nammatumakuru

    Subscribe to Updates

    Get the latest creative news from FooBar about art, design and business.

    What's Hot

    ಉದ್ಧಟತನ ಕಲಿಸಿದ ಪಾಠ

    January 7, 2026

    ಜಿಲ್ಲಾ ಬಂಜಾರ ಸಂಘ–ಸೇವಾಲಾಲ್ ಪತ್ತಿನ ಸಹಕಾರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

    January 7, 2026

    ಅನ್ಯಾಯ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ ಸಾತ್ವಿಕ ಪ್ರತಿಭಟನಾಕಾರ ಬಂದಕುಂಟೆ ನಾಗರಾಜಯ್ಯ 

    January 7, 2026
    Facebook Twitter Instagram
    ಟ್ರೆಂಡಿಂಗ್
    • ಉದ್ಧಟತನ ಕಲಿಸಿದ ಪಾಠ
    • ಜಿಲ್ಲಾ ಬಂಜಾರ ಸಂಘ–ಸೇವಾಲಾಲ್ ಪತ್ತಿನ ಸಹಕಾರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ
    • ಅನ್ಯಾಯ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ ಸಾತ್ವಿಕ ಪ್ರತಿಭಟನಾಕಾರ ಬಂದಕುಂಟೆ ನಾಗರಾಜಯ್ಯ 
    • ತುರುವೇಕೆರೆ: ಕುರಿ ಮೇಕೆ ಸಾಕಾಣಿಕೆ ತರಬೇತಿ
    • ಕಲುಷಿತ ನೀರು, ಮಾಲಿನ್ಯ ದೂರಿಗೆ ಕಂಟ್ರೋಲ್ ರೂಮ್: ಜಿಲ್ಲಾಧಿಕಾರಿ ಶುಭ ಕಲ್ಯಾಣ್
    • ಬಂದಕುಂಟೆ ನಾಗರಾಜು: ಅಂಬೇಡ್ಕರ್ ಹೋರಾಟದ ರಥಕ್ಕೆ ತುಮಕೂರಿನಲ್ಲಿ ಸಾರಥ್ಯ ನೀಡಿದ ಮಹಾನ್ ಚೇತನ: ದಂಡಿನ ಶಿವರ ಕುಮಾರ್
    • ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶ: ಪ್ರೊ.ಕೆ.ಚಂದ್ರಣ್ಣ
    • ಹೆದ್ದಾರಿಯಲ್ಲಿನ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಲು ಒತ್ತಾಯಿಸಿ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಹಾಲಯ ಅಮಾವಾಸ್ಯೆ  | ಪಿತೃ ಪಕ್ಷ – ಎಡೆ ಹಬ್ಬ
    ಲೇಖನ September 22, 2025

    ಮಹಾಲಯ ಅಮಾವಾಸ್ಯೆ  | ಪಿತೃ ಪಕ್ಷ – ಎಡೆ ಹಬ್ಬ

    By adminSeptember 22, 2025No Comments2 Mins Read
    pithr paksha
    •  ವಿವೇಕಾನಂದ. ಎಚ್.ಕೆ.

    ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಭೇದವಿಲ್ಲದೆ ಬಹುತೇಕರ ಮನೆಯಲ್ಲಿ ಆಚರಿಸುವ ಒಂದು ಹಬ್ಬ…  ತೀರಿಹೋದ ಹಿರಿಯರ ನೆನಪಿನಲ್ಲಿ, ಅವರ ಇಷ್ಟದ ಊಟ, ಬಟ್ಟೆ, ವಸ್ತುಗಳು ಇತ್ಯಾದಿಗಳನ್ನು ಇಟ್ಟು ಅವರಿಗೆ ಅರ್ಪಿಸಿದಂತೆ ಮಾಡಿ ನಾವೇ ಉಪಯೋಗಿಸುವುದು…!

    ಜ್ಯೋತಿಷಿಗಳಂತು ಟಿವಿಗಳಲ್ಲಿ ಇದರ ಬಗ್ಗೆ ಇಲ್ಲಸಲ್ಲದ ಅನೇಕ ಮೌಢ್ಯಗಳನ್ನು ಹೇಳಿ ಜನರನ್ನು ಮತ್ತಷ್ಟು ದಿಕ್ಕು ತಪ್ಪಿಸುತ್ತಿದ್ದಾರೆ.  ಪುನರ್ ಜನ್ಮ, ಆತ್ಮಗಳ ಅಲೆದಾಟ, ಶವಗಳ ಕನಸುಗಳು.. ಇನ್ನೂ ಮುಂತಾದ ಭಯಂಕರ ವಿಷಯಗಳನ್ನು ಪ್ರಸ್ತಾಪಿಸಿ ಜನರನ್ನು ಭಯಗೊಳಿಸಿ ಹಬ್ಬದ ತೀವ್ರತೆ ಹೆಚ್ಚಿಸುತ್ತಿದ್ದಾರೆ. ‌ಒಂದೇ ಒಂದು ಟಿವಿ ವಾಹಿನಿ ವಿವೇಚನೆಯಿಂದ ಈ ಹಬ್ಬದ ವಿಮರ್ಶೆ ಮಾಡುತ್ತಿಲ್ಲ. ಊಹಾತ್ಮಕ ಮೂಡನಂಬಿಕೆಯನ್ನೇ ಮತ್ತಷ್ಟು ಆಳಕ್ಕೆ ಇಳಿಸುತ್ತಿದ್ದಾರೆ.


    Provided by
    Provided by

    ಬದಲಾದ ಕಾಲಮಾನದಲ್ಲಿ ಈ ಹಬ್ಬದ ಆಚರಣೆಯನ್ನು ಮತ್ತಷ್ಟು ವಿಶಾಲ, ಸರಳ, ಅರ್ಥಪೂರ್ಣ, ಪ್ರಾಯೋಗಿಕ ಮತ್ತು ಮಾನವೀಯಗೊಳಿಸಬಹುದಾದ ಒಂದು ಸಲಹೆ ಮತ್ತು ಮನವಿ…

    ವ್ಯಕ್ತಿಯ ಸಾವೇ ಆತನ ಕೊನೆ. ಬದುಕಿದ್ದಾಗ ಎಷ್ಟೇ ಪ್ರಮುಖನಾಗಿದ್ದರೂ ಉಸಿರು ನಿಂತ ನಂತರ ಆತನ ದೇಹ ಪ್ರಕೃತಿಯಲ್ಲಿ ಲೀನವಾಗುತ್ತದೆ. ಅನಂತರ ನಾವು ಮಾಡುವ ಯಾವ ಕ್ರಿಯೆಗಳು, ಚಟುವಟಿಕೆಗಳು ಅವನಿಗೆ ಅರಿವಾಗುವುದಿಲ್ಲ. ಅವೆಲ್ಲಾ ಬದುಕಿರುವವರ ಮಾನಸಿಕ ನೆಮ್ಮದಿಗಾಗಿ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳು. ಜನ್ಮ ಜನ್ಮಾಂತರ ಎಂಬುದು ಒಂದು ಸಾಂಕೇತಿಕ ಕಲ್ಪನೆ ಮಾತ್ರ.

    ಹೌದು ನಿಜ,  ಸತ್ತ ವ್ಯಕ್ತಿ ಅದರಲ್ಲೂ ನಮ್ಮ ತಾತ, ಅಜ್ಜಿ, ಅಪ್ಪ, ಅಮ್ಮ ಮುಂತಾದ ರಕ್ತ ಸಂಬಂಧಿಗಳು ಆಗಿದ್ದರೆ ಅವರನ್ನು, ಅವರ ಒಳ್ಳೆಯ ಆದರ್ಶ ಗುಣಗಳನ್ನು ನೆನಪಿಸಿಕೊಳ್ಳುವುದು ಮತ್ತು ಅದನ್ನು ಪಾಲಿಸುವುದು, ಬದುಕಿರುವ ಮುಂದಿನ ಪೀಳಿಗೆಯವರಿಗೆ ತಲುಪಿಸುವುದು ನಮ್ಮ ಕರ್ತವ್ಯ. ಅದರಲ್ಲಿ ಎರಡು ಮಾತಿಲ್ಲ.

    ಆದರೆ ಎಂದೋ ಸತ್ತಿರುವ ನಮ್ಮ ಹಿರಿಯರ ಹೆಸರಿನಲ್ಲಿ ಅನಾವಶ್ಯಕವಾಗಿ ಅವರಿಗೆ ತಲುಪದಿರುವ ಕಾರ್ಯಗಳನ್ನು ಸಂಪ್ರದಾಯವೆಂಬತೆ ಮಾಡಿ, ಹಣ ಮತ್ತು ಸಮಯ ವ್ಯರ್ಥಮಾಡುವ ಬದಲು, ಜೀವಂತವಿರುವ ನಮ್ಮ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಚಿಕ್ಕಪ್ಪ, ದೊಡ್ಡಮ್ಮ ಮುಂತಾದ ನಮ್ಮ ಅವಲಂಬಿತರ ಬದುಕಿನ ಕೊನೆಯ ಹಂತದಲ್ಲಿರುವ  ಹಿರಿಯ ಚೇತನಗಳಿಗೆ ಮಹತ್ವ ನೀಡಿ, ವೃದ್ಧಾಪ್ಯದಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವುದು ಹೆಚ್ಚು ಉಪಯುಕ್ತವಲ್ಲವೇ. ಅದರಲ್ಲೂ ಇಂದಿನ ಆಧುನಿಕ ಜೀವನದಲ್ಲಿ ನೆಮ್ಮದಿಯ ಆಶ್ರಯಕ್ಕಾಗಿ ಪರಿತಪ್ಪಿಸುತ್ತಿರುವ ನಮ್ಮ ಪೋಷಕರಿಗೆ ನೆರವಾಗುವುದು ಸತ್ತ ವ್ಯಕ್ತಿಗೆ ನಾವು ತೋರಿಸುವ ಗೌರವಕ್ಕಿಂತ ಹೆಚ್ಚು ಮಾನವೀಯವಲ್ಲವೆ..!

    ಇದ್ದಾಗ ಅವರನ್ನು ಸರಿಯಾಗಿ ನೋಡಿಕೊಳ್ಳದೆ ತುಚ್ಚವಾಗಿ ಕಂಡು ಸತ್ತ ನಂತರ ಅವರಿಗಾಗಿ ಏನು ಮಾಡಿದರೇನು ಫಲ. ವಾಸ್ತವ ನೆಲೆಯಲ್ಲಿ ಆಗಿಹೋದವರನ್ನು ಮಾನಸಿಕವಾಗಿ ಗೌರವಿಸಿ ಕೃತಜ್ಞತೆ ಅರ್ಪಿಸೋಣ.  ಆದರೆ ಅದರ ಜೊತೆಗೆ ನಮ್ಮೆಲ್ಲಾ ತನು, ಮನ, ಧನಗಳನ್ನು ಭೌತಿಕವಾಗಿ ನಮ್ಮೊಂದಿಗಿರುವ ನಮ್ಮ ಆತ್ಮೀಯ ಹಿರಿಯ ಜೀವಗಳಿಗೆ ಮೀಸಲಿಡೋಣ. ಈ ಹಬ್ಬವನ್ನು ಹೆಚ್ಚು ಮಾನವೀಯ, ಜೀವಪರಗೊಳಿಸೋಣ. ಇದಕ್ಕಾಗಿ ಹೆಚ್ಚು ಶ್ರಮವೇನು ಪಡಬೇಕಾಗಿಲ್ಲ. ಕೇವಲ ಒಂದು ಸಣ್ಣ ಜೀವಪರ ನಿಲುವಿನಿಂದ ಇದು ಸಾಧ್ಯ.  ಸತ್ತವರ ನೆನಪುಗಳ ಸಾರ್ಥಕತೆ ಬದುಕಿರುವ ನಮ್ಮ ಅವಲಂಬಿತರ ಸೇವೆಯಲ್ಲಿ ಅಡಗಿದೆ… ಅದೇ ಮಹಾಲಯ ಅಮಾವಾಸ್ಯೆ ಹಬ್ಬ, ಅದೇ ಪಿತೃ ಪಕ್ಷದ ಪ್ರಾಮುಖ್ಯತೆ, ಅದೇ ಎಡೆ ಹಬ್ಬದ ಶ್ರೇಷ್ಠತೆ…

    ಬದಲಾವಣೆ ಇಲ್ಲಿಂದಲೇ, ನಮ್ಮಿಂದಲೇ ಪ್ರಾರಂಭವಾಗಲಿ.  ಮತ್ತೆ ಇದು ಹಿಂದೂ ಸಂಪ್ರದಾಯ ವಿರೋಧಿ ನಿಲುವು ಎಂದು ಭಾವಿಸದಿರಿ. ಅನುಭವದಿಂದ ಮೂಡಿದ ಸಾಂಪ್ರದಾಯಿಕ, ವೈಚಾರಿಕ ಆಚರಣೆಗಳು ಕಾಲದ ಪರೀಕ್ಷೆಯಲ್ಲಿ ಮತ್ತಷ್ಟು ಹೊಳಪು ಮೂಡಿ ಹೆಚ್ಚು ಪ್ರಯೋಜನಕಾರಿಯಾಗಲಿ ಎಂಬ ಆಶಯವಷ್ಟೆ..


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

     

    admin
    • Website

    Related Posts

    ಉದ್ಧಟತನ ಕಲಿಸಿದ ಪಾಠ

    January 7, 2026

    ವಾಸ್ತವ ಒಡೆದು ನೋಡಿದಾಗ?

    January 2, 2026

    ಮಧುಗಿರಿಯ ಹರಿಹರೇಶ್ವರ ತತ್ತ್ವವೇ ಇಂದಿನ ಸಮಾಜಕ್ಕೆ ಅಗತ್ಯ:  ಜ.18ರಂದು ಹೊಸ ವರ್ಷದ ಮೊದಲ ಅಮಾವಾಸ್ಯೆ ವಿಶೇಷ ದರ್ಶನ

    December 31, 2025

    Comments are closed.

    Our Picks

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಉದ್ಧಟತನ ಕಲಿಸಿದ ಪಾಠ

    January 7, 2026

    ಒಮ್ಮೆ ಒಬ್ಬ ರಾಜ ಕುದುರೆ ಏರಿ ವನವಿಹಾರ ಮಾಡುತ್ತಾ, ಸೈನಿಕರಿರುವ ತನ್ನ ಬಿಡಾರದಿಂದ ಕಾಡಿನ ಸೌಂದರ್ಯ ಸವಿಯಲು ಬಹಳ ದೂರ…

    ಜಿಲ್ಲಾ ಬಂಜಾರ ಸಂಘ–ಸೇವಾಲಾಲ್ ಪತ್ತಿನ ಸಹಕಾರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

    January 7, 2026

    ಅನ್ಯಾಯ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ ಸಾತ್ವಿಕ ಪ್ರತಿಭಟನಾಕಾರ ಬಂದಕುಂಟೆ ನಾಗರಾಜಯ್ಯ 

    January 7, 2026

    ತುರುವೇಕೆರೆ: ಕುರಿ ಮೇಕೆ ಸಾಕಾಣಿಕೆ ತರಬೇತಿ

    January 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.