ತುಮಕೂರು: ಪಟ್ಟಣದ ಅಶೋಕ ನಗರದಲ್ಲಿರುವ ಮಹೇಶ್ ಪಿ.ಯು ಕಾಲೇಜಿನಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸರಳವಾಗಿ ಹಾಗೂ ಸಂಭ್ರಮದಿಂದ ಕಾಲೇಜಿನ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಆಚರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ವಿದ್ಯಾ ಪಾಟೀಲ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯ ದಿನವೆಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಂವಿಧಾನ ಜಾರಿಗೆ ಬಂದ ಈ ದಿನ ಬಹಳ ವಿಶೇಷವಾಗಿದ್ದು, ಭಾರತ ಸ್ವಾತಂತ್ರ್ಯಕ್ಕೆ ಹೋರಾಡಿದ ಹಲವು ಪ್ರಮುಖ ನಾಯಕರನ್ನು ಮತ್ತು ಸಂವಿಧಾನ ಜಾರಿಗೆ ಶ್ರಮಿಸಿದಂತಹ ಪ್ರತಿಯೊಬ್ಬರು ನಮಗೆ ಸ್ಪೂರ್ತಿಯಾಗಿದ್ದಾರೆ. ಈ ದಿನ ಪ್ರಾಂಶುಪಾಲರಾಗಿ ಧ್ವಜಾರೋಹಣ ಮಾಡಿದ ನನಗೆ ಹೆಮ್ಮೆಯಿದೆ ಎಂದರು.
ಉಪನ್ಯಾಸಕ ಶ್ರೀನಿವಾಸ್ ಕಲ್ಲೂರು ಮಾತನಾಡಿ, ಗಣರಾಜ್ಯೋತ್ಸವ ದಿನವನ್ನು ಭಾರತದ ಪ್ರತಿ ಸರ್ಕಾರಿ ಕಚೇರಿಗಳು, ಇಲಾಖೆಗಳು ಮತ್ತು ಸಂಸ್ಥೆಗಳು, ಹಾಗೂ ಎಲ್ಲಾ ಶಾಲಾ, ಕಾಲೇಜುಗಳು ಸೇರಿದಂತೆ ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ವಿಶೇಷವಾಗಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಭಾರತದ ಸರ್ವ ಪ್ರಜೆಗೂ ಸಮಾನ ಶಿಕ್ಷಣ, ಸರ್ವರಿಗೂ ಹಕ್ಕುಗಳನ್ನು ನೀಡಿರುವ ಸಂವಿಧಾನ ಜಾರಿಗೆ ತಂದ ಈ ದಿನವನ್ನು ನಾವೆಲ್ಲರೂ ವಿಶೇಷವಾಗಿ ಗೌರವಿಸಬೇಕು ಹಬ್ಬದ ದಿನವಾಗಿ ಆಚರಿಸಬೇಕು ಮತ್ತು ಸಂವಿಧಾನ ಜಾರಿಗೆ ಶ್ರಮಿಸಿರುವ ಎಲ್ಲಾ ಮಹಾನ್ ನಾಯಕರನ್ನು, ಅವರ ಸೇವೆಯನ್ನು ನೆನೆದು ಅವರಿಗೆ ವಿಶೇಷವಾಗಿ ವಂದಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಸುರೇಶ್ ಹಾಗೂ ಉಪನ್ಯಾಸಕರಾದ ಹರೀಶ್ ಹಂತದ ಸಿಬ್ಬಂದಿ ವೃಂದ ನಿರೂಪಿಸಿದರು. ಉಪನ್ಯಾಸಕಿ ನಾಗಲಕ್ಷ್ಮಿ ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಶಾಂತಿ-ಸೌಹಾರ್ದತೆಯ ಸಮವಸ್ತ್ರಗಳನ್ನು ಧರಿಸುವುದರ ಮೂಲಕ ಕಂಗೊಳಿಸಿದರು.
ವರದಿ: ಸಚಿನ್ ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy