ವಡಗಾವಿಯ ತೆಗ್ಗಿನಗಲ್ಲಿ ನಿವಾಸಿ ಶೋಭಾ ವಲ್ಲೇಪೂರಕರ ಅನ್ನುವ 40 ವರ್ಷದ ಮಹಿಳೆ ಆಗಸ್ಟ್ 21 ರಂದು ಬೆಳಿಗ್ಗೆ 8:7 ಗಂಟೆಗೆ ಶಹಾಪೂರದಲ್ಲಿರುವ ಚಂದ್ರಕಲಾ ಹೇಡಾ ಇವರ ಮನೆಗೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ಮಹಿಳೆ ಚಹರೆ:4 ಅಡಿ 8 ಇಂಚು ಎತ್ತರ, ದುಂಡು ಮುಖ, ಗಿಡ್ಡ ಮೂಗು, ಸಡಪಾತಾಳ ಮೈಕಟ್ಟು, ಗೋದಿಗೆಂಪು ಮೈಬಣ್ಣ ಹೊಂದಿರುವ ಮಹಿಳೆ ನಾಪತ್ತೆ ವೇಳೆಯಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಸಾಡಿ ಹಳದಿ ಬಣ್ಣದ ಜಂಪರ್ ಧರಿಸಿದ್ದಳು..
ಕನ್ನಡ, ಹಿಂದಿ, ತೆಲಗು, ಮರಾಠಿ ಭಾಷೆ ಬಲ್ಲ ಮಹಿಳೆ ಸುಳಿವು ಸಿಕ್ಕವರು ತಕ್ಷಣವೇ ಶಹಾಪೂರ ಪೊಲೀಸ್ ಠಾಣೆ ದೂರವಾಣ ಸಂಖ್ಯೆ 9480804046, 0831-2405233 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲ ತಿಳಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


