ಗುಬ್ಬಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಗುಬ್ಬಿ ತಾಲೂಕಿನ MN ಕೋಟೆ ವಲಯ ಎಂ.ಎನ್. ಕೋಟೆ ಕಾರ್ಯಕ್ಷೇತ್ರದ ಅದಲಗೆರೆ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮವನ್ನು ನಿರ್ದೇಶಕಿ ದಯಾಶೀಲ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ಮಾತೃ ಶ್ರೀ ಅಮ್ಮನವರ ಆಶಯದಂತೆ ಜ್ಞಾನ ವಿಕಾಸ ಕೇಂದ್ರ ವು ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಹಾಗೂ ಸ್ವ ಉದ್ಯೋಗ ನಡೆಸುವ ಹಲವು ಯೋಜನೆ ರೂಪಿಸುವ ಕುರಿತು ಸಂಕ್ಷಿಪ್ತವಾಗಿ ಮಹಿಳೆಯರಿಗೆ ಮಾಹಿತಿ ನೀಡುತ್ತಿದ್ದು, ಶ್ರೀ ಕ್ಷೇತ್ರವು ಮಹಿಳೆಯರ ಅಭಿವೃದ್ಧಿಗೆ ಸಾಕಷ್ಟು ಆರ್ಥಿಕ ಸಹಾಯ ತರಬೇತಿ ನೀಡುವಲ್ಲಿ ಮುಂದಾಗಿದೆ. ಅದರಂತೆ ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಮಹಿಳೆಯರಿಗೆ ಸಲಹೆ ನೀಡಿದರು.
ಜ್ಞಾನ ವಿಕಾಸ ಕೇಂದ್ರದ ಸದಸ್ಯರು , ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಚಟುವಟಿಕೆ ನಡೆಸಿದರು. ಕಾರ್ಯ ಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ದಯಾಶೀಲ ಹಾಗೂ ತಾಲೂಕಿನ ಯೋಜನಾಧಿಕಾರಿ ಹರೀಶ್ ಆರ್.ಎಸ್. , ಜ್ಞಾನ ವಿಕಾಸ ಕೇಂದ್ರದ ಭೂಮಿಕ ಕೇಂದ್ರದ ಅಧ್ಯಕ್ಷರಾದ ಶಿವಗಂಗಮ್ಮ, ಅದಲಗೆರೆ ಗ್ರಾಮದ ಹಿರಿಯರಾದ ಪಾಲಕ್ಷಮ್ಮ, ಗುಬ್ಬಿ ತಾಲ್ಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿಯಾದ ಪ್ರೇಮ , ಎಂ.ಎನ್.ಕೋಟೆ ವಲಯದ ಮೇಲ್ವಿಚಾರಕ ವಿಶ್ವನಾಥಪೂಜಾರಿ, ಅದಲಗೆರೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯಾದ ಲೋಕಮ್ಮ, ಅದಲಗೆರೆ ಒಕ್ಕೂಟದ ಪದಾಧಿಕಾರಿಯಾದ ನಾಗವೇಣಿ ಜಿಲ್ಲಾ ಕೇಂದ್ರ ದ ಸಿಬ್ಬಂದಿ ಸಂದೀಪ್ ಹಾಗೂ ಭೂಮಿಕಾ ಜ್ಞಾನವಿಕಾಸ ಕೇಂದ್ರದ ಸರ್ವ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಡಿ.ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy