ತಿಪಟೂರು: ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿಗಳು ನಾಡಿನ ಕಾಯಕ ಯೋಗಿಗಳು ತಮ್ಮ ಅವಿರತ ಕಾಯಕ ತಪಸ್ಸಿನ ಮೂಲಕ ತರಳಬಾಳು ಮಠದ ಅಭಿವೃದ್ದಿಗೆ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಸಾಧು ವೀರಶೈವ ಸಮಾಜದ ಕಾರ್ಯದರ್ಶಿ ವೀರಭದ್ರಪ್ಪ ತಿಳಿಸಿದರು
ತಾಲ್ಲೂಕಿ ಹಾಲ್ಕುರಿಕೆ ಗ್ರಾಮದ ತರಳಬಾಳು ಹಾಲ್ಕುರಿಕೆ ಸಂಸ್ಥಾನ ಮಠದ ಆವರಣದಲ್ಲಿ ಶ್ರೀ ತರಳಬಾಳು ಬೃಹನ್ಮಠದ ಚರಪಟ್ಟಾಧ್ಯಕ್ಷರಾದ ಲಿಂಗೈಕ್ಯ ಶ್ರೀ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಅವರ 14ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಯಕ ಯೋಗಿ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹಾಲ್ಕುರಿಕೆ ತರಳಬಾಳು ಶಾಖಾಮಠದ ಅಭಿವೃದ್ದಿಯಲ್ಲಿ ಶ್ರಮಿಸಿ ವಿದ್ಯಾದಾನ ಮಾಡುವ ಮೂಲಕ ಈ ಭಾಗದ ಜ್ಞಾನಗಂಗೆಯಾಗಿದ್ದಾರೆ ಎಂದರು.
ರಾಜ್ಯದ ಮೂಲೆ ಮೂಲೆಗಳಿಗೆ ಸಂಚರಿಸಿ ಮಠದ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ ಬರದ ನಾಡಾಗಿದ ಹಾಲ್ಕುರಿಕೆಯಲ್ಲಿ ಶಾಲಾ ಕಾಲೇಜುಗಳನ್ನ ತೆರೆಯುವ ಮೂಲಕ ವಿಧ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗಿದ್ದಾರೆ ಅವರ ಚಿಂತನೆಯ ಸದಾಚಾರದಲ್ಲಿ ಭಕ್ತರು ಬದುಕ ಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಂಗಾಧರಪ್ಪ. ಸಾಧು ವೀರಶೈವ ಸಮಾಜ ಅಧ್ಯಕ್ಷ ವೀರಭದ್ರಪ್ಪ, ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರು ನಾಗರಾಜ್ ತಳಬಾಳ ಇಂಟರ್ನ್ಯಾಷನಲ್ ಸ್ಕೂಲ್ ಮುಖ್ಯಸ್ಥರಾದ ಹಾಲ್ಕುರಿಕೆ ಎಚ್ ಎನ್ ಗಂಗಾಧರ್ ಸದಸ್ಯರು ಎಲ್ಎಸಿ ಕಮಿಟಿ, ಘನಾನಂದ ಮೂರ್ತಿ ನಿವೃತ್ತ ಶಿಕ್ಷಕರು ನಂಜಯ್ಯ ಅಧ್ಯಕ್ಷರು ಸಾಧು ವೀರಶೈವ ಸಮಾಜ ತಿಪಟೂರು, ಬಸವರಾಜು ಹಾಲ್ಕುರಿಕೆ ದೇವೇಂದ್ರ ನಾಯಕ ಪ್ರಾಂಶುಪಾಲರು ವಿಜಯ ಎಚ್ ಬಿ ಮುಖ್ಯಶಿಕ್ಷಕರು ಉಪಸ್ಥಿತರಿದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB