ಬಿಹಾರದ ಭಾಗಲ್ಪುರ ಜಿಲ್ಲೆಯ ಸಾರ್ವಜನಿಕ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಎದೆ, ಕೈ, ಕಿವಿ ಮತ್ತು ಮೂಗನ್ನು ಕತ್ತರಿಸಿದ್ದಾನೆ. ಭಾಗಲ್ಪುರ ಜಿಲ್ಲೆಯ ಪರಪೈಂಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯು ಮಹಿಳೆಯೊಂದಿಗೆ ಸಲುಗೆಯಿಂದ ಇದ್ದನು. ಆದರೆ ಮಹಿಳೆ ಆತನಿಂದ ದೂರವಿರಲು ನಿರ್ಧರಿಸಿದ್ದರಿಂದ ಹಾಗೂ ತನ್ನ ಮನೆಗೆ ಬರುವುದನ್ನು ವಿರೋಧಿಸಿದ್ದಕ್ಕೆ ಈ ಅಪರಾಧ ಎಸಗಿದ್ದಾನೆ ಎಂದು ಹೇಳಲಾಗಿದೆ.
ಆರೋಪಿಯನ್ನು ಮೊಹಮ್ಮದ್ ಶಕೀಲ್ ಎಂದು ಗುರುತಿಸಲಾಗಿದ್ದು, ಮೊದಲೇ ಪ್ಲ್ಯಾನ್ ಮಾಡಿ ಆಯುಧವನ್ನು ಮಡಕೆಯೊಳಗೆ ಬಚ್ಚಿಟ್ಟಿದ್ದ ಎನ್ನಲಾಗಿದೆ.
ದಿನಸಿ ಖರೀದಿಸಲು ಹೋದ ಮಹಿಳೆಗೆ ಹೊಂಚು ಹಾಕಿ ಈ ಕೃತ್ಯ ಎಸಗಿದ್ದಾನೆ. ನೀಲಂ ದೇವಿ ಎಂಬ ಮಹಿಳೆಯನ್ನು ಕೆಳಕ್ಕೆ ತಳ್ಳಿ, ಆಕೆಯ ದೇಹದ ವಿವಿಧ ಭಾಗಗಳನ್ನು ಕತ್ತರಿಸಿದ್ದಾನೆ. ಅವರನ್ನು ಭಾಗಲ್ಪುರದ ಜವಾಹರಲಾಲ್ ನೆಹರೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದೇಹದಿಂದ ತೀವ್ರ ರಕ್ತ ಸೋರಿಕೆಯಾಗಿ ಮೃತಪಟ್ಟಿದ್ದಾರೆ.
ನೀಲಂ ದೇವಿಯೊಂದಿಗೆ ಹತ್ತಿರವಾಗುತ್ತಿರುವುದಕ್ಕೆ ಶಕೀಲ್‌ಗೆ ಮಹಿಳೆಯ ಮನೆಯವರು ಬೆದರಿಕೆ ಹಾಕಿದ್ದರು. ಆಕೆ ತನಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ಆತ ಆಕ್ರೋಶಗೊಂಡಿದ್ದಾನೆ. ಮಹಿಳೆಗೆ ಚಿಕಿತ್ಸೆ ನೀಡಿದ ಡಾ. ಕೃಷ್ಣ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಮಹಿಳೆಯ ಎರಡೂ ಕೈಗಳನ್ನು ಮತ್ತು ಸ್ತನಗಳನ್ನು ಸಂಪೂರ್ಣವಾಗಿ ಕತ್ತರಿಸಲಾಗಿದೆ ಎಂದು ಹೇಳಿದ್ದಾರೆ. ಬೆನ್ನಿನ ಮೇಲೆ ಆಳವಾದ ಗಾಯಗಳಿದ್ದವು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾಳೆ. ಮಹಿಳೆ ದಾಳಿ ಮಾಡಿದ ಆರೋಪಿಯ ಹೆಸರನ್ನು ಗಾಯಗೊಂಡ ಸ್ಥಿತಿಯಲ್ಲೇ ಹೇಳಿದ್ದು, ಸ್ಥಳೀಯರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಐವರನ್ನು ಪೊಲೀಸರು ವಶಕಕೆ ಪಡೆದಿದ್ದಾರೆ. ಕೃತ್ಯವೆಸಗಿದ ಆರೋಪಿ ಶಕೀಲ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಬಿಹಾರದ ಭಾಗಲ್ಪುರ ಜಿಲ್ಲೆಯ ಸಾರ್ವಜನಿಕ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಎದೆ, ಕೈ, ಕಿವಿ ಮತ್ತು ಮೂಗನ್ನು ಕತ್ತರಿಸಿದ್ದಾನೆ. ಭಾಗಲ್ಪುರ ಜಿಲ್ಲೆಯ ಪರಪೈಂಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯು ಮಹಿಳೆಯೊಂದಿಗೆ ಸಲುಗೆಯಿಂದ ಇದ್ದನು. ಆದರೆ ಮಹಿಳೆ ಆತನಿಂದ ದೂರವಿರಲು ನಿರ್ಧರಿಸಿದ್ದರಿಂದ ಹಾಗೂ ತನ್ನ ಮನೆಗೆ ಬರುವುದನ್ನು ವಿರೋಧಿಸಿದ್ದಕ್ಕೆ ಈ ಅಪರಾಧ ಎಸಗಿದ್ದಾನೆ ಎಂದು ಹೇಳಲಾಗಿದೆ.
ಆರೋಪಿಯನ್ನು ಮೊಹಮ್ಮದ್ ಶಕೀಲ್ ಎಂದು ಗುರುತಿಸಲಾಗಿದ್ದು, ಮೊದಲೇ ಪ್ಲ್ಯಾನ್ ಮಾಡಿ ಆಯುಧವನ್ನು ಮಡಕೆಯೊಳಗೆ ಬಚ್ಚಿಟ್ಟಿದ್ದ ಎನ್ನಲಾಗಿದೆ.
ದಿನಸಿ ಖರೀದಿಸಲು ಹೋದ ಮಹಿಳೆಗೆ ಹೊಂಚು ಹಾಕಿ ಈ ಕೃತ್ಯ ಎಸಗಿದ್ದಾನೆ. ನೀಲಂ ದೇವಿ ಎಂಬ ಮಹಿಳೆಯನ್ನು ಕೆಳಕ್ಕೆ ತಳ್ಳಿ, ಆಕೆಯ ದೇಹದ ವಿವಿಧ ಭಾಗಗಳನ್ನು ಕತ್ತರಿಸಿದ್ದಾನೆ. ಅವರನ್ನು ಭಾಗಲ್ಪುರದ ಜವಾಹರಲಾಲ್ ನೆಹರೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದೇಹದಿಂದ ತೀವ್ರ ರಕ್ತ ಸೋರಿಕೆಯಾಗಿ ಮೃತಪಟ್ಟಿದ್ದಾರೆ.
ನೀಲಂ ದೇವಿಯೊಂದಿಗೆ ಹತ್ತಿರವಾಗುತ್ತಿರುವುದಕ್ಕೆ ಶಕೀಲ್‌ಗೆ ಮಹಿಳೆಯ ಮನೆಯವರು ಬೆದರಿಕೆ ಹಾಕಿದ್ದರು. ಆಕೆ ತನಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ಆತ ಆಕ್ರೋಶಗೊಂಡಿದ್ದಾನೆ. ಮಹಿಳೆಗೆ ಚಿಕಿತ್ಸೆ ನೀಡಿದ ಡಾ. ಕೃಷ್ಣ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಮಹಿಳೆಯ ಎರಡೂ ಕೈಗಳನ್ನು ಮತ್ತು ಸ್ತನಗಳನ್ನು ಸಂಪೂರ್ಣವಾಗಿ ಕತ್ತರಿಸಲಾಗಿದೆ ಎಂದು ಹೇಳಿದ್ದಾರೆ.
ಬೆನ್ನಿನ ಮೇಲೆ ಆಳವಾದ ಗಾಯಗಳಿದ್ದವು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾಳೆ. ಮಹಿಳೆ ದಾಳಿ ಮಾಡಿದ ಆರೋಪಿಯ ಹೆಸರನ್ನು ಗಾಯಗೊಂಡ ಸ್ಥಿತಿಯಲ್ಲೇ ಹೇಳಿದ್ದು, ಸ್ಥಳೀಯರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಐವರನ್ನು ಪೊಲೀಸರು ವಶಕಕೆ ಪಡೆದಿದ್ದಾರೆ. ಕೃತ್ಯವೆಸಗಿದ ಆರೋಪಿ ಶಕೀಲ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy