ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನ ಬಿಬಿಎಂಪಿ ಅಧಿಕಾರಿಗಳು ಮುಂದುವರೆಸಿದ್ದು, ಈ ನಡುವೆ ತಮ್ಮ ಮನೆ ಡೆಮಾಲಿಷ್ ಮಾಡಲು ಮುಂದಾದ ಹಿನ್ನೆಲೆ ದಂಪತಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ನಗರದ ಕೆಆರ್ ಪುರಂ ಗಾಯತ್ರಿ ಲೇಔಟ್ ಈ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ದಂಪತಿ ವಿರೋಧ ವ್ಯಕ್ತಪಡಿಸಿದ್ದಾರೆ. ಮೈಮೇಲೆ ಪೆಟ್ರೋಲ್ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಮುಂದಾಗಿದ್ದಾರೆ.
40 ಲಕ್ಷ ಲೋನ್ ಮಾಡಿ ಮನೆ ಕಟ್ಟಿದ್ದೇನೆ. ಹೇಗೆ ಡೆಮಾಲಿಷನ್ ಮಾಡುತ್ತೀರಾ. ನಾವು ನಮ್ಮ ಮನೆ ಬಿಡಲ್ಲ. ನಮ್ಮ ಮನೆಯನ್ನ ಡೆಮಾಲಿಷನ್ ಮಾಡಲು ಬಿಡಲ್ಲ ಎಂದು ಪೆಟ್ರೋಲ್ ಕ್ಯಾನ್ ಹಿಡಿದು ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ.
ಪೊಲೀಸರು ದಂಪತಿ ಮನವೊಲಿಕೆಗೆ ಯತ್ನಿಸಿದ್ದು , ಸ್ಥಳಕ್ಕೆ ಸಿಎಂ ಬರುವಂತೆ ದಂಪತಿ ಪಟ್ಟು ಹಿಡಿದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


