ಆಸ್ತಿ ಕಬಳಿಸುವ ಉದ್ದೇಶದಿಂದ ಗ್ಯಾಂಗ್ ರೇಪ್ ಕತೆ ಕಟ್ಟಿದ ಮಹಿಳೆ ಹಾಗೂ ಮೂವರು ಸಹಚರರನ್ನು ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಮೂಲದ ಮಹಿಳೆ ಹಾಗೂ ಆಕೆಗೆ ಸಹಕರಿಸಿದ ಆಜಾದ್, ಅಫ್ಜಲ್ ಮತ್ತು ಗೌರವ್ ಬಂಧಿತರು. ಐವರು ನನ್ನನ್ನು ಅಪಹರಿಸಿ ಎರಡು ದಿನಗಳ ಕಾಲ ಗ್ಯಾಂಗ್ ರೇಪ್ ಮಾಡಿದರು ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು. ಪ್ರಕರಣ ಭೇದಿಸಿದ ಪೊಲೀಸರು ಮಹಿಳೆಯ ಮೇಲೆ ವಂಚನೆ ಹಾಗೂ ನಕಲಿ ಸಹಿ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.
36 ವರ್ಷದ ಮಹಿಳೆ ಬ್ಯಾಗ್ ನಲ್ಲಿ ಕೈಕಾಲು ಕಟ್ಟಿದ ಪರಿಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಗುಪ್ತಾಂಗಕ್ಕೆ ರಾಡ್ ಇರಿಸಲಾಗಿತ್ತು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಳ್ ಹೇಳಿದ್ದರು. ಆದರೆ ಪೊಲೀಸರು ಅವರ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.
ಮಹಿಳೆ ಆರೋಪ ಮಾಡಿದ ನಾಲ್ವರ ವಿರುದ್ಧ ಕ್ಲೀನ್ ಚಿಟ್ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಅವರ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ. ಅವರು ತಪ್ಪು ಮಾಡದೇ ಇರುವಾಗ ಕ್ಲೀನ್ ಚಿಟ್ ನೀಡುವ ಪ್ರಶ್ನೆ ಬರುವುದಿಲ್ಲ ಎಂದು ಪೊಲೀಸರು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


