ಸರಗೂರು: ಬಾವಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆಯ ವೇಳೆಯಲ್ಲಿ ಒಬ್ಬ ವ್ಯಕ್ತಿಯ ಬಳಿ ಕಪ್ಪುಕವರಿನಲ್ಲಿ ಹೂ ತೆನೆ ಬೀಜ ಮಿಶ್ರಿತ ಒಣ ಗಾಂಜಾ ಹೊಂದಿರುವುದು ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯನ್ನು ನಂಜನಗೂಡು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಬಕಾರಿ ಜಂಟಿ ಆಯುಕ್ತರು ಮೈಸೂರು ವಿಭಾಗ ಮೈಸೂರು ಹಾಗೂ ಅಬಕಾರಿ ಉಪ ಆಯುಕ್ತರು ಮೈಸೂರು ಗ್ರಾಮಾಂತರ ಜಿಲ್ಲೆ ಮತ್ತು ಅಬಕಾರಿ ಉಪ ಅಧೀಕ್ಷಕರು ನಂಜನಗೂಡು ಉಪ ವಿಭಾಗ ರವರ ನಿರ್ದೇಶನದಂತೆ ಅಬಕಾರಿ ಸಿಬ್ಬಂದಿಯೊಂದಿಗೆ ದಿನಾಂಕ ಸೋಮವಾರ ಸಮಯ 7.15 ಪಿ ಎಂ ರಂದು ಇಲಾಖಾ ವಾಹನದಲ್ಲಿ ಮಚೂರು ಗ್ರಾಮದಲ್ಲಿ ಗಸ್ತು ನಡೆಸುತ್ತಿದ್ದಾಗ ಅಬಕಾರಿ ನಿರೀಕ್ಷಕರು ಬಾವಲಿ ಚೆಕ್ ಪೋಸ್ಟ್ ರವರಿಗೆ ದೂರವಾಣಿ ಮೂಲಕ ಬಂದ ಮಾಹಿತಿ ಮೇರೆಗೆ ಅವರು ಚೆಕ್ ಪೋಸ್ಟ್ ನಲ್ಲಿ ತಪಾಸಣೆಯ ಮಾಡುತ್ತಿದ್ದರು. ಒಬ್ಬ ಆಸಾಮಿಯ ಬಳಿ ಕಪ್ಪುಕವರಿನಲ್ಲಿ ಹೂ ತೆನೆ ಬೀಜ ಮಿಶ್ರಿತ ಒಣ ಗಾಂಜಾ ಹೊಂದಿರುವುದರಿಂದ ಮುಂದಿನ ಕ್ರಮಕ್ಕಾಗಿ ದೂರವಾಣಿ ಕರೆ ಮಾಡಿ ಅಬಕಾರಿ ನಿರೀಕ್ಷಕರು ನಂಜನಗೂಡು ಉಪ ವಿಭಾಗ ಆದ ನನಗೆ ಮಾಹಿತಿ ನೀಡಿದ್ದು, ನಾನು ಸದರಿ ಸ್ಥಳಕ್ಕೆ ತೆರಳಿ ಅಬಕಾರಿ ನಿರೀಕ್ಷಕರು ಬಾವಲಿ ತನಿಖಾ ಠಾಣೆ ರವರೊಂದಿಗೆ ಅಕ್ರಮವಾಗಿ ಹೊಂದಿದ 99 ಗ್ರಾಂ ಒಣ ಗಾಂಜಾ ಜಪ್ತಿಪಡಿಸಿ ಹಾಗೂ ಆರೋಪಿಯಾದ ಕನಯ್ಯಾ ಚೌಹಾಣ್ ಅನ್ನು ದಸ್ತಗಿರಿ ಮಾಡಿ, ಎನ್ಡಿಪಿಎಸ್ ಕಾಯ್ದೆ 1985 ಅಡಿ ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನಂತರ ಬಂಧಿಕಾನೆಗೆ ಬಿಡಲಾಯಿತು ಎಂದು ನಂಜನಗೂಡು ಅಬಕಾರಿ ಇಲಾಖೆ ಅಧಿಕಾರಿ ಮುದಾಸರ್ ಬಾಷಾ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳಾದ ವಿಜಯಕುಮಾರ್ ಎಂ.ಬಿ. ಬಾವಲಿ ಚೆಕ್ ಪೋಸ್ಟ್, ಮುದಾಸರ್ ಭಾಷಾ ಕೆ. ಅಬಕಾರಿ ನಿರೀಕ್ಷಕರು ನಂಜನಗೂಡು ಉಪ ವಿಭಾಗ, ಶಿವಮೂರ್ತಿ ಅಬಕಾರಿ ಮುಖ್ಯಪೇದೆ, ಭಾರತಿ ಎಂ.ಹೆಚ್. ವಾಹನ ಚಾಲಕರು ಹಾಗೂ ಗೃಹರಕ್ಷಕರು ಇದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC