ಹೆಚ್.ಡಿ.ಕೋಟೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಹೆಚ್.ಡಿ.ಕೋಟೆ ಪಟ್ಟಣದ ಟಿಎಪಿಎಂಎಸ್ ಕಛೇರಿಯ ಆವರಣದಲ್ಲಿ ಮಂಜುನಾಥೇಶ್ವರ ಲೋಡರ್ಸ್ ಅಸೋಷಿಯನ್ ವತಿಯಿಂದ ಪ್ರತಿಭಟನಾ ಧರಣಿ ನಡೆಸಲಾಯಿತು.
ಸಂಘದ ಕಾರ್ಯದರ್ಶಿ ಜಿ.ಮಹದೇವು ಮಾತನಾಡಿ, ನಮಗೆ ಈಗ ನೀಡುತ್ತಿರುವ ಕೂಲಿ ಕಡಿಮೆ ಇದ್ದು, ನಮಗೆ ಒಂದು ಮೂಟೆಗೆ 25 ರೂ. ಕೂಲಿ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಅಧಿಕಾರಿಗಳು ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸದೆ ಮೀನಾ—ಮೇಷ ಎಣಿಸುತ್ತಿದ್ದಾರೆ. ಕೂಡಲೇ ಸಮಿತಿಯನ್ನು ರಚಿಸದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಮಹದೇವು, ಅಧ್ಯಕ್ಷ ಬಸವರಾಜು, ಸೋಮಣ್ಣ, ಸೋಮು, ಸಣ್ಣಪನಾಯಕ, ಮಾದಶೆಟ್ಟಿ, ರಾಜನಾಯಕ, ಎಲ್ಲಾ ಪ್ರಗತಿಪರ ಸಂಘಟನೆಯ ಮುಖಂಡರು ಹಾಗೂ ಬೀಮನಹಳ್ಳಿ ಬಸವರಾಜು, ಉಮೇಶ್, ಮಹದೇವಪ್ರಸಾದ್, ಸಂತೋಷ್ ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


