nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹುಳಿಯಾರು | ರೈತರ ಶಾಪ ನಿಮಗೆ ತಟ್ಟದೇ ಇರಲಾರದು: ಅಧಿಕಾರಿಗಳಿಗೆ ಸಬ್ಬೇನಹಳ್ಳಿ ಶ್ರೀನಿವಾಸ್ ಹಿಡಿಶಾಪ

    October 23, 2025

    ಹೋರಿ ತಿವಿದು ಓರ್ವ ವಯೋವೃದ್ಧ ಸಾವು

    October 23, 2025

    ಆತ ನೇಣಿಗೆ ಶರಣಾದ, ಬೆಳಗೆದ್ದು ನೋಡಿದ ಪ್ರಿಯತಮೆಯೂ ನೇಣಿಗೆ ಶರಣಾದಳು:  ಸಣ್ಣ ಜಗಳಕ್ಕೆ ಇಬ್ಬರ ಪ್ರಾಣ ಬಲಿ

    October 22, 2025
    Facebook Twitter Instagram
    ಟ್ರೆಂಡಿಂಗ್
    • ಹುಳಿಯಾರು | ರೈತರ ಶಾಪ ನಿಮಗೆ ತಟ್ಟದೇ ಇರಲಾರದು: ಅಧಿಕಾರಿಗಳಿಗೆ ಸಬ್ಬೇನಹಳ್ಳಿ ಶ್ರೀನಿವಾಸ್ ಹಿಡಿಶಾಪ
    • ಹೋರಿ ತಿವಿದು ಓರ್ವ ವಯೋವೃದ್ಧ ಸಾವು
    • ಆತ ನೇಣಿಗೆ ಶರಣಾದ, ಬೆಳಗೆದ್ದು ನೋಡಿದ ಪ್ರಿಯತಮೆಯೂ ನೇಣಿಗೆ ಶರಣಾದಳು:  ಸಣ್ಣ ಜಗಳಕ್ಕೆ ಇಬ್ಬರ ಪ್ರಾಣ ಬಲಿ
    • ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲ್ಲ: ಸಿಎಂ ಸಿದ್ದರಾಮಯ್ಯ
    • ಬಿಜೆಪಿ–ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿ ರಚನೆಗೆ ಚಿಂತನೆ: ಬಿ.ವೈ.ವಿಜಯೇಂದ್ರ
    • ದೀಪಾವಳಿ ಸಂಭ್ರಮದ ನಡುವೆಯೇ ಮಚ್ಚಿನಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ
    • ಅಕ್ರಮ ಗೋ ಸಾಗಾಟ: ಆರೋಪಿಯ ಮೇಲೆ ಪೊಲೀಸರಿಂದ ಗುಂಡಿನ ದಾಳಿ
    • ಪಟಾಕಿ ಸಿಡಿತ: 16 ಜನರಿಗೆ ಗಾಯ: ದೃಷ್ಟಿ ಕಳೆದುಕೊಂಡ ಹಲವರು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತಂದೆ ತಾಯಿ ಇಲ್ಲದ ಮಕ್ಕಳನ್ನು ಅನಾಥ ಮಾಡಬೇಡಿ : ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಸಂತಿ ಉಪ್ಪಾರ್
    ಕೊರಟಗೆರೆ February 5, 2022

    ತಂದೆ ತಾಯಿ ಇಲ್ಲದ ಮಕ್ಕಳನ್ನು ಅನಾಥ ಮಾಡಬೇಡಿ : ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಸಂತಿ ಉಪ್ಪಾರ್

    By adminFebruary 5, 2022No Comments2 Mins Read
    vasanti uppar

    ಕೊರಟಗೆರೆ : ಇಂದು ಕೊರಟಗೆರೆ ಶಿಶು ಅಭಿವೃದ್ಧಿ ಯೋಜನೆಯಡಿ ಕರ್ನಾಟಕ ಸರ್ಕಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತುಮಕೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಾಕೃತಿಕ ವಿಕೋಪ ಹಾಗೂ ಇನ್ನಿತರೆ ಸಂಕಷ್ಟದಲ್ಲಿರುವ ಮಕ್ಕಳ ಸಮಸ್ಯೆಗಳು ಮತ್ತು ಪುನರ್ವಸತಿ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

    ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾವಲು ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸುತ್ತಿದ್ದು,  ಇದರಲ್ಲಿ ಸಾಮಾಜಿಕ ಸಮಸ್ಯೆಗಳಾದ ಬಾಲ್ಯವಿವಾಹ ಮಹಿಳೆಯರ ಹಾಗೂ  ಮಕ್ಕಳ ಅನೈತಿಕ ಕಳ್ಳಸಾಗಣಿಕೆ, ಪೋಕ್ಸೋ ಕಾಯ್ದೆ, ಮಕ್ಕಳ ಸಮಗ್ರ ರಕ್ಷಣೆ ಹೀಗೆ ಹಲವು ವಿಷಯಗಳಾದ ಮಹಿಳೆ, ಮಕ್ಕಳು ಮತ್ತು ವೃದ್ಧರು ಹಾಗೂ ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ಮಾಹಿತಿ ಪಡೆದು ಚರ್ಚಿಸಬೇಕು ಮತ್ತು ಸಮಸ್ಯೆಗಳು ಬಾರದಂತೆ ಕ್ರಮವಹಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜನಸಾಮಾನ್ಯರಿಗೆ ಹತ್ತಿರವಿರುವಿದರಿಂದ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಪೋಷಕರಿಗೆ ಅರಿವನ್ನು ಮೂಡಿಸಬೇಕು. ಇತ್ತೀಚಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿದ್ದು ಮುಂಜಾಗ್ರತವಾಗಿ ಕ್ರಮವಹಿಸಬೇಕು ಹಾಗೆಯೇ  ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲೆ ತಲುಪಿಸಬೇಕಾದ ಜವಾಬ್ದಾರಿ   ಅಧಿಕಾರಿಗಳಾದ ನಮ್ಮ ನಿಮ್ಮ ಜವಾಬ್ದಾರಿ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಅಂಬಿಕಾ ತಿಳಿಸಿದರು.


    Provided by
    Provided by
    Provided by

    vasanti uppar

    ಸಂಕಷ್ಟದಲ್ಲಿರುವ ಮಕ್ಕಳು  ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಪೋಷಕರನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ  ಹಿಂದುಳಿಯುತ್ತಿದ್ದಾರೆ ಮತ್ತು ಮಾನಸಿಕವಾಗಿ ನೊಂದಿದ್ದಾರೆ. ಇಂತಹ ಮಕ್ಕಳಿಗೆ ಬಾಲ ಸ್ವರಾಜ್, ಬಾಲ ಸೇವಾ ಯೋಜನೆ, ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್,ಬಾಲ ಹಿತೈಷಿ ಇತ್ಯಾದಿ ಯೋಜನೆಗಳಡಿ ಪುನರ್ವಸತಿ ಕಲ್ಪಿಸಲಾಗುತ್ತಿದೆ ಇಂತಹ ಮಕ್ಕಳನ್ನು ಕೆಳಹಂತದಲ್ಲಿ ಗುರುತಿಸಿ ಮಾಹಿತಿ ನೀಡಬೇಕು, ಕೋವಿಡ್ ನಿಂದ ತಂದೆ ತಾಯಿಯನ್ನು ಕಳೆದುಕೊಂಡವರಿಗೆ ಮಾಸಿಕ 3,500 ಹಣ ಹಾಗೂ 18 ವರ್ಷ ತುಂಬಿದ ನಂತರ 1ಲಕ್ಷ ಮತ್ತು 23 ವರ್ಷ ತುಂಬಿದ ನಂತರ 10 ಲಕ್ಷ ಪರಿಹಾರ ಧನ ಸರ್ಕಾರ ಭರಿಸುತ್ತದೆ  ಎಂದು ತಿಳಿಸಿದರು.

    ಕೋವಿಡ್ ಅಲ್ಲದೆ ಇತರೆ ಕಾರಣಗಳಿಂದ ಪೋಷಕರು ಮರಣ ಹೊಂದಿದರೆ ಅಂತಹ  ಮಕ್ಕಳ ಪರಿಸ್ಥಿತಿ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮಕ್ಕಳ ಜೀವನಕ್ಕೆ ಉಪಯುಕ್ತವಾಗುವಂತಹ ಮಾರ್ಗದರ್ಶನ ನೀಡಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರಕರಣಗಳನ್ನು ಪಟ್ಟಿಮಾಡಿ ಯಾರು ಯಾರಿಗೆ ಏನು ಅವಶ್ಯಕತೆ ಇದೆ ಎಂಬುದರ ಬಗ್ಗೆ ತಿಳಿದು ಅವರಿಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಹಾಯ ಮಾಡಬೇಕು,ಸೌಲಭ್ಯಗಳು ವಂಚಿತರಾಗದಂತೆ ನೋಡಿಕೊಳ್ಳಬೇಕು ಮತ್ತು ಸಾಂತ್ವನ ಹೇಳಬೇಕು. ಗಂಡನನ್ನು ಕಳೆದುಕೊಂಡ ವಿಧವೆ ತನ್ನ ಮಕ್ಕಳನ್ನು ಸಾಕಲು ಅಶಕ್ತರಾಗಿರುತ್ತಾರೆ ಅಂತವರಿಗೆ ವಿಧವಾ ವೇತನ ಸೌಲಭ್ಯ ಅವರ ಮನೆ ಬಾಗಿಲಿಗೆ ತಲುಪಿಸಬೇಕು  ಹಾಗೂ ಕರಕುಶಲ ವಸ್ತುಗಳ ತಯಾರಿಕೆ ಬಗ್ಗೆ, ಟೈಲರಿಂಗ್ ಮತ್ತು ಹೈನುಗಾರಿಕೆ ಇತ್ಯಾದಿ ಕೆಲಸಗಳ ಬಗ್ಗೆ ತರಬೇತಿ ನೀಡಿ ಸಾಲ ಸೌಲಭ್ಯಗಳನ್ನು ಒದಗಿಸಿ ಅವರನ್ನು ಸ್ವಾವಲಂಬಿಗಳಾಗಲು ಸ್ಥಳೀಯ ಪಂಚಾಯಿತಿ ಅಧಿಕಾರಿಗಳು  ಕಾರ್ಯಪ್ರವೃತ್ತರಾಗಬೇಕು

    ಅಲ್ಲದೆ ಗ್ರಾಮ ಮಟ್ಟದಲ್ಲಿ ಕಾವಲು ಸಮಿತಿ, ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿ ಸಭೆ ನಡೆಸಿ ಸಭಾ ನಡವಳಿಕೆಯಲ್ಲಿ  ನಡೆದ ಪ್ರಕರಣಗಳ ಬಗ್ಗೆ ದಾಖಲಾಗಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ದಾಖಲಾಗುವಂತೆ ಮತ್ತು ಕೊಳಗೇರಿ ಪ್ರದೇಶಗಳಲ್ಲಿನ ಮಕ್ಕಳನ್ನು ಗುರ್ತಿಸಿ ಏನೆಲ್ಲಾ ಕೃತಿಗಳಿಗೆ ಬಲಿಯಾಗುತ್ತಿದ್ದಾರೆ ಎಂಬುದನ್ನು ಅರಿತು ಅವರನ್ನು ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು ಹಾಗೂ ಬಾಲ ಹಿತೈಷಿ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸಲು ಇಚ್ಛೆಯಿದ್ದಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

    ಅತಿವೃಷ್ಟಿ-ಅನಾವೃಷ್ಟಿ, ಬೆಂಕಿಯ ಅವಗಡಗಳು, ಸಾಂಕ್ರಾಮಿಕ ರೋಗಗಳು,ಬಾಲ್ಯವಿವಾಹ, ದೌರ್ಜನ್ಯಕ್ಕೆ ಒಳಗಾಗುವುದು ಇತ್ಯಾದಿಗಳಿಗೆ ಬಲಿಯಾದ ಮಕ್ಕಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ವಾಸಂತಿ ಉಪ್ಪಾರ್ ತಿಳಿಸಿದರು.

    ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಮಾವತ್ತೂರು ಸೊಸೈಟಿಗೆ 6 ಜನ ನಿರ್ದೇಶಕರ ರಾಜೀನಾಮೆ

    October 20, 2025

    ಮೀನಿನ ಬಲೆಗೆ ಸಿಲುಕಿ ಮಾನಸಿಕ ಅಸ್ವಸ್ಥ ಸಾವು

    October 19, 2025

    ತೋವಿನಕೆರೆ ಗ್ರಾ.ಪಂ. ಬಿಲ್‌ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮಾ ಲೋಕಾಯುಕ್ತ ಬಲೆಗೆ

    October 16, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಚಿಕ್ಕನಾಯಕನಹಳ್ಳಿ

    ಹುಳಿಯಾರು | ರೈತರ ಶಾಪ ನಿಮಗೆ ತಟ್ಟದೇ ಇರಲಾರದು: ಅಧಿಕಾರಿಗಳಿಗೆ ಸಬ್ಬೇನಹಳ್ಳಿ ಶ್ರೀನಿವಾಸ್ ಹಿಡಿಶಾಪ

    October 23, 2025

    ಹುಳಿಯಾರು: ನೀವೆಲ್ಲಾ ಮನೆಯಲ್ಲಿ ಬೆಚ್ಚಗೆ ಇದ್ದು, ರೈತರನ್ನು ಮನೆಮಠ ಬಿಟ್ಟು ಅಹೋರಾತ್ರಿ ಧರಣಿ ಕೂರುವಂತೆ ಮಾಡಿದ್ದೀರಲ್ಲಾ, ಇದೇ ಏನು ರೈತರಿಗೆ…

    ಹೋರಿ ತಿವಿದು ಓರ್ವ ವಯೋವೃದ್ಧ ಸಾವು

    October 23, 2025

    ಆತ ನೇಣಿಗೆ ಶರಣಾದ, ಬೆಳಗೆದ್ದು ನೋಡಿದ ಪ್ರಿಯತಮೆಯೂ ನೇಣಿಗೆ ಶರಣಾದಳು:  ಸಣ್ಣ ಜಗಳಕ್ಕೆ ಇಬ್ಬರ ಪ್ರಾಣ ಬಲಿ

    October 22, 2025

    ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲ್ಲ: ಸಿಎಂ ಸಿದ್ದರಾಮಯ್ಯ

    October 22, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.