ಪಾವಗಡ : ಸಂವಿಧಾನ ನೀಡಿರುವ ಹಲವಾರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನಮ್ಮ ಸಮುದಾಯ ಮುಖ್ಯ ವಾಹಿನಿಗೆ ಬರಬೇಕೆಂದು ಮಾಜಿ ಶಾಸಕರಾದ ಕೆ.ಎಂ. ತಿಮ್ಮರಾಯಪ್ಪ ತಿಳಿಸಿದರು.
ತಾಲ್ಲೂಕಿನ ನಿಡಗಲ್ ಹೋಬಳಿಯ ಚಿನ್ನಮ್ಮನಹಳ್ಳಿ ಗ್ರಾಮದಲ್ಲಿ ಭಾನುವಾರ ಹೋಬಳಿ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ರವರ 132 ನೇ ‘ಜೈ ಭೀಮೋಸ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡದ ಹೊರತು ನಮ್ಮ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ, ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲು ಮತ್ತು ಒಳ್ಳೆಯ ಸಮಾಜ ಕಟ್ಟಲು ನಿಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಿ ಎಂದು ಕರೆ ನೀಡಿದರು.
ಪಾರದರ್ಶಕವಾದ ಆಡಳಿತ ನಡೆಸುವುದರಿಂದ ಭ್ರಷ್ಟಾಚಾರ ರಹಿತವಾದ ಸರ್ಕಾರವನ್ನು ನಡೆಸಬಹುದು. ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಮೊದಲನೇ ಬಾರಿಗೆ ಗ್ರಾಮ ಪಂಚಾಯತಿ ಸದಸ್ಯನಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದೆ. ಇಲ್ಲಿವರೆಗೂ ಸಂವಿಧಾನ ನಮಗೆ ನೀಡಿರುವ ಅನೇಕ ಸೌಲಭ್ಯಗಳನ್ನು ಜನರ ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಸಮಾಜ ಸೇವಕಿಯಾದ ಸಾಯಿ ಸುಮನ್ ಮಾತನಾಡಿ, ಪ್ರತಿಯೊಬ್ಬರೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅತೀ ಹೆಚ್ಚು ಪದವಿಗಳನ್ನು ಪಡೆದ ಪ್ರಪಂಚದ ಏಕೈಕ ವ್ಯಕ್ತಿ ಡಾ.ಅಂಬೇಡ್ಕರ್ ಅವರು. ಒಂದು ದೇವಸ್ಥಾನವನ್ನು ಕಟ್ಟಿದರೆ ನೂರಾರು ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. ಆದರೆ ಒಂದು ಗ್ರಂಥಾಲಯವನ್ನು ಕಟ್ಟಿದರೆ, ನೂರಾರು ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ ಎಂದು ಹೇಳಿದ ಮಹಾನ್ ನಾಯಕನ ಹಾದಿಯಲ್ಲಿ ನಾವು ಇಂದು ಸಾಗಬೇಕಾಗಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗುಜ್ಜನಡು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುಳ ರಾಜಣ್ಣ, ಬುಡಸನಹಳ್ಳಿ ಪ್ರಾಧ್ಯಾಪಕರಾದ ಮಂಜುನಾಥ, ಜಮೀನ್ದಾರರಾದ ಸಿ.ಎಂ ಮುತ್ತುರಾಯಪ್ಪ, ಸಿ.ಎಂ. ರಾಮಪ್ಪ , ಎಚ್.ಆರ್. ಎಫ್ ಡಿ ಎಲ್ ಜಿಲ್ಲಾ ಸಂಚಾಲಕರು ಹನುಮಂತರಾಯಪ್ಪ , ಟಿ.ಎನ್. ಪೇಟೆ ರಮೇಶ್. ದ. ಸಂ.ಸ ಜಿಲ್ಲಾ ಸಂಘಟನೆ ಸಂಚಾಲಕರು ಸಿ.ಕೆ.ತಿಪ್ಪೇಸ್ವಾಮಿ , ಎಸ್ ಎಸ್ ಸಂಚಾಲಕ ಪೆದ್ದನ್ನ ಡಿ, ಅಂಚೆ ಇಲಾಖೆ ದಾಸಪ್ಪ, ಮುಖಂಡರು ಚಿನ್ನಮ್ಮನಹಳ್ಳಿ ಮಂಜುನಾಥ, ಮಂಗಳವಾಡ ವೆಂಕಟೇಶ್ ಮೂರ್ತಿ, ಗೋಂಚುಕಾರ್ , ಮಲ್ಲಿಕಾರ್ಜುನ, ಅಶೋಕ್, ಡಾ.ಮಂಜುನಾಥ್, ಅಂಜಿನಪ್ಪ ಕ್ಲರ್ಕ್, ದೇವಲಕೆರೆ ಕೆ.ಪಿ.ಲಿಂಗಣ್ಣ, ಕೊತ್ತೂರು ಜೈರಾಮ್, ಮಾದ್ಲೇಟಪ್ಪ, ನಿವೃತ್ತಿ ಅಂಚೆ ಇಲಾಖೆ ಓಬಳಪತಿ, ಉಮೇಶ್ ಬೆಳ್ಳಿಬಟ್ಲು , ಹನುಮಂತರಾಯಪ್ಪ ಕಲಾವಿದ, ವೆಂಕಟರಮಣ, ಹನುಮಂತರಾಯ, ಮಾಜಿ ಗ್ರಾ. ಪಂ. ಸದಸ್ಯರು ಸಿ ಎಂ ಜೈರಾಮ್ ಹಾಗೂ ಅನೇಕ ಜೈ ಭೀಮನ ಅನುಯಾಯಿಗಳು ಮತ್ತು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ., ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1