ಮಾಜಿ ಪ್ರೇಯಸಿಯನ್ನು ಕೊಂದು 6 ತುಂಡುಗಳಾಗಿ ಕತ್ತರಿಸಿ ಬಾವಿಗೆ ಎಸೆದಿದ್ದ ಕಿರಾತಕ ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರ ಗುಂಡು ಹಾರಿಸಿದ್ದಾರೆ.
ಕೊಲೆಯಾದ ಯುವತಿಯ ತಲೆಬುರಡೆ ಹಾಗೂ ದೇಹದ ತುಂಡುಗಳ ಪತ್ತೆಗೆ ಬಾವಿ ಬಳಿ ಕರೆದೊಯ್ಯುವಾಗ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಪೊಲೀಸರ ಗುಂಡು ಆರೋಪಿಗೆ ತಗುಲಿದೆ ಎಂದು ಮೂಲಗಳು ತಿಳಿಸಿವೆ.
ಘಟನಾ ಸ್ಥಳದಲ್ಲಿ ಆರೋಪಿ ಪ್ರಿನ್ಸ್ ಯಾದವ್ ನಾಡ ಪಿಸ್ತೂಲನ್ನು ಅಡಗಿಸಿದ್ದ. ಪರಿಶೀಲನೆ ವೇಳೆ ಈ ನಾಡ ಪಿಸ್ತೂಲನ್ನು ಬಳಸಿ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ ಎಂದು ಪೊಲೀಸರು ವಿವರಿಸಿದ್ದಾರೆ.
ಪಶ್ಚಿಮಿ ಗ್ರಾಮದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳೀಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಶನಿವಾರ ಬಂಧಿಸಿದ್ದರು. ಸೋಮವಾರ ಸ್ಥಳದ ಮಹಜರು ಹಾಗೂ ಮೃತ ಯುವತಿಯ ರುಂಡ ಪತ್ತೆಗೆ ಮುಂದಾಗಿದ್ದರು.
ಅರೆಬೆತ್ತಲೆ ಅವಸ್ಥೆಯಲ್ಲಿ ಆರಾಧಾನಾ ಎಂಬ ಯುವತಿಯನ್ನು ಎರಡು-ಮೂರು ದಿನಗಳ ಹಿಂದೆ ಹತ್ಯೆ ಮಾಡಿ ಬಾವಿಯಲ್ಲಿ ಶವ ಬಿಸಾಡಲಾಗಿತ್ತು.
ಆರಾಧಾನಾ ಮತ್ತೊಬ್ಬರನ್ನು ಮದುವೆ ಆಗಿದ್ದ ಎಂಬ ಕಾರಣಕ್ಕೆ ಆರೋಪಿ ಪ್ರಿನ್ಸ್ ಯಾದವ್ ಅವರ ಹೆತ್ತವರು ಹಾಗೂ ಸಂಬಂಧಿ ಸರ್ವೆಶ್ ಸೇರಿ ಈ ಕೃತ್ಯ ಎಸಗಿದ್ದರು.
ವರದಿ : ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy