ಸರಗೂರು: ಶಾಸಕ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಾಯಕ ಸಮಾಜದವತಿಯಿಂದ ಆ.29ರಂದು ಪ್ರತಿಭಟನೆ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರ ನೇತೃತ್ವದಲ್ಲಿ ಮಾಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಪಟ್ಟಣದ 9 ವಾರ್ಡ್ ನ ಚಿಕ್ಕ ದೇವಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರದಂದು ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ನಾಯಕ ಸಮಾಜದ ಸಂಘದ ವತಿಯಿಂದ ಹಮ್ಮಿಕೊಂಡಿದ್ದು, ಶಾಸಕ ಎನ್.ಕೆ.ರಾಜಣ್ಣರವರ ಸಚಿವ ಸ್ಥಾನ ನೇಮಕ ಮಾಡಿಕೊಡಕೊಳ್ಳಬೇಕು, ಪೂರ್ವಭಾವಿ ಸಭೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಜಯಪ್ರಕಾಶ್ ಮಾತನಾಡಿ, ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದರು.
‘ವಾಲ್ಮೀಕಿ ನಾಯಕ ಸಮಾಜದ ಪ್ರಭಾವಿ ನಾಯಕರಾದ ರಾಜಣ್ಣ ಸಹಕಾರ ಸಚಿವರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದರು. ಯಾವುದೇ ನೋಟೀಸ್ ನೀಡದೆ ಕಾಂಗ್ರೆಸ್ ಹೈಕಮಾಂಡ್ ವಜಾ ಮಾಡಿರುವುದನ್ನು ಸಮಾಜ ಖಂಡಿಸುತ್ತದೆ’ ಎಂದರು.
‘ಮುಖ್ಯಮಂತ್ರಿಗಳ ಬೆನ್ನೆಲುಬಾಗಿದ್ದರು ಎಂಬ ಕಾರಣದಿಂದ ಅವರನ್ನು ವಜಾ ಮಾಡಲಾಗಿದೆ. ನಾಯಕ ಸಮಾಜದಿಂದ ಯಾರೂ ಮುಖ್ಯಮಂತ್ರಿಯಾಗಿಲ್ಲ. ರಾಜಣ್ಣ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬೇಡಿಕೆಯ ಹೇಳಿಕೆ ನೀಡುತ್ತಿದ್ದರು. ಇದರೊಂದಿಗೆ ಮುಖ್ಯಮಂತ್ರಿ ಸ್ಥಾನವನ್ನೂ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ಸಿಗರೇ ಕುತಂತ್ರ ಮಾಡಿದ್ದಾರೆ’ ಎಂದು ಆರೋಪಿಸಿದರು.
ಇದ್ದದ್ದನ್ನು ನೇರವಾಗಿ ಹೇಳುವ ಗುಣದವರು ರಾಜಣ್ಣ.ಬಿ ನಾಗೇಂದ್ರ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದರೂ ಕೇಳಿ ರಾಜೀನಾಮೆ ಪಡೆದರು. ಆದರೆ ರಾಜಣ್ಣ ವಿಷಯದಲ್ಲಿ ಹೀಗಾಗಿಲ್ಲ.
ಎಚ್.ಡಿ.ಕೋಟೆ ತಾಲ್ಲೂಕಿನ ನಾಯಕ ಸಮಾಜದ ಅಧ್ಯಕ್ಷ ದೊಡ್ಡ ನಾಯಕ ಮಾತನಾಡಿ, ‘2023ರ ಚುನಾವಣೆಯಲ್ಲಿ ಕಾಂಗ್ರೆಸ್ 136 ಕ್ಷೇತ್ರದಲ್ಲಿ ಗೆಲ್ಲಲು ನಾಯಕ ಸಮಾಜ ಪ್ರಭಾವ ಬೀರಿದೆ. ತಕ್ಷಣವೇ ಹೈಕಮಾಂಡ್ ಅವರನ್ನು ಸಚಿವ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಸ್ಥಳೀಯ ಚುನಾವಣೆಯಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ನಾಯಕ ಸಮಾಜದ ತಾಲ್ಲೂಕು ಉಪಾಧ್ಯಕ್ಷ ಹಾಗೂ ಪಪಂ ಸದಸ್ಯ ಶ್ರೀನಿವಾಸ ಮಾತನಾಡಿ ರಾಜ್ಯದ ನಾಯಕ ಸಮುದಾಯದ ಪ್ರಭಾವಿ ಮುಖಂಡ ಕಾಂಗ್ರೆಸ್ ಪಕ್ಷದ ಸಹಕಾರ ಸಚಿವ ಎನ್.ಕೆ.ರಾಜಣ್ಣರವರನ್ನು ಸಂಪುಟದಿಂದ ವಜಾಗೊಳಿಸಿರವುದು ನಾಯಕ ಸಮಾಜಕ್ಕೆ ಅವಮಾನ. ಹಾಗಾಗಿ ಕಾಂಗ್ರೆಸ್ ಪಕ್ಷದ ಪರ ವಿಮರ್ಶೆ ಮಾಡಿ ಮತ್ತೆ ರಾಜಣ್ಣ ರವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.
ಸರಗೂರು ತಾಲೂಕು ನಾಯಕ ಸಮಾಜದ ಅಧ್ಯಕ್ಷ ಪುರದಕಟ್ಟೆ ಬಸವರಾಜು ಮಾತನಾಡಿ, ಎನ್.ಕೆ.ರಾಜಣ್ಣರವರನ್ನು ಸಂಪುಟದಿಂದ ಏಕಾಏಕಿ ವಜಾಗೊಳಿಸಿದ್ದು, ವಾಲ್ಮೀಕಿ ಸಮುದಾಯದಕ್ಕೆ ನೋವು ತಂದಿದೆ. ತಕ್ಷಣ ರವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಬೇಕು ಎಂದು ತಿಳಿಸಿದರು.
ಎನ್.ಕೆ.ರಾಜಣ್ಣ ನಮ್ಮ ಸಮುದಾಯದ ಆಸ್ತಿ. ಪಕ್ಷದಲ್ಲಿ ಅವರು ತಪ್ಪು ಮಾಡಿದ್ದರೆ ಅದರ ಬಗ್ಗೆ ತಿಳಿಸಬೇಕಿತ್ತು. ನೋಟೀಸ್ ನೀಡಿ ಉತ್ತರ ಪಡೆಯಬಹುದಿತ್ತು. ಇಲ್ಲವೆ ಹೈಕಮಾಂಡ್ ಕರೆಸಿಕೊಂಡು ತಿಳಿಹೇಳಲು ಅವಕಾಶವಿತ್ತು. ಅಥವಾ ರಾಜೀನಾಮೆ ನೀಡುವಂತೆ ತಿಳಿಸಿದ್ದರೆ ರಾಜಣ್ಣರವರು ರಾಜೀನಾಮೆ ಕೊಡುತ್ತಿದ್ದರು. ಆದರೆ ಅದ್ಯಾವುದೋ ಮಾಡಿದೆ ಏಕಾಏಕಿ ಮಾಡಿದ್ದು, ಸರಿಯಾದ ನಡೆ ಅಲ್ಲ. ಇದರಿಂದ ಸಮುದಾಯಕ್ಕೆ ಸಾಕಷ್ಟು ನೋವಾಗಿದೆ ಎಂದರು.
ಸಭೆಯಲ್ಲಿ ಮುಖಂಡರು ಅನಿಸಿಕೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ.ಪಂ. ಸದಸ್ಯ ನವೀನ್ ಕುಮಾರ್, ಗ್ರಾ.ಪಂ. ಸದಸ್ಯ ಜಯರಾಮ್, ಕೋತ್ತೇಗಾಲ ಗ್ರಾ.ಪಂ. ಅಧ್ಯಕ್ಷ ಟಿ.ಕುಮಾರ್, ಸಿಂಡಿಕೇಟ್ ಬ್ಯಾಂಕ್ ಸದಸ್ಯ ಕ್ಯಾತನಹಳ್ಳಿ ನಾಗರಾಜು, ಚಿಕ್ಕಮಾದು ಅಭಿಮಾನಿಗಳ ಬಳಗ ಅಧ್ಯಕ್ಷ ಜಿನಾನಹಳ್ಳಿ ರಾಜನಾಯಕ, ಯಜಮಾನರು ಬೆಟ್ಟನಾಯಕ, ಕೆಇಬಿ ಶಿವಣ್ಣ ಮುಖಂಡರು ಶಂಭುಲಿಂಗನಾಯಕ, ರಮೇಶ್, ರವಿ, ನಾಗೇಂದ್ರ, ಅಂಕನಾಯಕ, ಮಹದೇವನಾಯಕ, ದಾಸಪ್ಪ, ಸಾಗರೆ ಶಂಕರ್, ವಾಲ್ಮೀಕಿ ಸಿದ್ದರಾಜು, ಅನೀಲ್, ಬೆಟ್ಟನಾಯಕ, ರಾಜು, ಚನ್ನನಾಯಕ, ಬಸಾಪುರ ರವಿ, ಶೇಷ್ಷ, ಸೋಮಣ್ಣ, ವೆಂಕಟಾಚಲ, ಜಯಪ್ಪ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


