ಕಲಬುರಗಿ: ಮರಳಿನಲ್ಲಿ ಎರಡು ವರ್ಷದ ಬಾಲಕನ ಶವ ಪತ್ತೆಯಾಗಿರುವ ಘಟನೆ ನಗರದ ಫಿರ್ದೋಸ್ ನಗರ ಬಡಾವಣೆಯ ಸುಣ್ಣದ ಬಟ್ಟಿಯ ಬಳಿಯ ನಿರ್ಮಾಣ ಹಂತದ ಕಟ್ಟಡದ ಬಳಿ ನಡೆದಿದೆ.
2 ವರ್ಷದ ಮಹ್ಮದ್ ಮುಝಾಮೀಲ್ ಮೃತ ದುರ್ದೈವಿ ಬಾಲಕ ಎಂದು ಗುರುತಿಸಲಾಗಿದೆ. ಮಹ್ಮದ್ ಮುಝಾಮೀಲ್ ನಿನ್ನೆ ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದ ಎನ್ನಲಾಗಿದೆ. ಇಂದು ಬೆಳಿಗ್ಗೆ ಮರಳಿನ ಗುಡ್ಡೆಯಿಂದ ಕಾರ್ಮಿಕರು ಮರಳು ತೆಗೆಯುವ ವೇಳೆ ಬಾಲಕನ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ
ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹ ಇಲ್ಲಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಆಂಟೋನಿ, ಬೇಗೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700