ಮಂಗಳೂರು: ಮಂಜುನಾಥ–ಅಣ್ಣಪ್ಪ ಸ್ವಾಮಿಯಿಂದ ದುಷ್ಟರ ಸಂಹಾರ ಗ್ಯಾರಂಟಿ ಅಂತ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಜೆಡಿಎಸ್ ಸತ್ಯಯಾತ್ರೆ ಸಮಾವೇಶದಲ್ಲಿ ಮಾತನಾಡಿದ ನಿಖಿಲ್, ಇಲ್ಲಿ ರಾಜಕೀಯ ಲಾಭದ ಲೆಕ್ಕಾಚಾರವೂ ಇಲ್ಲ. ಇಲ್ಲಿಗೆ ಯಾರೂ ರಾಜಕೀಯ ನಾಯಕರು-ಕಾರ್ಯಕರ್ತರಾಗಿ ಬಂದಿಲ್ಲ, ಎಲ್ಲರೂ ಭಕ್ತರಾಗಿ ಬಂದಿದ್ದೇವೆ ಎಂದರು.
ಧರ್ಮಸ್ಥಳ ಮಂಜುನಾಥ ಸ್ವಾಮಿ ಮುಂದೆ ಯಾವ ದುಷ್ಟ ಶಕ್ತಿಯೂ ಉಳಿಯಲ್ಲ. ಕ್ಷೇತ್ರದ ಆವರಣದ ಸುತ್ತಮುತ್ತ ಅಪಪ್ರಚಾರ-ಅನುಮಾನ ರೀತಿ ಬಿಂಬಿಸಿದ್ದಾರೆ. ತಾಳ್ಮೆಗೂ ಒಂದು ಮಿತಿ ಇದೆ, ನಾವು ಇನ್ನು ಕೈಕಟ್ಟಿ ಕೂರಲು ಆಗಲ್ಲ. ಖಾವಂದರಿಂದಾದ ಸಮಾಜ ಮುಖಿ ಕಾರ್ಯ ಸೂರ್ಯ-ಚಂದ್ರ ಇರುವರೆಗೂ ಅಜರಾಮರ. ಕ್ಷೇತ್ರದ ಮೇಲೆ ನಿರಂತರ ಅಪಪ್ರಚಾರ, ನಿಂದನೆ, ಹುನ್ನಾರ ನಡೆದಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC