ, ಸ್ವಾತಂತ್ರ್ಯ ಬಂದು 78 ವರ್ಷ ಕಳೆದು, ಆಧುನಿಕ ತಂತ್ರಜ್ಞಾನ ಬೆಳೆದರು ಜಾತಿ ವ್ಯವಸ್ಥೆ ಗಟ್ಟಿಯಾಗಿ ಉಳಿದಿದೆ ಎಂದು ಬೇಸ ವ್ಯಕ್ತಪಡಿಸಿದರು.
ಅಂಬೇಡ್ಕರ್ ಎಂದರೆ ಜ್ಞಾನ ಮತ್ತು ಪ್ರಜ್ಞೆ, ಮುಂಬಯಿಯಲ್ಲಿ 1923ರಲ್ಲಿ ಅಲ್ಲಿನ ಪುರಸಭೆ ಕೆರೆ ಕಟ್ಟೆಗಳನ್ನು ಸಾರ್ವಜನಿಕ ಸ್ಥಳ ಎಂದು ಘೋಷಣೆ ಮಾಡಲಾಗಿತ್ತು. 1927ರಲ್ಲಿ ಚೌದರ್ ಕೆರೆಯ ನೀರನ್ನು ಮುಟ್ಟುವ ಮೂಲಕ ನವ ಭಾರತದ ಹೊಸ ಚರಿತ್ರೆ ಸೃಷ್ಟಿಸಿದರು ಎಂದರು.
ಸಂವಿಧಾನದ ಮೂಲಕ ಶಿಕ್ಷಣದ ಹಕ್ಕು, ಮಾತನಾಡುವ ಹಕ್ಕು ಸಿಕ್ಕಿದೆ, ದೌರ್ಜನ್ಯ ವಿರುದ್ಧ ಕಾಯ್ದೆ ಇದ್ದರು ಸಮಾಜದಲ್ಲಿ ಶೋಷಣೆ ನಡೆಯುತ್ತಿದೆ ಎಂದರು.
ಶೋಷಿತರನ್ನು ವಿಶ್ವಾಸದಿಂದ ಜೊತೆಯಲ್ಲಿ ಕರೆದುಕೊಂಡು ಹೋಗುವ ಮನಸ್ಥಿತಿ ಎಲ್ಲರಲ್ಲೂ ಬರಬೇಕು ಎಂದು ತಿಳಿಸಿದರು. ದೇಶಕ್ಕೆ ರಾಜಕೀಯ ಸ್ವಾತಂತ್ರ್ಯಕಿಂತಲ್ಲೂ, ಸಾಮಾಜಿಕ ಸ್ವಾತಂತ್ರ್ಯ ಮುಖ್ಯ ಎಂಬುದು ಅಂಬೇಡ್ಕರ್ ಆಶಯವಾಗಿತ್ತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ, ದಸಂಸ ಜಿಲ್ಲಾ ಸಂಚಾಲಕ ಮಲ್ಲಳ್ಳಿ ನಾರಾಯಣ್, ಸಂಘಟನ ಸಂಚಾಲಕ ದೊಡ್ಡಸಿದ್ದು ಹಾದನೂರು, ವಿಭಾಗಿಯ ಸಂ ಸಂಚಾಲಕ ಬನ್ನಹಳ್ಳಿಸೋಮಣ್ಣ, ರಾಜ್ಯ ಸಮಿತಿ ಸದಸ್ಯ ಅಂಬುಗ ಮಲ್ಲೇಶ್, ವಿಭಾಗಿಯ ಸಂಚಾಲಕ ಹಾಲೇಶಪ್ಪ, ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟ ಸಂಚಾಲಕ ಧಮ್ಮ ಆಶೋಕ್, ಜಿಲ್ಲಾ ಸಂಚಾಲಕಿ ಅನುಷಾ, ಬೊಮ್ಮನಹಳ್ಳಿ ಕುಮಾರ್, ಕಳ್ಳಿ ಮುದ್ದನಹಳ್ಳಿ ಚಂದ್ರ, ವಾಟಾಳು ನಾಗರಾಜು, ಕರಡಿಪುರ ಕುಮಾರ್, ದೆವರಸಹಳ್ಳಿ ಬಸವರಾಜು, ಎಚ್ ಡಿ ಕೋಟೆ ಮತ್ತು ಸರಗೂರು ತಾಲೂಕು ಸಂಚಾಲಕರಾದ ಸಣ್ಣ ಕುಮಾರ್, ಕೂಡಗಿ ಗೋವಿಂದರಾಜು, ಸಂಘಟನಾ ಸಂಚಾಲಕರಾದ ಭೋಗೇಶ್ವರ ಕಾಲೋನಿ ಕಾಳಪ್ಪಾಜಿ, ರಾಚಪ್ಪ, ಮಹೇಶ್, ಆನಂದ, ಉದಯ್, ಶಮಿವುಲ್ಲಾ, ಚೆಲುವರಾಜು, ಕುಮಾರ್, ಹಾದನೂರು ಚಂದ್ರ, ಮಹದೇವಸ್ವಾಮಿ, ನಾಗೇಂದ್ರ, ಕೃಷ್ಣ ಕುರ್ಣೆಗಾಲ, ಶಿವರಾಜು, ಕೆಂಪರಾಜು,ಶಿವರುದ್ರ, ರಾಣಿ, ಪಾರ್ವತಿ, ಸೀರಮ್ಮ, ಸ್ವಪ್ನಾ,ಕಾವ್ಯ. ಇನ್ನೂ ಮುಖಂಡರು ಹಾಗೂ ರೈತ ಸಂಘದ ಪದಾಧಿಕಾರಿಗಳು ಇದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4