40 ಶಾಸಕರೊಂದಿಗೆ ಅಸ್ಸಾಂನ ಗುವಾಹಟಿ ತಲುಪಿರುವ ಶಿವಸೇನೆ ಶಾಸಕ ಏಕನಾಥ್ ಶಿಂಧೆ ಇಂದು ಮಹತ್ವದ ಹೆಜ್ಜೆ ಇದುವ ಸಾಧ್ಯತೆ ಇದೆ. ಸರ್ಕಾರದ ವಿದುದ್ದ ಬಂಡಾಯವೆದ್ದಿರುವ ಏಕನಾಥ್ ಶಿಂಧೆ, ಠಾಕ್ರೆ ಸರ್ಕಾರದ ಸಂಕಷ್ಟಗಳನ್ನು ಹೆಚ್ಚಿಸಿದ್ದಾರೆ. ಗುವಾಹಟಿ ತಲುಪಿರುವ ಶಾಸಕರ ಪೈಕಿ ಶಿವಸೇನೆಯ 34, ಇತರ ಪಕ್ಷಗಳ 6 ಶಾಸಕರು ಇದ್ದಾರೆ ಎನ್ನಲಾಗಿದೆ.
ಇಂದು ಮಹತ್ವದ ನಿರ್ಧಾರ ಸಾಧ್ಯತೆ :
ಮೂಲಗಳ ಪ್ರಕಾರ, ಏಕನಾಥ್ ಶಿಂಧೆ ಅವರು ಇಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಫ್ಯಾಕ್ಸ್ ಮೂಲಕ ಪತ್ರ ರವಾನಿಸುವ ಸಾಧ್ಯತೆ ಇದೆ. ಈ ಪತ್ರದ ಮೂಲಕ ಮಹಾವಿಕಾಸ್ ಅಘಾಡಿ ಸರ್ಕಾರದಿಂದ 40 ಜನ ಶಾಸಕರು ತಮ್ಮ ಬೆಂಬಲವನ್ನು ಹಿಂತೆಗೆದುಕೊಳ್ಳುವ ಬಗ್ಗೆ ತಮ್ಮ ಹಕ್ಕು ಮಂಡಿಸಬಹುದು. ಹೀಗಾದರೆ ಈ ಪತ್ರದ ಆಧಾರದ ಮೇಲೆ, ಉದ್ಧವ್ ಸರ್ಕಾರ ಬಹುಮತವನ್ನು ಸಾಬೀತುಪಡಿಸಬೇಕಾದ ನಿರ್ಧಾರವನ್ನು ನಂತರ ರಾಜ್ಯಪಾಲರು ತೆಗೆದುಕೊಳ್ಳುತ್ತಾರೆ.
ಮತ್ತೊಂದೆಡೆ, ಮುಂಬೈನಲ್ಲಿರುವ ಶಿವಸೇನೆ ಶಾಸಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಏಕನಾಥ್ ಶಿಂಧೆ ಸತತ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ತನ್ನ ಬೆಂಬಲಿಗರ ಸಂಖ್ಯೆಯನ್ನು ಮೂರನೇ ಎರಡರ ಗಡಿ ದಾಟಿಸುವ ಉದ್ದೇಶ ಅವರದ್ದು. ಈ ಗುರಿ ಸಾಧಿಸುವಲ್ಲಿ ಶಿಂಧೆ ಯಶಸ್ವಿಯಾಗುವ ಸಾಧ್ಯತೆಯಿದೆ ಎಂದು ಹೇಳುತ್ತವೆ ಮೂಲಗಳು. ಮತ್ತೊಂದೆಡೆ, ಸಿಎಂ ಉದ್ಧವ್ ಠಾಕ್ರೆ ಬೆಂಬಲಿಗ ಶಾಸಕರನ್ನು ಕೂಡಾ ಮುಂಬೈನ ಹೋಟೆಲ್‌ನಲ್ಲಿ ಇರಿಸಲಾಗಿದೆ.
ಮಾತ್ರವಲ್ಲ, ಏಕನಾಥ್ ಶಿಂಧೆ ಅವರ ಪ್ರತಿಯೊಂದು ಕ್ರಮದ ಮೇಲೆ ಸಿಎಂ ಠಾಕ್ರೆ ನಿಗಾವಹಿಸಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಎಂವಿಎ ಸಚಿವರೊಂದಿಗೆ ಉದ್ಧವ್ ಠಾಕ್ರೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮಹತ್ವದ ನಿರ್ಧಾರ ಹಿರ ಬರುವ ಸಾಧ್ಯತೆ ಕೂಡಾ ಇದೆ.
ಗುವಾಹಟಿಯಲ್ಲಿ ಬಂಡಾಯ ಶಾಸಕರು:
ಏಕನಾಥ್ ಶಿಂಧೆ ಮತ್ತು ಇತರ ಶಾಸಕರು ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ತಂಗಿದ್ದಾರೆ. ಈ ಶಾಸಕರ ಜೊತೆಯಲ್ಲಿ ಅಸ್ಸಾಂ ಸರ್ಕಾರದ ಕೆಲವು ಮಂತ್ರಿಗಳು ಇದ್ದಾರೆ ಎನ್ನಲಾಗಿದೆ. ಬಂಡಾಯ ಶಾಸಕರು ಹಾಗೂ ಬಿಜೆಪಿ ಸೇರಿ ಮಹಾರಾಷ್ಟದಲ್ಲಿ ಸರ್ಕಾರ ರಚಿಸುವ ಮಾತು ಕೇಳಿ ಬರುತ್ತಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz