ಬೆಳಗಾವಿ: ಮಹಾನಗರ ಪಾಲಿಕೆ ಮಹಾಪೌರ ಹಾಗೂ ಉಪಮಾಪೌರ ಚುನಾವಣೆ ಫೆಬ್ರುವರಿ 6ರಂದು ನಡೆಯಲಿದೆ. ಕಳೆದ ಒಂದೂವರೆ ವರ್ಷಗಳ ಬಳಿಕ ಈ ಚುನಾವಣೆ ನಡೆಯುತ್ತಿರುವುದು ಬೆಳಗಾವಿಯಲ್ಲಿ ಬಹಳ ಕುತೂಹಲವನ್ನು ಮೂಡಿಸಿದೆ.
2021ರಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆದಿದ್ದು ಇದೇ ಮೊದಲು ಬಾರಿಗೆ ರಾಷ್ಟ್ರೀಯ ಮತ್ತು ಕ್ಷೇತ್ರೀಯ ಪಕ್ಷಗಳು ತಮ್ಮ ಚುನಾವಣೆ ಚಿಹ್ನೆಗಳನ್ನು ಬಳಸಿಕೊಂಡು ಚುನಾವಣೆ ಎದುರಿಸಿದ್ದವು. ಬೆಳಗಾವಿ ಮಹಾನಗರ ಪಾಲಿಕೆ ಮೊದಲಿನಿಂದಲೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಬಲ ಮತ್ತು ಭದ್ರಕೋಟೆಯಾಗಿತ್ತು. ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಮಣಿಸಲು ರಾಷ್ಟ್ರೀಯ ಪಕ್ಷಗಳು ತನ್ನದೇ ಆದಂತ ರಣನೀತಿಯನ್ನು ಅನುಸರಿಸಿಕೊಂಡವು.
ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಒಂದು ಪಕ್ಷಕ್ಕೆ ಸ್ಪಷ್ಟವಾದ ಬಹುಮತವನ್ನುಪಡೆದುಕೊಂಡಿರುವ ಪಕ್ಷವೆಂದರೆ ಭಾರತೀಯ ಜನತಾ ಪಕ್ಷ 58 ವಾರ್ಡ್ ಗಳಲ್ಲಿ ಭಾರತೀಯ ಜನತಾ ಪಕ್ಷ 35 ಅಭ್ಯರ್ಥಿಗಳು ವಿಜಯಶಾಲಿಯಾಗಿ ಬಂದರೆ ಕಾಂಗ್ರೆಸ್ ನ 10 ಅಭ್ಯರ್ಥಿಗಳು ಜಯಭೇರಿ ಭಾರಿಸಿದವು. ಎ.ಐ.ಎಂ.ಐ.ಎಂ ಪಕ್ಷ ಒಂದು ಸದಸ್ಯರನ್ನು ಹೊಂದಿದ್ದರೆ 12 ಜನ ಪಕ್ಷತರು ಇದ್ದಾರೆ ಇದೇ ಮೊದಲ ಬಾರಿಗೆ ಸಂಪೂರ್ಣ ಬಹುಮತದಿಂದ ಭಾರತೀಯ ಜನತಾ ಪಕ್ಷ ಮಹಾನಗರ ಪಾಲಿಕೆ ಚುಕ್ಕಾಣಿಯನ್ನು ಹಿಡಿಯಲಿದೆ.
ಮಹಾಪೌರ ಸಾಮಾನ್ಯ ಮಹಿಳಾ ಮೀಸಲಾತಿ ಹೊಂದಿದ್ದು ಉಪ ಮಹಾಪೌರ ಒ ಬಿ ಸಿ ಮಹಿಳಾ ಮೀಸಲಾತಿಯನ್ನು ಹೊಂದಿದೆ. ಇದು ಭಾರತೀಯ ಜನತಾ ಪಕ್ಷದ ರಾಜಕೀಯ ಬೆಳವಣಿಗೆಗೆ ಒಂದು ಮಹತ್ವಪೂರ್ಣವಾದಂತ ವಿಜಯವೆಂದೇ ಪರಿಗಣಿಸಬಹುದು.ಈ ವಿಜಯದ ರೂವಾರಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಹಾಗೂ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ.
ಅವರ ರಣತಂತ್ರ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಕಾಂಗ್ರೆಸ್ ಪಕ್ಷ ವನ್ನು ಕಟ್ಟಿ ಹಾಕಲು ಯಶಸ್ವಿ ಆಗಿದೆ. ಅಲ್ಲದೆ 58 ವಾರ್ಡ್ ಗಳಲ್ಲಿ ಭಾರತೀಯ ಜನತಾ ಪಕ್ಷ ಹೆಚ್ಚಿನ ಅಂತರ ಹಾಗೂ ಮತಗಳನ್ನು ಪಡೆದಿರುವುದು ಕೂಡ ಗಮನಾರ್ಹ. ಈ ಎಲ್ಲಾ ಬೆಳವಣಿಗೆಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಬಾಸವಾಗಿರುವ ಮಹಾಪೌರ ಹಾಗೂಉಪ ಮಹಾಪೌರ ಉತ್ತರ ಕ್ಷೇತ್ರದ ಹಾಗೂ ದಕ್ಷಿಣ ಕ್ಷೇತ್ರಕ್ಕೆ ಯಾವ ಹುದ್ದೆ ಒಲಿದು ಬರಲಿದೆ ಅನ್ನೋದು ಎಲ್ಲರ ಗಮನ ಬರುವ ಫೆಬ್ರುವ 6 ರಂದು ನಡೆಯಲಿರುವ ಮಹಾಪೌರ ಹಾಗೂ ಉಪ ಮಹಾಪೌರ ಚುನಾವಣೆ ನಂತರ ತಿಳಿದು ಬರಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


