ತಿರುವನಂತಪುರಂ: ಕೇರಳದ ಓಣಂ ಬಂಪರ್ ಲಾಟರಿಯ 25 ಕೋಟಿ ರೂ. ಬಹುಮಾನ ಕರ್ನಾಟಕ ಮೂಲದ ವ್ಯಕ್ತಿಗೆ ಸಿಕ್ಕಿದೆ. ಮಂಡ್ಯದ ಪಾಂಡವಪುರ ನಿವಾಸಿ ಹಾಗೂ ಸ್ಕೂಟರ್ ಮೆಕ್ಯಾನಿಕ್ ಅಲ್ತಾಫ್ 500 ರೂಪಾಯಿಯ ಲಾಟರಿ ಟಿಕೆಟ್ ನಿಂದ ಕೋಟ್ಯಾದೀಶರಾಗಿದ್ದಾರೆ.
ಈ ಲಾಟರಿ ಬ್ಯುಸಿನೆಸ್ ನಿಂದ ಕೇರಳ ಸರ್ಕಾರಕ್ಕೆ 100 ಕೋಟಿಗಿಂತಲೂ ಹೆಚ್ಚು ಆದಾಯ ಹರಿದು ಬಂದಿದೆಯಂತೆ. ಅಕ್ಟೋಬರ್ 09ರಂದು ಪ್ರಕಟವಾದ ಲಾಟರಿ ಫಲಿತಾಂಶ ದಲ್ಲಿ ಮಂಡ್ಯ ಮೂಲದ ಅಲ್ತಾಫ್ 25 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ.
ಅಂದ ಹಾಗೆ 25 ಕೋಟಿ ರೂಪಾಯಿಯಲ್ಲಿ ಟಾಕ್ಸ್ ಗಳೆಲ್ಲವೂ ಕಳೆದ ನಂತೆ ಅಲ್ತಾಫ್ ಗೆ 17.5 ಕೋಟಿ ರೂಪಾಯಿ ಸಿಕ್ಕಿದೆಯಂತೆ 500 ರೂಪಾಯಿಯ ಒಟ್ಟು 71.43 ಲಕ್ಷ ಟಿಕೆಟ್ಗಳು ಮಾರಾಟವಾಗಿದ್ದು, ಇದರಿಂದ 357.15 ಕೋಟಿ ರೂ. ಆದಾಯ ಬಂದಿದೆ. ಇದರಲ್ಲಿ ಬಹುಮಾನದ ಹಣ, 28% ಜಿಎಸ್ಟಿ, ಮುದ್ರಣ ಮತ್ತು ವಿತರಣೆ ಸೇರಿದಂತೆ ಇತರ ವೆಚ್ಚಗಳನ್ನು ಹೊರತುಪಡಿಸಿದರೆ, ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ಸಿಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296