ಹೆಚ್.ಡಿ.ಕೋಟೆ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರವನ್ನು ತೆರವು ಮಾಡುವ ಮೂಲಕ ಉದ್ಧಟತನದ ವರ್ತನೆ ತೋರಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ದೇಶದ್ರೋಹದ ದೂರು ದಾಖಲಿಸುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಲಾಯಿತು.
ತಾಲ್ಲೂಕಿನ ಅಂಬೇಡ್ಕರ್ ಭವನದಿಂದ ಮಿನಿ ವಿಧಾನಸೌಧದ ವರೆಗೆ ಮೆರವಣಿಗೆ ನಡೆಸಿ, ಮಲ್ಲಿಕಾರ್ಜುನ ಗೌಡ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಚಾ.ಶಿವಕುಮಾರ್, ರಾಯಚೂರು ಜಿಲ್ಲಾ ನ್ಯಾಯಾಧೀಶರು ಅಂಬೇಡ್ಕರ್ ಭಾವ ಚಿತ್ರ ಇದ್ದರೆ, ನಾನು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಉದ್ಧಟತನ ತೋರಿದ್ದಾರೆ. ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಸಣ್ಣಕುಮಾರ್ ಮಾತನಾಡಿ, ಜಾತಿಯ ಬೇಧ ಭಾವದ ಮನಸ್ಸಿನಲ್ಲಿ ಕೆಲಸ ಮಾಡುವವರು ನ್ಯಾಯಾಧೀಶರ ಹುದ್ದೆಗೆ ಅರ್ಹರಲ್ಲ, ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು, ಅವರ ವಿರುದ್ಧ ಸುಮೋಟೋ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದೊಡ್ಡಸಿದ್ದು ಹಾದನೂರು, ಸೋಮಣ್ಣ(ಚನ್ನ), ಕೂಡಿಗಿ ಗೊವಿಂದರಾಜು, ಕುಮಾರ್, ರಾಜಪ್ಪ, ಶಿವಯ್ಯ ಕೃಷ್ಣ ಪುರ, ಚೌಡಹಳ್ಳಿ ಜವರಯ್ಯ, ದಸಂಸ ಕಾರ್ಯಕರ್ತರು ಮಹದೇವಸ್ವಾಮಿಹಾದನೂರ, ಮಹೇಶ್, ಮಂಜು, ಚಿಕ್ಕಮಾದು, ಮಹದೇವಸ್ವಾಮಿ(ಗುಣ), ದೀಪು.ಬಸವರಾಜು, ಗ್ರಾಪಂ ಸದಸ್ಯ ಬೆಟ್ಟಸ್ವಾಮಿ, ಸಿದ್ದಪ್ಪ, ಶಂಭು ರವಿಹೊಸಹಳ್ಳಿ, ನಂಜುಂಡ ದೇವರಾಜು, ಗೋವಿಂದ ಮಸಹಳ್ಳಿ, ಮತ್ತಿತರರು ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy