ಪ್ರತಿಯೊಬ್ಬರಿಗೂ ಸ್ವಂತ ಮನೆ ಕಟ್ಟಿಕೊಳ್ಳುವ ಕನಸು ಸರ್ವೇಸಾಮಾನ್ಯ. ಸ್ವಂತ ಸೂರಿದ್ದರೆ ನೆಮ್ಮದಿಯ ಬದುಕು ಸಾಧ್ಯ ಎಂದುಕೊಳ್ಳುವ ಪ್ರತಿಯೊಬ್ಬರು ಸ್ವಂತ ನಿವಾಸಕ್ಕಾಗಿ ಜೀವನ ಪೂರ್ತಿ ಶ್ರಮಪಡುತ್ತಾರೆ. ಇಂತಹ ಬಡ ಕುಟುಂಬಗಳ ಕನಸು ನನಸು ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ “ಆವಾಸ್ ಯೋಜನೆ’ಯನ್ನು ಜಾರಿಗೆ ತಂದಿತ್ತು.
ಈ ಭಾರಿಯ ಬಜೆಟ್ ಮಂಡನೆಯಲ್ಲಿ ಸರ್ಕಾರ “ಪ್ರಧಾನಮಂತ್ರಿ ಆವಾಸ್ ಯೋಜನೆ’ಗೆ ನೀಡಲಾಗುವ ಅನುದಾನವನ್ನು ಶೇ.66ರಷ್ಟು ಹೆಚ್ಚಿಸಿದ್ದು, 79,000 ಸಾವಿರ ಕೋಟಿ ರೂ.ಗೆ ಏರಿಸಿದೆ. 2022-23ರ ಆಯವ್ಯಯದಲ್ಲಿ ಈ ಯೋಜನೆಗೆ 48,000 ಸಾವಿರ ಕೋಟಿ ನೀಡಲಾಗಿತ್ತು.
ಈ ಯೋಜನೆಯಡಿ ಗುಡ್ಡಗಾಡು ಪ್ರದೇಶದ ಫಲಾನುಭವಿಗಳಿಗೆ 1.30 ಲಕ್ಷ ರೂ. ನೀಡಿದರೆ, ಬಯಲುಸೀಮೆಯವರಿಗೆ 1.20 ಲಕ್ಷ ರೂ. ನೀಡಲಾಗುತ್ತದೆ. ಈ ಯೋಜನೆಗೆ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು ಇನ್ನಿತರರನ್ನು ಪರಿಗಣಿಸಲಾಗುತ್ತದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


