ಸರಗೂರು: ತಾಲ್ಲೂಕಿನ ದೊಡ್ಡಬರಗಿ ಗ್ರಾಮದಲ್ಲಿ ಚಿಕ್ಕತಾಯಮ್ಮ ಎಂಬುವರು ಮನೆ ಕಳೆದುಕೊಂಡ ನೋವಿನಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬರಗಿ ಗ್ರಾಮದಲ್ಲಿ ನಡೆದಿದೆ.
ಸರಗೂರು ತಾಲ್ಲೂಕಿನ ಎಂ ಸಿ ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಬರಗಿ ಗ್ರಾಮದಲ್ಲಿ ನೆರೆ ಸಂತ್ರಸ್ತ ಮಹಿಳೆ ಚಿಕ್ಕತಾಯಮ್ಮ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. 2022ರಲ್ಲಿ ಮಳೆಯಿಂದಾಗಿ ಇವರ ಮನೆ ಕುಸಿದು ಬಿದ್ದು ಸಂಪೂರ್ಣವಾಗಿ ನಾಶಗೊಂಡಿತ್ತು.
ಮತ್ತೆ ಮನೆ ನಿರ್ಮಾಣಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿಸಲ್ಲಿಸಿದ್ದರು. ಈ ವೇಳೆ ತಾಯಮ್ಮ ಕುಟುಂಬ ಫಲಾನುಭವಿ ಎಂದು ಬಿ2 ಗ್ರೇಡ್ ನೀಡಲಾಗಿತ್ತು. ನಂತರ ಆದ ಬೆಳವಣಿಗೆಯಲ್ಲಿ ಅಧಿಕಾರಿಗಳು ಫಲಾನುಭವಿಗಳ ಪಟ್ಟಿಯಿಂದ ಚಿಕ್ಕತಾಯಮ್ಮ ಅವರನ್ನು ಬಿಡಲಾಗಿತ್ತು. ಮನೆ ಕಳೆದುಕೊಂಡಿದ್ದ ತಾಯಮ್ಮ ಸರ್ಕಾರದ ಆಸರೆಯ ಭರವಸೆಯಲ್ಲಿದ್ದರು. ಆದರೆ, ಅವರನ್ನು ಫಲಾನುಭವಿಗಳ ಪಟ್ಟಿಯಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದಿದ್ದರು. ಈ ಬಾರಿ ಮಳೆಯ ಸಂದರ್ಭದಲ್ಲಿ ತಾನೆಲ್ಲಿ ವಾಸ ಮಾಡಬೇಕು ಎಂದು ತೋಚದೇ ತೀವ್ರ ಚಿಂತೆಯಲ್ಲಿದ್ದರು ಎನ್ನಲಾಗಿದೆ.
ಇದನ್ನು ಆತ್ಮಹತ್ಯೆ ಎನ್ನಬೇಕೋ, ಅಧಿಕಾರಿಗಳ, ಸರ್ಕಾರಿ ಪ್ರಾಯೋಜಿತ ಕೊಲೆ ಎನ್ನಬೇಕೋ ತಿಳಿದಿಲ್ಲ, ಆದರೆ ಚಿಕ್ಕತಾಯಮ್ಮಳ ಎರಡು ಎಳೆಯ ವಯಸ್ಸಿನ ಕಂದಮ್ಮಗಳು ಹಾಗೂ ಅವರ ಕುಟುಂಬ ಇದೀಗ ಒಂದೆಡೆ ಮನೆ ಮತ್ತೊಂದೆಡೆ ಚಿಕ್ಕತಾಯಮ್ಮಳ ಅಮೂಲ್ಯವಾದ ಜೀವವನ್ನು ಕಳೆದುಕೊಂಡಿದ್ದಾರೆ ಅನ್ನೋ ಆಕ್ರೋಶದ ಮಾತುಗಳು ಕೂಡ ಘಟನೆಯ ಬೆನ್ನಲ್ಲೇ ಕೇಳಿ ಬಂದಿದೆ. ಈ ಘಟನೆ ಸಂಬಂಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


