ವಿಜಯಪುರ: ಮಂಗಳೂರಿನ ಆಟೋದಲ್ಲಿ ಉಂಟಾದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಬಾಯಿ ಮಾತಲ್ಲಿ ಕಠಿಣ ಕ್ರಮ ಎಂದು ಹೇಳಿದರೆ ಸಾಕಾಗಲ್ಲ, ಎನ್ ಕೌಂಟರ್ ಮಾಡಿ ಬುದ್ಧಿ ಕಲಿಸಬೇಕು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದ ಮಾದರಿ ಇಲ್ಲೂ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರಿಗೆ ಫ್ರೀಹ್ಯಾಂಡ್ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ. ಇಲ್ಲದಿದ್ದರೆ ಉಗ್ರರು ರಾಜಾರೋಷವಾಗಿ ದುಷ್ಕೃತ್ಯ ಎಸಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಒಳ್ಳೆಯವರು, ಆದರೆ ಕಠಿಣಕ್ರಮ ಕೈಗೊಳ್ಳುತ್ತಿಲ್ಲ. ಒಳ್ಳೆಯತನ ನಡೆಯಲ್ಲ, ಖಡಕ್ ಆಗಿ ನಿರ್ಣಯ ಕೈಗೊಳ್ಳಬೇಕು. ಸಿಎಂ ಬೊಮ್ಮಾಯಿ ಅದನ್ನು ಮಾಡುತ್ತೇನೆ, ಇದನ್ನು ಮಾಡುತ್ತೇನೆ ಅಂತಾರೆ. ಆದರೆ ಆದಷ್ಟು ಬೇಗ ಒಳ್ಳೆಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


