ತುರುವೇಕೆರೆ: ತಾಲೂಕಿನ ಚಿಕ್ಕ ತುರುವೇಕೆರೆ ಗ್ರಾಮದ ಮಲ್ಲಾಘಟ್ಟಕೆರೆಯ ಹಳ್ಳದಿಂದ ದಬ್ಬೇಘಟ್ಟ ಹೋಬಳಿಯ 29 ಕೆರೆಗಳಿಗೆ ನೀರು ತುಂಬಿಸುವ 50 ಕೋಟಿ ರೂ ವೆಚ್ಚದ ಏತ ನೀರಾವರಿ ಯೋಜನೆಗೆ ಇಂದು ಶಾಸಕ ಮಸಾಲ ಜಯರಾಮ್ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ಈ ಯೋಜನೆಯನ್ನು ಮಂಜೂರು ಮಾಡಿಸಲು ಬಹಳ ಶ್ರಮ ಪಟ್ಟಿದ್ದೇನೆ ಮೊದಲು ಸುಮಾರು 27 ಕೋಟಿ ವೆಚ್ಚದಲ್ಲಿ ಕೋಳಾಲದ ಕೆರೆಯಿಂದ ಮಾಡುವ ಯೋಜನೆಯಾಗಿತ್ತು, ಎಲ್ಲ ಅಧಿಕಾರಿಗಳ ಜೊತೆ ಮತ್ತು ಮಾಧುಸ್ವಾಮಿಯವರ ಜೊತೆ ಚರ್ಚೆ ನೆಡೆಸಿದಾಗ ಅವರ ಸೂಚನೆಯಂತೆ ಅದನ್ನು ನಿಲ್ಲಿಸಲಾಯಿತು ಅಲ್ಲಿ ಅದು ಸಾಧ್ಯವಾಗುತ್ತಿರಲಿಲ್ಲ ಬೇರೆಯ ಯೋಜನೆಯನ್ನು ತಯಾರಿಸಲು ಸೂಚನೆ ನೀಡಿದರು.
ಆಗ ಚಿಕ್ಕ ತುರುವೇಕೆರೆಯ ಹಳ್ಳದಿಂದ ನೀರನ್ನು ಏತ ನೀರಾವರಿಯ ಮೂಲಕ ಬಿಗನಹಳ್ಳಿ ಹಾಗೂ ಸುತ್ತಮುತ್ತಲ ಹಳ್ಳಿಯ ಕೆರೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಯಿತು ಇದರಂತೆ ಸುಮಾರು 50 ಕೋಟಿ ರೂಗಳ ಯೋಜನೆಯನ್ನು ಸಿದ್ಧಪಡಿಸಲಾಯಿತು. ಇದರಬಗ್ಗೆ ಮಾಜಿಶಾಸಕರು ಇಲ್ಲದ ಸಲ್ಲದ ಆರೋಪಗಳನ್ನು ಮಾಡಿ ಸರ್ಕಾರಕ್ಕೆ ಇದರಬಗ್ಗೆ ಪತ್ರ ಬರೆದು ಯೋಜನೆಯನ್ನು ನಿಲ್ಲಿಸಲು ತಮ್ಮ ರಾಜಕೀಯ ದುರುದ್ದೇಶದಿಂದ ಜನರನ್ನು ತಪ್ಪು ದಾರಿಗೆ ಎಳೆಯಲು ಮಾಜಿ ಶಾಸಕರು ಹುನ್ನಾರ ನೆಡೆಸಿದ್ದಾರೆ ಎಂದರು.
ಎಲ್ಲ ಹೋರಾಟ ಮಾಡಿ ನೀರಿಗೆ ಅಲೋಕೇಷನ್ ಮಾಡಿಸಿ 50 ಕೋಟಿ ರೂಗಳ ಅನುದಾನ ತಂದು ಗುದ್ದಲಿ ಪೂಜೆ ಮಾಡುತ್ತಿದ್ದೇವೆ ಇದು ಯಾವೊಬ್ಬ ರೈತರನ್ನು ಒಕ್ಕಲೆಬ್ಬಿಸುವ ಯೋಜನೆಯಲ್ಲ ನಿಮಗೆ ದಾರಿತಪ್ಪಿಸುತಿದ್ದಾರೆ ಅವರಿಗೆ ನಾಲಿಗೆಗೂ ಮೆದುಳಿಗೂ ಕನಕ್ಷನ್ ತಪ್ಪಿಹೋಗಿದೆ ಎಂದು ಹೇಳಿ ಬೇರೆಯವರ ಬಗ್ಗೆ ಮಾತನಾಡುವಾಗ ನಾಲಿಗೆಯ ಮೇಲೆ ಹಿಡಿತವಿರಲಿ ಎಂದು ಮಾಜಿ ಶಾಸಕ ಕೃಷ್ಣಪ್ಪನವರಿಗೆ ಕಿವಿಮಾತು ಹೇಳಿದರಲ್ಲದೇ, ನಮ್ಮ ಸರ್ಕಾರ ಜಮೀನನ್ನು ಸ್ವಾಧೀನ ಪಡಿಸಿಕೊಂಡರೆ ಪರಿಹಾರ ಕೊಡಲಿದೆ. ಇದು ನಮ್ಮ ಹೋಬಳಿಯ ದಬ್ಬೇಘಟ್ಟ ಹೋಬಳಿಗೆ ಕೊಡುವ ನೀರು ಇದು ಬೆಂಗಳೂರಿಗಲ್ಲ, ಇದನ್ನು 3 ವರ್ಷಗಳ ಪರಿಶ್ರಮದಿಂದ ಜಾರಿಗೆ ತಂದಿದ್ದೇನೆ. ನಾನು ತಾಲ್ಲೂಕಿನ ಎರಡೂವರೆ ಲಕ್ಷ ಜನಕ್ಕೆ ನಾನು ಶಾಸಕ ಯಾವುದೇ ಜಾತಿಗಲ್ಲ ಪಕ್ಷಕ್ಕಲ್ಲ ಎಂದರು.
ಯೋಜನೆಯಿಂದ 29 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಇದಾಗಿದ್ದು ,ಇದರ ಜೊತೆಗೆ ಸಣ್ಣಪುಟ್ಟ ಕಟ್ಟೆಗಳಿಗೂ ನೀರು ಹರಿಯಲಿದೆ ಸುಮಾರು 20ರಿಂದ 25 ವರ್ಷದಿಂದ ನನೆಗುದಿಗೆ ಬಿದ್ದಿದ್ದು, ಈ ಭಾಗದ ರೈತರ ಭೂಮಿ ಬರಡಾಗಿದೆ. ಈ ಯೋಜನೆಯಿಂದ ರೈತರಿಗೆ ಅನುಕೂಲವಾಗಲಿದೆ, ಜೊತೆಗೆ ಈ ಯಾವುದೇ ರೈತರಿಗೆ ಒಂದು ಅಂಗೈಯಷ್ಟಗಲ ರೈತರ ಜಮೀನುಗಳಿಗೆ ತೊಂದರೆಯಾಗುವುದಿಲ್ಲ ಎಂದರು.
ಈ ಯೋಜನೆ 540 ಎಚ್ ಪಿ ಸಾಮರ್ಥ್ಯದ ಎರಡು ಜೊತೆಗೆ ಒಂದು ಮೂರು ಪಂಪುಗಳು 520 ಎಮ್ ಎಮ್ ವ್ಯಾಸದ ರೈಸಿಂಗ್ ಮೇನ್ ಪೈಪು ಒಟ್ಟಾರೆ 13.6 ಕಿಲೋ ಮೀಟರ್ ಈ ಕಾಮಗಾರಿಯನ್ನು ಜೆ ಆರ್ ಜೆ ಕೆ ಬಿ ಕೆ ಕಂಪನಿ ಬೆಳ್ಳೂರ್ ಕ್ರಾಸ್ ಜಾಯಿಂಟ್ ವೆಂಚರ್ ಈ ಯೋಜನೆಯ ಕಾಮಗಾರಿಯನ್ನು 18 ,ತಿಂಗಳು ಒಳಗಾಗಿ ಕೆಲಸ ಪೂರ್ಣಗೊಳಿಸುವ ಸಾಧ್ಯತೆ ಇದೆ ಎಂದುತಿಳಿಸಿ ಈ ದಿನ ನಮ್ಮ ಕ್ಷೇತ್ರಕ್ಕೆ 3350 ಮನೆಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ .ಯಾರಿಗೆ ಬೇಕು ಅವರಿ ಅರ್ಜಿಸಲ್ಲಿಸಿ ಇಡೀ ರಾಜ್ಯದಲ್ಲಿ ಯಾರೂಸಹ ಇಷ್ಟು ಮನೆಗಳನ್ನು ತಂದಿಲ್ಲ ಇದು ಸಾಧ್ಯವಾದದ್ದು ಸಚಿವ ಸೋಮಣ್ಣನವರಿಂದ ಎಂದು ಅವರಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕಡೆಹಳ್ಳಿ ಸಿದ್ದೇಗೌಡ. ಕೊಂಡಜ್ಜಿ ವಿಶ್ವನಾಥ್. ದುಂಡ ರೇಣುಕಣ್ಣ . ತಾಲ್ಲೂಕು ಬಿಜೆಪಿ ಅಧ್ಯಕ್ಷ ಮುತ್ತಣ್ಣ. ವಿ.ಬಿ. ಸುರೇಶ್. ವಕೀಲ ಮುದ್ದೇಗೌಡ. ಹೇಮಣ್ಣ , ಬಡಗರಹಳ್ಳಿ ರಾಮೇಗೌಡ. ಕೆಂಪೇಗೌಡ ದಬ್ಭೇಘಟ್ಟ ಸೋಮೇನಹಳ್ಳಿ ಜಗದೀಶ್. ಬಿಗನೇನ ಹಳ್ಳಿ ರವಿ, ಮಧುಸೂದನ್ ಎ ಇ ಸಣ್ಣ ನೀರಾವರಿ ಇಲಾಖೆ, ಮತ್ತು ಸುತ್ತ ಮುತ್ತಲ ಗ್ರಾಮಸ್ಥರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA