ತುರುವೇಕೆರೆ: ತಾಲೂಕಿನಲ್ಲಿ ಅಕ್ಟೋಬರ್ 23ರಂದು ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಪೊಲೀಸ್ ದಾಳಿ ಆಗಿದ್ದ ವೇಳೆ, ವಿಶ್ವಕರ್ಮ ಜನಾಂಗದ ಕುಮಾರ ಆಚಾರ್ ಎಂಬುವರ ಸಾವಾಗಿದ್ದು, ಈ ಸಾವು ಅನುಮಾನಾಸ್ಪದ ಸಾವು ಆಗಿದೆ. ಇದರ ತನಿಖೆ ಆಗಬೇಕೆಂದು ಪೊಲೀಸ್ ಠಾಣೆಯ ಎದುರು ಮಾಜಿ ಶಾಸಕರಾದ ಮಸಾಲ ಜೈರಾಮ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕುಮಾರ ಚಾರ್ ಸಾವಿಗೆ ಪೊಲೀಸ್ ಇಲಾಖೆಯೇ ನೇರ ಹೊಣೆ, ಈತನನ್ನು ಪೊಲೀಸ್ ಅಧಿಕಾರಿ ಮತ್ತು ಕೆಲ ಸಿಬ್ಬಂದಿ ಎಡೆಮಟ್ಟೆಯಿಂದ ಹೊಡೆದು ಸಾಯಿಸಿದ್ದಾರೆ ಎಂದು ನೇರ ಆರೋಪ ಮಾಡಿದ ಅವರು, ತನಿಖೆಗೆ ಒತ್ತಾಯಿಸಿದರು.
ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಕೂಡಲೇ ಗೃಹ ಮಂತ್ರಿಗಳು ಮಧ್ಯಪ್ರವೇಶಿಸಿ ತನಿಖೆಗೆ ಆದೇಶಿಸಬೇಕು ಹಾಗೂ ಕುಮಾರ್ ಚಾರ್ ಅವರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರುಗಳು, ಭಾರತೀಯ ಜನತಾ ಪಾರ್ಟಿ ತುರುವೇಕೆರೆ ಮಂಡಲ, ಮತ್ತು ವಿಶ್ವಕರ್ಮ ಸಮಾಜದ ಪ್ರಮುಖ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


