ಪಾವಗಡ: ಮನುಷ್ಯ ಪ್ರಕೃತಿಯೊಂದಿಗೆ ಬೆರೆತು ಜೀವನ ಸಾಗಿಸುವಲ್ಲಿ ಹಬ್ಬಗಳು ಮಹತ್ತರವಾದ ಪಾತ್ರ ವಹಿಸುತ್ತವೆ ಎಂದು ಪತಂಜಲಿ ಯೋಗ ಶಿಕ್ಷಕರಾದ ಎನ್.ಜಿ.ಶ್ರೀನಿವಾಸ್ ತಿಳಿಸಿದರು.
ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಇರುವ ಚೌಡೇಶ್ವರಿ ದೇವಾಲಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೇತಾಜಿ ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಸಂಕ್ರಾಂತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಹಿಂದೂ ಧರ್ಮದಲ್ಲಿ ಹಬ್ಬಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಹಿರಿಯರು ಆಚರಿಸುತ್ತಾ ಬಂದಿದ್ದಾರೆ.
ಹಿರಿಯರು ನಮ್ಮ ಜೀವನದಲ್ಲಿ ಪ್ರಕೃತಿಯನ್ನು ಜೋಡಿಸಿಕೊಂಡು ಮುಂದೆ ಸಾಗುವಲ್ಲಿ ಹಬ್ಬಗಳು ರೂಪುಗೊಂಡಿವೆ. ಇದರ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಹಬ್ಬಗಳ ಆಚರಣೆ ಮರೀಚಿಕೆ ಆಗಬಹುದು ಎಂದರು.
ಕಾರ್ಯಕ್ರಮದ ಭಾಗವಾಗಿ ಎಳ್ಳು,ಬೆಲ್ಲ, ಕಬ್ಬು, ಕಡಲೆ, ಅವರೆ ಇತ್ಯಾದಿಗಳನ್ನು ಜೋಡಿಸಿ ಬೋಗಿ ಹಬ್ಬ ಆಚರಿಸಲಾಯಿತು. ಆವರಣದಲ್ಲಿ ಬಣ್ಣಬಣ್ಣದ ರಂಗವಲ್ಲಿ ಬಿಡಿಸಲಾಗಿತ್ತು, ಭೋಗಿ ಬೆಂಕಿಯ ಬೆಳಕಿನಲ್ಲಿ ಕುಣಿದು ಎಳ್ಳುಬೆಲ್ಲವನ್ನು ಹಂಚಿ ಸಂಭ್ರಮಿಸಲಾಯಿತು.
ಕಾರ್ಯಕ್ರಮದಲ್ಲಿ ಮಧುಗಿರಿ ಸಂಘಚಾಲಕರಾದ ಜಯಪ್ರಕಾಶ್, ಹೋಬಳಿ ಪ್ರಮುಖ್ ಶ್ರೀಕಾಂತ್, ಬೆಳ್ಳಂದೂರು ಮುಖ್ಯಶಿಕ್ಷಕ ಪ್ರಸಾದ್, ಟಿ.ವೆಂಕಟೇಶ್, ನವೀನ್, ಬಾಲಾಜಿ, ಎಲ್.ವೆಂಕಟೇಶ್, ನಾಗಭೂಷಣ, ಎಲ್.ಕೆ.ರಾಘವೇಂದ್ರ, ಇತರರು ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy