ತಿಪಟೂರು: ಅತಿ ಹೆಚ್ಚು ವಿದ್ಯಾಭ್ಯಾಸ ಮಾಡಿದವರು ತಂದೆ ತಾಯಂದಿರ ನಿರ್ಲಕ್ಷ ಮಾಡಿ ಪಾಲನೆ-ಪೋಷಣೆ ಮಾಡುವುದನ್ನು ಬಿಟ್ಟು ದುಬಾರಿ ನಾಯಿಗಳ ಪಾಲನೆ-ಪೋಷಣೆ ಮಾಡುವತ್ತ ಜಗತ್ತು ಮಾರ್ಪಾಡು ಆಗುತ್ತಿದೆ ಎಂದು ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ಅವರು ಕಳವಳ ವ್ಯಕ್ತಪಡಿಸಿದರು.
ನಗರದ ಗೊರಗೊಂಡನಹಳ್ಳಿ ಕುಪ್ಪೂರು ತಮ್ಮಡಿಹಳ್ಳಿ ಅಭಿನವ ಮಲ್ಲಿಕಾರ್ಜುನಾ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡ ಅಭಿನವ ಸದನ ಕಟ್ಟಡದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಅಶಾಂತಿ ಅಧರ್ಮ ತಾಂಡವಾಡುತ್ತಿದ್ದು, ಒಂದು ಅಣುಬಾಂಬ್ ಹಾಕಿದರೆ ಇಡೀ ವಿಶ್ವವೇ ಸರ್ವನಾಶ ಆಗುತ್ತದೆ. ಇಡೀ ವಿಶ್ವವೇ ಮನುಕುಲ ಜಗತ್ತು ಶಾಂತಿ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾವಂತರು ಯುವಕರು ತಮ್ಮ ತಂದೆ-ತಾಯಿ ನಿರ್ಲಕ್ಷ ಮಾಡುತ್ತಿದ್ದು, ವಿದ್ಯೆಯ ಜೊತೆಗೆ ಅವರಿಗೆ ಸಂಸ್ಕಾರವನ್ನೂ ಕೊಡಬೇಕು. ಸಂಸ್ಕಾರ ಕೊರತೆಯಿಂದಾಗಿ ಮಕ್ಕಳು ತಂದೆತಾಯಿಯನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಮಠ ಮಾನ್ಯಗಳಿಗಿಂತ ಹೆತ್ತ ತಂದೆ-ತಾಯಿಗಳೇ ದೇವರು. ತಂದೆ ತಾಯಿಯವರನ್ನು ಅನಾಥಾಶ್ರಮಗಳಿಗೆ ಕಳುಹಿಸಿ ಮಠಮಾನ್ಯಗಳಿಗೆ ಬಂದು ಕಾಲಿಗೆ ಬೀಳುವುದು ಬಿಟ್ಟು ತಂದೆ ತಾಯಿಯವರನ್ನು ಪತಿ ಜಾಗೃತೆಯಿಂದ ನೋಡಿಕೊಳ್ಳಿ ಎಂದು ತಿಳಿಸಿದರು.
ಕುಪ್ಪೂರು ತಮ್ಮಡಿಹಳ್ಳಿಯ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿಯವರು ಮಾತನಾಡಿ, ಅಭಿನವ ಸದನವು ಭಕ್ತರಿಂದ ಭಕ್ತರಿಗಾಗಿ ಮಾಡಿರುವಂತಹ ಸದನವಾಗಿದ್ದು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ತಿಳಿಸಿದರು. ಒಂದು ರೂಪಾಯಿ ದಾನ ನೀಡಿದ ವ್ಯಕ್ತಿಯು ಸಹ ಅತಿ ಮುಖ್ಯ. ಎಂದರು.
ಈ ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ತುರುವೇಕೆರೆ ತಿಪಟೂರು ಅರಸೀಕೆರೆ ಸಮಾಜ ಬಾಂಧವರು ಹಾಗೂ ಬೆಣ್ಣೆಹಳ್ಳಿ ಸದಾಶಿವಯ್ಯ ಹಾಗೂ ನಗರಸಭೆ ಮಹಿಳಾ ಸದಸ್ಯೆ ಕಾಂಗ್ರೆಸ್ ಮುಖಂಡ ಶಾಂತಕುಮಾರ್ ಭಾಗವಹಿಸಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5